ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಿಗೂಢ ಸಾವು; ಪತ್ನಿಗೆ ಹೇಳಿದ ಆ ಮಾತೇ ಕೊನೆ!

Kannadaprabha News   | Kannada Prabha
Published : Nov 26, 2026, 06:21 AM IST
Mangaluru man Shadrach Emmanuel dies in israel

ಸಾರಾಂಶ

Mangaluru man Shadrach Emmanuel dies under mysterio in israel ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ಶಡ್ರಕ್ ಇಮ್ಯಾನುವೆಲ್ ನಿಗೂಢವಾಗಿ ಮೃತಪಟ್ಟಿದ್ದಾರೆ. ಒಂದು ತಿಂಗಳ ಬಳಿಕ ಅವರ ಮೃತದೇಹ ಭಾರತಕ್ಕೆ ತರಲಾಗಿದ್ದು, ಸಾವಿನ ಬಗ್ಗೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು(ನ.26): ಇಸ್ರೇಲ್‌(Israel)ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು(Mangaluru) ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರ ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಆಗ್ರಹಿಸಿದ್ದಾರೆ.

ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ ಮೃತ ವ್ಯಕ್ತಿ

ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್(Shadrach Emmanuel) (41) ಮೃತ ವ್ಯಕ್ತಿ. ಕಳೆದ 1.5 ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಶಡ್ರಕ್, ಆರಂಭದಲ್ಲಿ ಟೆಲ್ ಅವೀವ್‌(Tel Aviv)ನ ಇಸ್ರೇಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಝರೆತ್ ಸಮೀಪದ ನೊಫ್ ಹಗಲಿಲ್‌ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿ(UCT Liquid Solution Company)ಗೆ ಉದ್ಯೋಗ ಬದಲಾಯಿಸಿದ್ದರು.

ಒಂದು ತಿಂಗಳ ಬಳಿಕ ಮೃತದೇಹ ಭಾರತಕ್ಕೆ ರವಾನೆ

ಅ.16ರಂದು ರಾತ್ರಿ ಶಡ್ರಕ್ ತಮ್ಮ ಪತ್ನಿಗೆ ಕೊನೆಯ ಸಂದೇಶ ಕಳುಹಿಸಿದ್ದರು. ಅದಕ್ಕೂ ಮೊದಲು ಮನೆಯವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು. ಬಳಿಕ ನಾಪತ್ತೆಯಾಗಿದ್ದರು. ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, 1 ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿದೆ.

ಶಡ್ರಕ್ ನಾಪತ್ತೆಯಾದ ಒಂದು ವಾರದ ಬಳಿಕ ಅವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಕುಟುಂಬಕ್ಕೆ ಸಿಕ್ಕಿದೆ. ಅದಾಗಿ ತಿಂಗಳ ಬಳಿಕ ಮೃತದೇಹ ಭಾರತಕ್ಕೆ ಕಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಮಂಗಳವಾರ ರಾತ್ರಿ ಶಡ್ರಕ್ ಮೃತದೇಹ ಊರಿಗೆ ತಲುಪಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಭಾರತೀಯರು ಉದ್ಯೋಗಲ್ಲಿದ್ದಾರೆ. ಆದರೆ ಶಡ್ರಕ್ ಅವರ ನಿಗೂಢ ಸಾವಿನಿಂದಾಗಿ ಆತಂಕ ಸೃಷ್ಟಿಯಾಗಿದೆ.

ಶಡ್ರಕ್ ಸಾವಿನ ಸುತ್ತ ಅನುಮಾನದ ಹುತ್ತ

ಶಡ್ರಕ್ ಸಾವಿನ ಸುತ್ತಲೂ ಅನುಮಾನಗಳು ಮೂಡಿವೆ. ಇದು ಸಹಜ ಸಾವಲ್ಲ, ಕೊಲೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಇಸ್ರೇಲ್‌ನಲ್ಲಿ ಸರಿಯಾಗಿ ತನಿಖೆ ನಡೆಸಿ ಸಾವಿನ ಹಿಂದಿನ ಸತ್ಯ ಬಹಿರಂಗಪಡಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Uttar Pradesh Poll Survey: ಈಗಲೇ ಯುಪಿ ಚುನಾವಣೆ ನಡೆದರೆ ಬಿಜೆಪಿ ಸ್ಥಾನ ಕುಸಿತ, ಎಸ್ಪಿಗೆ ಲಾಭ!
ಪಂಜಾಬ್‌ನಲ್ಲಿ ಒಂದಾದ ಅಕಾಲಿ-ಕಮಲ; ವಿರೋಧಿ ಪಾಳಯದಲ್ಲಿ 'ಸ್ಯಾಫ್ರನ್' ನಡುಕ! ಕೈಗೆ ಬಂದ ಅವಕಾಶ ತಪ್ಪಿಸಿಕೊಳ್ಳುತ್ತಾ ಆಪ್?