ಮೋದಿಯನ್ನು ದ್ವೇಷಿಸುವುದು ಸಲ್ಲದು: ಕಾಂಗ್ರೆಸ್‌ ನಾಯಕ; ರಾಮನನ್ನು ವಿರೋಧಿಸುವವರು ನಾಸ್ತಿಕರು ಎಂದ ಆಚಾರ್ಯ

Published : Jan 01, 2024, 12:16 PM IST
ಮೋದಿಯನ್ನು ದ್ವೇಷಿಸುವುದು ಸಲ್ಲದು: ಕಾಂಗ್ರೆಸ್‌ ನಾಯಕ; ರಾಮನನ್ನು ವಿರೋಧಿಸುವವರು ನಾಸ್ತಿಕರು ಎಂದ ಆಚಾರ್ಯ

ಸಾರಾಂಶ

ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ ಎಂದು ತಮ್ಮದೇ ಕಾಂಗ್ರೆಸ್‌ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಜನವರಿ 1, 2024): ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬಹುದು ಮತ್ತು ಅವರ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಮೋದಿಯನ್ನು ದ್ವೇಷಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು ‘ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ’ ಎಂದು ತಮ್ಮದೇ ಕಾಂಗ್ರೆಸ್‌ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ರಾಮ ಭಜನೆ ಹಾಡಿ ಶೇರ್‌ ಮಾಡಿ: ಮನ್ ಕೀ ಬಾತ್‌ನಲ್ಲಿ ಮೋದಿ ಕರೆ

ಅಲ್ಲದೇ ‘ರಾಮನನ್ನು ವಿರೋಧಿಸುವವರು ನಾಸ್ತಿಕರು. ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣವನ್ನು ಪಡೆದವರು ಅದೃಷ್ಟವಂತರು ಮತ್ತು ಹೋಗದಿದ್ದರೆ ಅದು ಅವರ ದೌರ್ಭಾಗ್ಯ’ ಎಂದು ಮಂದಿರ ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿರುವ ಟಿಎಂಸಿ ಹಾಗೂ ಎಡಪಕ್ಷಗಳನ್ನು ಟೀಕಿಸಿದ್ದಾರೆ.

ಪಾಕಿಸ್ತಾನಿಗಳು ಕೂಡ ರಾಮನನ್ನು ದ್ವೇಷಿಸಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಭಾರತದಲ್ಲಿ ದ್ವೇಷ ಸರಿಯೇ ಎಂದೂ ತಮ್ಮದೇ ನಾಯಕರಿಗೆ ಕುಟುಕಿದ್ದಾರೆ.

ಇದನ್ನು ಓದಿ: ಕ್ಯೂಆರ್ ಕೋಡ್ ಮೂಲಕ ರಾಮ ಮಂದಿರ ದೇಣಿಗೆ ಸಂಗ್ರಹ ವಂಚನೆ ಬಯಲು, VHP ಎಚ್ಚರಿಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್