
ಬೆಂಗಳೂರು (ಸೆ.08) ಕೇರಳದ ಪಾಲಕ್ಕಾಡ್ ಅಧೀನದಲ್ಲಿದ್ದ ಮಂಗಳೂರು ರೈಲ್ವೇ ವಲಯವನ್ನು ಮೈಸೂರು ಡಿವಿಶನ್‌ಗೆ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವಾಲಯದ ಈ ನಿರ್ಧಾರ ಕರ್ನಾಟಕಕ್ಕೆ ಸಂತಸ ನೀಡಿದ್ದರೆ, ಕೇರಳದ ಅಸಮಾಧಾನಕ್ಕೆ ಕಾರಣವಾಗಿತ್ತು. ಕೇರಳಗ ವಿರೋಧದ ನಡುವೆಯೂ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂಬಂಧ ಭಾರತೀಯ ರೈಲ್ವೇಯ ಮೈಸೂರು ವಿಭಾಗದ ಅಧಿಕಾರಿಗಳು ಹಾಗೂ ಪಾಲಕ್ಕಾಡ್ ವಿಭಾಗದ ಅಧಿಕಾರಿಗಳು ಗುರುವಾರ ಸಭೆ ಸೇರಲಿದ್ದಾರೆ.
ಆಗಸ್ಟ್ 21ರಂದು ಕೇಂದ್ರ ರೈಲ್ವೇ ಸಚಿವಾಲಯ ಮಂಗಳೂರು ವಿಭಾಗವನ್ನು ಪಾಲಕ್ಕಾಡ್‌ನಿಂದ ಪ್ರತ್ಯೇಕಗೊಳಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರ ಘೋಷಣೆ ಮಾಡಿತ್ತು. ಈ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಶುರುವಾಗಿದೆ. ರೈಲ್ವೇ ವಲಯಗಳ ಆಸ್ತಿಗಳ ವರ್ಗಾವಣೆ, ರೈಲು ಕಾರ್ಯಾಚರಣೆ, ವಲಯಗಳ ಜವಾಬ್ದಾರಿ, ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಸೇರಿದಂತೆ ಪ್ರತಿಯೊಂದು ವರ್ಗಾವಣೆಯಾಗಲಿದೆ. ಆದರೆ ಸದ್ಯಕ್ಕೆ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಾಲಕ್ಕಾಡ್‌ನಿಂದ ಮಂಗಳೂರು ರೈಲ್ವೇ ವಲಯವನ್ನು ಪ್ರತ್ಯೇಕಗೊಳಿಸಿ ಮೈಸೂರು ವಿಭಾಗಕ್ಕೆ ಸೇರಿಸಿದ ಕಾರಣ ಇದೀಗ ಮಂಗಳೂರು ಪ್ರಮುಖ ರೈಲ್ವೇ ಕೇಂದ್ರವಾಗಿ ಹೊರಹೊಮ್ಮಿದೆ. ಅಕ್ಟೋಬರ್ 1 ರಿಂದ ಸಂಪೂರ್ಣವಾಗಿ ಕಾರ್ಯಾಚರಣೆಗೆ ಸಿದ್ದವಾಗಲಿದೆ. ಪ್ಯಾಸೆಂಜರ್ ರೈಲು, ಸರಕರು ರೈಲು ಸೇರಿದಂತೆ ಪ್ರತಿ ದಿನ 100ಕ್ಕೂ ಹೆಚ್ಚು ರೈಲುಗಳಿಗೆ ಪ್ರಮುಖ ಕೇಂದ್ರವಾಗಿ ಮಂಗಳೂರು ಮಾರ್ಪಾಡಲಾಗಿದೆ.
ಮಂಗಳೂರು ಸೆಂಟ್ರಲ್‌ನಲ್ಲಿ ರೈಲ್ವೇ ಡಿಪೋ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 17 ಜೋಡಿ ರೈಲು, ಎಕ್ಸ್‌ಪ್ರೆಸ್ ರೈಲಿನ 450 ಕೋಚ್ ಸೇರಿದಂತೆ ಕೆಲ ರೈಲುಗಳ ನಿರ್ವಹಣೆ ಮಾಡಲಾಗುತ್ತದೆ. ವರ್ಗಾವಣೆಯಿಂದ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಗುರುವಾರ ಮಂಗಳೂರಿನಲ್ಲ ರೈಲ್ವೇ ಅಧಿಕಾರಿಗಳು ಸಭೆ ಸೇರಿ ವರ್ಗಾವಣೆ ಪ್ರಕ್ರಿಯೆ ಸುಗಮ ಹಾಗೂ ಸುಸೂತ್ರವಾಗಿ ನಡೆಸಲು ಚರ್ಚೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ