ರೈತರ ಜೊತೆಗಿನ 9ನೇ ಸುತ್ತಿನ ಮಾತುಕತೆ ವಿಫಲ; ಮತ್ತೆ ಸಭೆ ಯಾವಾಗ?

By Suvarna NewsFirst Published Jan 15, 2021, 6:32 PM IST
Highlights

ಕೇಂದ್ರ ಸರ್ಕಾರ ರೈತರ ನಡುವಿನ ಮಾತುಕತೆಗಳು ಒಂದರ ಮೇಲೊಂದರಂತೆ ವಿಫಲಗೊಳ್ಳುತ್ತಿದೆ. ಇಂದು ನಡೆಸಿದ 9ನೇ ಸುತ್ತಿನ ಮಾತುಕತೆ ಕೂಡ ಫಲಪ್ರದವಾಗಿಲ್ಲ. ಸುಪ್ರೀಂ ಮಧ್ಯಪ್ರವೇಶಿಸಿದ ಬಳಿಕ ನಡೆದ ಮೊದಲ ಮಾತುಕತೆ ವಿಫಲವಾಗಲು ಕಾರಣವೇನು?
 

ನವದೆಹಲಿ(ಜ.15): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ ಮುಂದುವರಿದಿದೆ. ಇದರ ನಡುವೆ ಕೇಂದ್ರ ನಡೆಸಿದ 9ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದೀಗ ಜನವರಿ 19 ರಂದು 10ನೇ ಸುತ್ತಿನ ಮಾತುಕತೆ ನಡೆಸಲು ಕೇಂದ್ರ ದಿನಾಂಕ ನಿಗದಿ ಪಡಿಸಿದೆ.

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನೀಡಿದರೂ ನಿಲ್ಲದ ರೈತರ ಹೋರಾಟ!.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ನಡೆದ ಮೊದಲ ಸಭೆ ಇದಾಗಿತ್ತು. ಆದರೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯನ್ನು ರೈತರು ತಿರಸ್ಕರಿಸಿದ್ದಾರೆ. ಇತ್ತ ಕೇಂದ್ರದ ಜೊತೆಗಿನ ಮಾತುಕತೆಯಲ್ಲೂ ರೈತರು ತಮ್ಮ ಪಟ್ಟು ಬಿಡುತ್ತಿಲ್ಲ. ಹೀಗಾಗಿ 9ನೇ ಸುತ್ತಿನ ಮಾತುಕತೆ ವಿಫಲಗೊಂಡಿದೆ. ಸಭೆ ಬಳಿಕ ಮಾತನಾಡಿದ ರೈತ ಮುಖಂಡ, ಇಂದಿನ ಸಬೆ ಶೇಕಡಾ 120ರಷ್ಟು ವಿಫಲಗೊಂಡಿದೆ ಎಂದಿದ್ದಾರೆ.

ಅಗತ್ಯ ಸರಕು ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ. ಆದರೆ ನಮ್ಮ ಬೇಡಿಕೆ 3 ಕಾಯ್ದೆಗಳನ್ನೇ ಹಿಂಪಡೆಯಿರಿ ಅನ್ನೋದು ಮಾತ್ರ ಎಂದು ರೈತ ಸಂಘಟನೆ ನಾಯಕು ಹೇಳಿದ್ದಾರೆ. ಕೇಂದ್ರ ಕೃಷಿ ಕಾಯ್ದೆಯ ಸಾಧಕ ಬಾಧಕ ಅಧ್ಯಯನ ನಡೆಸಿದ ಬಳಿಕ ಕೃಷಿ ಕಾಯ್ದೆ ಜಾರಿ ಕುರಿತು ನಿರ್ಧಾರ ಕೈಗೊಳ್ಳಲು ಸುಪ್ರೀಂ ಸೂಚಿಸಿದೆ. ಅಲ್ಲೀವರಗೆ ಕಾಯ್ದೆಯನ್ನು ಸುಪ್ರೀಂ ತಡೆ ಹಿಡಿದಿದೆ.

ಇತ್ತ ಜನವರಿ 26 ರಂದು ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ಪರೇಡ್ ಮಾಡುವುದು ಖಚಿತ ಎಂದಿದ್ದಾರೆ. 3 ಕೃಷಿ ಕಾಯ್ದೆಯಲ್ಲಿನ ತಪ್ಪುಗಳನ್ನು ಕೇಂದ್ರ ಕೇಳುತ್ತಿದೆ. ನಮಗೆ 3 ಕಾಯ್ದೆಗಳೇ ಬೇಡ, ಹಿಂಪಡೆಯಲು ನಮ್ಮ ಹೋರಾಟ ಎಂದು ರೈತ ಸಂಘಟನೆ ಹೇಳಿದೆ. ಇಂದಿನ ಸಭೆಯಲ್ಲಿ 40 ರೈತ ಸಂಘಟನೆಗಳ ಮುಖಂಡರು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೈ ಸಚಿವ ಪಿಯೂಷ್ ಗೋಯಲ್, ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಪಾಲ್ಗೊಂಡಿದ್ದರು.

click me!