ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ಕಹಳೆ; ಇದು ದೀಪಾವಳಿ!

By Kannadaprabha NewsFirst Published Oct 29, 2019, 8:05 AM IST
Highlights

ಗಡಿನಾಡು ಭಾಗದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಕನ್ನಡದ ಆಸ್ಮಿತೆ ಪ್ರಶ್ನೆ ಎದುರಾಗುತ್ತದೆ. ಕೇರಳದ ಮಂಜೇಶ್ವರ ಶಾಸಕ ಖಮರುದ್ದೀನ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ. 

ಕಾಸರಗೋಡು (ಅ. 29): ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ಯುಡಿಎಫ್‌ ಶಾಸಕ ಎಂ.ಸಿ.ಖಮರುದ್ದೀನ್‌, ಸೋಮವಾರ ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ವಿಶೇಷವೆಂದರೆ ಖಮರುದ್ದೀನ್‌ ಅವರು ಕನ್ನಡದಲ್ಲಿ ಪ್ರಮಾನ ವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದರು.

ನಿರಾಶ್ರಿತರೊಂದಿಗೆ ದೀಪಾವಳಿ ಆಚರಿಸಿದ ಕಾರಜೋಳ

ಸೋಮವಾರ ತಿರುವನಂತಪುರಂನಲ್ಲಿರುವ (ರಾಜಭವನದಲ್ಲಿ ) ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ ನೂತನ ನಾಲ್ವರು ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಂಜೇಶ್ವರ ಮುಸ್ಲಿಂ ಲೀಗ್‌ ಶಾಸಕರಾಗಿದ್ದ ಬಿಪಿ ಅಬ್ದುಲ್‌ ರಝಾಕ್‌ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅ.21 ರಂದು ಉಪಚುನಾವಣೆ ನಡೆದಿತ್ತು.

ತಮ್ಮ ಸಮೀಪದ ಪ್ರತಿಸ್ಫರ್ಧಿ ಬಿಜೆಪಿಯ ರವೀಶ್‌ ತಂತ್ರಿಯನ್ನು 7,923 ಮತಗಳ ಅಂತರದಿಂದ ಸೋಲಿಸಿದ್ದರು. ತುಳು ಹಾಗೂ ಕನ್ನಡ ಭಾಷಿಗರು ಹೆಚ್ಚಾಗಿರುವುದರಿಂದ ಭಾಷಾ ವಿಚಾರ ಕೂಡ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿತ್ತು. 

"

click me!