Uttar Pradesh Poll Survey: ಈಗಲೇ ಯುಪಿ ಚುನಾವಣೆ ನಡೆದರೆ ಬಿಜೆಪಿ ಸ್ಥಾನ ಕುಸಿತ, ಎಸ್ಪಿಗೆ ಲಾಭ!

Kannadaprabha News   | Kannada Prabha
Published : Nov 26, 2026, 05:57 AM IST
Uttar Pradesh Poll Survey

ಸಾರಾಂಶ

ಉತ್ತರಪ್ರದೇಶದಲ್ಲಿ ಈಗಲೇ ಚುನಾವಣೆ ನಡೆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಗೆ ಸಮಾಜವಾದಿ ಪಕ್ಷ ತೀವ್ರ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಮುಖ್ಯಮಂತ್ರಿ ಹುದ್ದೆಗೆ ಯೋಗಿ ಆದಿತ್ಯನಾಥ್ ಅವರೇ ಮೊದಲ ಆಯ್ಕೆಯಾಗಿದ್ದಾರೆ.

  • ಬಿಜೆಪಿಗೆ ಕಳೆದ ಬಾರಿ 255, ಈ ಬಾರಿ 175- 215 ಸ್ಥಾನ
  • ಸಮಾಜವಾದಿ ಪಕ್ಷಕ್ಕೆ ಈ ಬಾರಿ ಕನಿಷ್ಠ 165 ಸ್ಥಾನ ನಿರೀಕ್ಷೆ- ಕಾಂಗ್ರೆಸ್‌ ಈಗಲೂ ಯುಪಿಯಲ್ಲಿ ಬಹುತೇಕ ಮೂಲೆಗುಂಪು
  • -ಸ್ಕೋರ್‌ ಸಂಸ್ಥೆಯ ಸಮೀಕ್ಷೆಯಲ್ಲಿ ಅಚ್ಚರಿಯ ಅಂಶ ಬೆಳಕಿಗೆ

ನವದೆಹಲಿ: ವಿಧಾನಸಭೆ ಚುನಾವಣೆಯ ಹೊಸ್ತಿನಲ್ಲಿರುವ ಉತ್ತರಪ್ರದೇಶದಲ್ಲಿ ಒಂದು ವೇಳೆ ತಕ್ಷಣಕ್ಕೆ ಎಲೆಕ್ಷನ್‌ ನಡೆದರೆ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಮಾಜವಾದಿ ಪಕ್ಷ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.‘ಸ್ಕೋರ್‌ ಜನಾಭಿಪ್ರಾಯ’ ಸಂಗ್ರಹದ ಪ್ರಕಾರ 403 ಸಂಖ್ಯಾಬಲದ ಯುಪಿ ವಿಧಾನಸಭೆಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ 177-215, ಎಸ್ಪಿ 160-202, ಬಿಜೆಪಿ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) 10, ಎಡಿ (ಎಸ್‌)5, ಎಸ್‌ಬಿಎಸ್‌ಪಿ-3 ರಿಂದ 5, ನಿಷಾದ್‌ 1ರಿಂದ 3, ಕಾಂಗ್ರೆಸ್‌ 2, ಜೆಡಿಎಲ್‌-2, ಬಿಎಸ್ಪಿ-1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಉಳಿದ 42 ಸ್ಥಾನಗಳ ಕುರಿತು ನಿರ್ಧರಿಸುವುದು ಕಷ್ಟ. ಒಂದು ವೇಳೆ ಎಸ್ಪಿ-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದರೆ 174-219, ಎನ್‌ಡಿಎ 181-226, ಜೆಡಿಎಲ್‌-2, ಬಿಎಸ್ಪಿ-1 ಸ್ಥಾನ ಗೆಲ್ಲಲಿದೆ. 45 ಸ್ಥಾನಗಳಲ್ಲಿ ಸೋಲು-ಗೆಲುವು ನಿರ್ಧಾರ ಕಷ್ಟ ಎಂದು ಸಮೀಕ್ಷೆ ಹೇಳಿದೆ.

ಈ ಜನಾಭಿಪ್ರಾಯದ ಪ್ರಕಾರ ಬಿಜೆಪಿ ಮತ ಪ್ರಮಾಣ ಶೇ.36.69, ಎಸ್ಪಿ ಮತಗಳಿಕೆ ಪ್ರಮಾಣ ಶೇ.36.98ರಷ್ಟು ಇರಲಿದೆ. ಬಿಎಸ್ಪಿ ಶೇ.11.45ರಷ್ಟು ಮತಗಳಿಸಲಿದೆ.

ಒಂದು ವೇಳೆ ಎಸ್‌ಪಿ- ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಎಸ್‌ಪಿ 160- 202, ಕಾಂಗ್ರೆಸ್‌ ಕೇವಲ 2 ಸ್ಥಾನಕ್ಕೆ ಸೀಮಿತವಾಗಬಹುದು ಎಂದು ಸಮೀಕ್ಷೆ ಹೇಳಿದೆ.

ಯೋಗಿಯೇ ಸಿಎಂ ಹುದ್ದೆಗೆ ಬೆಸ್ಟ್‌:

ಆದರೆ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಅವರಿಗೇ ಬೆಸ್ಟ್‌ ಎಂದಿದ್ದಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರು. ಶೇ.35.29ರಷ್ಟು ಮಂದಿ ಯೋಗಿ ಬೆಂಬಲಿಸಿದರೆ, ಶೇ.26.50ರಷ್ಟು ಮಂದಿ ಅಖಿಲೇಶ್‌, ಶೇ.8.59 ಮಂದಿ ಮಾಯಾವತಿ ಬೆಂಬಲಿಸಿದ್ದಾರೆ.

2022ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 255 ಸ್ಥಾನ ಗೆದ್ದಿದ್ದರೆ, ಎಸ್ಪಿ 111, ಕಾಂಗ್ರೆಸ್‌ 2 ಸ್ಥಾನ ಗೆದ್ದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಂಜಾಬ್‌ನಲ್ಲಿ ಒಂದಾದ ಅಕಾಲಿ-ಕಮಲ; ವಿರೋಧಿ ಪಾಳಯದಲ್ಲಿ 'ಸ್ಯಾಫ್ರನ್' ನಡುಕ! ಕೈಗೆ ಬಂದ ಅವಕಾಶ ತಪ್ಪಿಸಿಕೊಳ್ಳುತ್ತಾ ಆಪ್?
UPಯಲ್ಲಿ 26 ಆಫರ್, ಉತ್ತರಾಖಂಡದಲ್ಲಿ 30ಕ್ಕೆ ಪಟ್ಟು! ಮೈತ್ರಿ ಮುರಿಯಲು Sp ಪರೋಕ್ಷ ದಾಳ, ಅಖಿಲೇಶ್‌ಗೆ ಬೇಡವಾಯ್ತಾ ಕೈ?