ಮೋದಿ ‘ಮನ್‌ ಕೀ ಬಾತ್‌’ ರಾಮಾಯಣ, ಮಹಾ ಭಾರತ ಧಾರಾವಾಹಿಗಿಂತ ಜನಪ್ರಿಯ: ತ್ರಿಪುರಾ ಸಿಎಂ

By Kannadaprabha NewsFirst Published Jan 1, 2024, 12:47 PM IST
Highlights

ಇತ್ತೀಚಿನ ದಿನಗಳಲ್ಲಿ ಅವರೆಲ್ಲ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿಯವರ ಮನ್ ಕೀ ಬಾತ್ ಕೇಳಲು ಧಾವಿಸುತ್ತಿರುವುದನ್ನು ನಾವು ನೋಡುತ್ತೇವೆ. ಈ ಕಾರ್ಯಕ್ರಮ ಧಾರಾವಾಹಿಗಿಂತ ಹೆಚ್ಚು ಜನಪ್ರಿಯವಾಗಿದೆ ಎಂದರು.

ಅಗರ್ತಲಾ (ಜನವರಿ 1, 2024): 1980ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಮೆಗಾ ಧಾರಾವಾಹಿಗಳಾದ ‘ರಾಮಾಯಣ’ ಮತ್ತು ‘ಮಹಾಭಾರತ’ಕ್ಕಿಂತ ಪ್ರಧಾನಿ ನರೇಂದ್ರ ಮೋದಿಯವರ ‘ಮನ್‌ ಕೀ ಬಾತ್‌ ಕಾರ್ಯಕ್ರಮ’ವೇ ಜನಸಾಮಾನ್ಯರಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಹೇಳಿದ್ದಾರೆ.

ತಮ್ಮ ತವರು ಕ್ಷೇತ್ರವಾದ ಟೌನ್‌ ಬರ್ದೋವಾಲಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಭಾನುವಾರ ಮನ್‌ ಕೀ ಬಾತ್‌ನ 108ನೇ ಸಂಚಿಕೆಯನ್ನು ಆಲಿಸಿದ ಬಳಿಕ ಮಾತನಾಡಿದ ಅವರು ‘ನಮ್ಮ ತಾಯಂದಿರು ಮತ್ತು ಸಹೋದರಿಯರು ದೂರದರ್ಶನದಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಿದ್ದ 1980ರ ದಶಕದ ಮಹಾಭಾರತ ಮತ್ತು ರಾಮಾಯಣ ಧಾರಾವಾಹಿ ನೋಡಲು ಟಿವಿ ಮುಂದೆ ಧಾವಿಸುವುದನ್ನು ನೋಡುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಅವರೆಲ್ಲ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿಯವರ ಮನ್ ಕೀ ಬಾತ್ ಕೇಳಲು ಧಾವಿಸುತ್ತಿರುವುದನ್ನು ನಾವು ನೋಡುತ್ತೇವೆ. ಈ ಕಾರ್ಯಕ್ರಮ ಧಾರಾವಾಹಿಗಿಂತ ಹೆಚ್ಚು ಜನಪ್ರಿಯವಾಗಿದೆ’ ಎಂದರು.

ಇದನ್ನು ಓದಿ: 108th Mann Ki Baat: 'ರಾಮ ಭಜನೆ' ಮಾಡಲು ಮೋದಿ ಮನವಿ; 108 ಸಂಖ್ಯೆಯ ಮಹತ್ವದ ಬಗ್ಗೆ ಪ್ರಧಾನಿ ಹೇಳಿದ್ದೀಗೆ..

click me!