ಉತ್ತರ ಪ್ರದೇಶದಲ್ಲಿ ಹಗಲು ಲಾಕ್‌ಡೌನ್‌ ರದ್ದು!

By Kannadaprabha NewsFirst Published May 31, 2021, 9:43 AM IST
Highlights

* ಸೋಂಕು ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಹೇರ​ಲಾ​ಗಿ​ರುವ ಹಗಲು ಲಾಕ್‌​ಡೌನ್‌ ನಿರ್ಬಂಧ​ ಸಡಿಲ

* 600ಕ್ಕಿಂತ ಕಡಿಮೆ ಸಕ್ರಿಯ ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಿಗೆ ಈ ನಿರ್ಬಂಧ ಸಡಿಲಿಕೆ

* ಈ ಪಟ್ಟಿಯಲ್ಲಿ ಲಖನೌ, ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ 20 ಜಿಲ್ಲೆಗಳು

ಲಖ​ನೌ(ಮೇ.31): ಸೋಂಕು ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಹೇರ​ಲಾ​ಗಿ​ರುವ ಹಗಲು ಲಾಕ್‌​ಡೌನ್‌ ನಿರ್ಬಂಧ​ವನ್ನು ಜೂ.1ರಿಂದಲೇ ಸಡಿ​ಲ​ಗೊ​ಳಿ​ಸ​ಲಾ​ಗು​ತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿ​ಸಿದೆ. 600ಕ್ಕಿಂತ ಕಡಿಮೆ ಸಕ್ರಿಯ ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಿಗೆ ಈ ನಿರ್ಬಂಧ ಸಡಲಿಕೆ ಅನ್ವಯವಾಗಲಿದೆ.

ಈ ಪಟ್ಟಿಯಲ್ಲಿ ಲಖನೌ, ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ 20 ಜಿಲ್ಲೆಗಳಿದ್ದು, ಇಲ್ಲಿ ಸೋಮ​ವಾ​ರ​ದಿಂದ ಶುಕ್ರ​ವಾ​ರ​ದ​ವ​ರೆಗೆ ಬೆಳಗ್ಗೆ 7 ಗಂಟೆ​ಯಿಂದ ರಾತ್ರಿ 7 ಗಂಟೆ​ವ​ರೆಗೆ ಮಾರು​ಕಟ್ಟೆಮತ್ತು ಅಂಗ​ಡಿ-ಮುಂಗ​ಟ್ಟು​ಗ​ಳನ್ನು ತೆರೆ​ಯಲು ಅವ​ಕಾಶ ಕಲ್ಪಿ​ಸ​ಲಾ​ಗು​ತ್ತದೆ ಎಂದು ರಾಜ್ಯದ ಮುಖ್ಯ ಕಾರ್ಯ​ದರ್ಶಿ ತಿಳಿ​ಸಿ​ದ್ದಾರೆ.

Latest Videos

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಆದರೆ, ರಾಜ್ಯಾ​ದ್ಯಂತ ಜೂ.1ರ ಬಳಿ​ಕವೂ ರಾತ್ರಿ ಕರ್ಪ್ಯೂ ಮತ್ತು ವಾರಾಂತ್ಯದ (ಶನಿವಾರ-ಭಾನುವಾರ) ಕರ್ಫ್ಯೂ ಮುಂದು​ವ​ರಿ​ಯ​ಲಿದೆ.

ಮಹಾರಾಷ್ಟ್ರ: 15 ದಿನ ಲಾಕ್‌ಡೌನ್‌ ವಿಸ್ತರಣೆ

ಹರ್ಯಾಣ, ಒಡಿಶಾ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳು ಲಾಕ್‌ಡೌನ್‌ ವಿಸ್ತರಿಸಿವೆ. ಭಾನುವಾರ ಕೇವಲ 18 ಸಾವಿರ ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಇದು ಎರಡೂವರೆ ತಿಂಗಳ ಕನಿಷ್ಠ. ಆದರೂ ರಾಜ್ಯ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!