ಇಂಫಾಲ ವಿಮಾನ ನಿಲ್ದಾಣ ಬಳಿ ನಿಗೂಢ ವಸ್ತುವೊಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಹಾರಾಟ ನಡೆಸಿರುವುದು ಕಂಡು ಬಂದಿತ್ತು. ಇದರಿಂದ ಅಲ್ಲಿಯ ವಿಮಾನ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿತ್ತು.
ಇಂಫಾಲ (ಮಣಿಪುರ) (ನವೆಂಬರ್ 21, 2023) ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದ ಇಂಫಾಲ್ ವಿಮಾನ ನಿಲ್ದಾಣದ ಬಳಿ ಭಾನುವಾರ ನಿಗೂಢ ವಸ್ತುವೊಂದು ಹಾರಾಟ ನಡೆಸಿದ್ದನ್ನು ಭಾರತೀಯ ವಾಯುಪಡೆ (ಐಎಎಫ್) ಗಂಭೀರವಾಗಿ ಪರಿಗಣಿಸಿದ್ದು, ಅದರ ಶೋಧಕ್ಕೆ 2 ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಆದರೆ ಈವರೆಗೂ ಯಾವುದೇ ನಿಗೂಢ ವಸ್ತುವಿನ ಪತ್ತೆಯಾಗಿಲ್ಲ ಎಂದು ರಕ್ಷಣಾ ಮೂಲಗಳು ಸೋಮವಾರ ಸಂಜೆ ಹೇಳಿವೆ.
‘ನಿಗೂಢ ವಸ್ತುವಿನ ಹಾರಾಟದ ಮಾಹಿತಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ 1 ರಫೇಲ್ ಯುದ್ಧ ವಿಮಾನವನ್ನು ಪತ್ತೆಗೆ ಕಳುಹಿಸಲಾಗಿತ್ತು. ವಿಮಾನಗಳು ಸುಧಾರಿತ ಸಂವೇದಕಗಳನ್ನು ಹೊಂದಿದೆ. ಆದರೆ ಸ್ಥಳದಲ್ಲಿ ಯಾವುದೇ ವಸ್ತು ಇದ್ದ ಬಗ್ಗೆ ತಿಳಿದು ಬಂದಿಲ್ಲ. ಮೊದಲ ವಿಮಾನ ಹಿಂತಿರುಗಿದ ನಂತರ ಮತ್ತೊಂದು ರಫೇಲ್ ಕಳುಹಿಸಲಾಗಿದೆ. ಆದರೆ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಅಪರಿಚತ ವಸ್ತು ಕಂಡು ಬಂದಿಲ್ಲ’ ಎಂದು ಮೂಲಗಳು ಹೇಳಿವೆ.
undefined
ಇದನ್ನು ಓದಿ: ಫೆಸಿಫಿಕ್ ಮಹಾಸಾಗರದ ಬಳಿ ಕೊನೆಗೂ ಪತ್ತೆಯಾದ್ರಾ Aliens..! ಪೈಲಟ್‌ಗಳು ಹೇಳಿದ್ದೇನು..?
‘ಇಂಫಾಲ ವಿಮಾನ ನಿಲ್ದಾಣದ ಬಳಿ ನಿಗೂಢ ವಸ್ತುಗಳು ಹಾರಾಟ ನಡೆಸುವ ವಿಡಿಯೋಗಳು ಪತ್ತೆಯಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಇಂಫಾಲ ವಿಮಾನ ನಿಲ್ದಾಣ ಬಳಿ ನಿಗೂಢ ವಸ್ತುವೊಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಹಾರಾಟ ನಡೆಸಿರುವುದು ಕಂಡು ಬಂದಿತ್ತು. ಇದರಿಂದ ಅಲ್ಲಿಯ ವಿಮಾನ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿತ್ತು.
ಇದನ್ನೂ ಓದಿ: 1,000 ವರ್ಷಗಳಷ್ಟು ಹಳೆಯದಾದ ವಿಚಿತ್ರ ಶವಗಳ ಪಳೆಯುಳಿಕೆ ಪತ್ತೆ: ಏಲಿಯೆನ್ಸ್ ಎಂದು ತಜ್ಞರ ವಾದ!
UFO ಕುರಿತು ನಾವು ಇಲ್ಲಿಯವರೆಗೆ ತಿಳಿದಿರುವ ವಿವರ..