
ಪದವಿ ಇಲ್ಲದಿದ್ದರೂ ಪ್ರಯತ್ನದಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಬಿಹಾರದ 20 ವರ್ಷದ ಯುವಕನ ಕಥೆ ಭಾರೀ ಚರ್ಚೆಯಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟ, ಕೆಳ-ಮಧ್ಯಮ ವರ್ಗದ ಕುಟುಂಬದಿಂದ ಬಂದ ಈ ಯುವಕ, ಕೇವಲ 14ನೇ ವಯಸ್ಸಿನಲ್ಲಿ ಡಿಜಿಟಲ್ ಕೆಲಸ ಆರಂಭಿಸಿ, ಇದೀಗ ತಿಂಗಳಿಗೆ ಸಾವಿರಾರು ಡಾಲರ್ ಸಂಪಾದಿಸುತ್ತಿದ್ದೇನೆ. ತನ್ನ ಸಂಪಾದನೆ ಯಿರುವುದರಿಂದ ತಾಯಿ ಬಳಿ ಕೆಲಸ ಮಾಡಬೇಡ ಎಂದಿದ್ದಾನೆ.
ಈ ಯುವಕನಿಗೆ ಐದು ವರ್ಷವಿದ್ದಾಗ ತಂದೆ-ತಾಯಿ ಬೇರ್ಪಟ್ಟಿದ್ದು, ನಂತರ ತಾಯಿಯೇ ಅವನನ್ನು ಬೆಳೆಸಿದ್ದಾರೆ. ಕಷ್ಟಕರ ಪರಿಸ್ಥಿತಿಯ ನಡುವೆಯೂ 14ನೇ ವಯಸ್ಸಿನಿಂದಲೇ ಆನ್‌ಲೈನ್‌ನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ಆರಂಭಿಸಿದ ಇತನು, 2020ರಲ್ಲಿ ಕೇವಲ 14ನೇ ವಯಸ್ಸಿನಲ್ಲಿ PUBG eSports ತಂಡಗಳಿಗಾಗಿ ಗ್ರಾಫಿಕ್ಸ್ ಮತ್ತು ಎಡಿಟಿಂಗ್ ಕೆಲಸ ಮಾಡಲು ಶುರು ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಆನ್‌ಲೈನ್‌ನಿಂದಲೇ ಡಿಸೈನ್ ಹಾಗೂ ಎಡಿಟಿಂಗ್ ಕಲಿತುಕೊಂಡ ಇತ, ಹೊಸ ವ್ಯಕ್ತಿಗಳ ಪರಿಚಯವನ್ನು ಮಾಡಿಕೊಂಡ.
ಇವನ ಆರಂಭಿಕ ಫ್ರೀಲ್ಯಾನ್ಸಿಂಗ್ ವೃತ್ತಿಗೆ ದೊಡ್ಡ ಹೊಡೆತ ಎದುರಾಯಿತು. ಭಾರತದಲ್ಲಿ PUBG ನಿಷೇಧವಾದ ಬಳಿಕ ಆತನು ಕೆಲಸ ಮಾಡುತ್ತಿದ್ದ eSports ತಂಡಗಳ ಚಟುವಟಿಕೆಗಳು ನಿಂತುಹೋದವು. ನಂತರ ಹುಡುಗ PUBG ಬ್ಯಾನ್ ಆದ ನಂತರ ನಾನು ಕೆಲಸ ಮಾಡುತ್ತಿದ್ದ ಎಲ್ಲರೂ ಕೆಲಸ ನಿಲ್ಲಿಸಿದರು. ನಾನೂ ನಿಲ್ಲಿಸಿದೆ. ಬಳಿಕ ಖಿನ್ನತೆಗೆ ಒಳಗಾಗಿ ಎಲ್ಲರಿಂದಲೂ ದೂರವಾಗಲು ಆರಂಭಿಸಿದೆ. ಇದು 12ನೇ ತರಗತಿಯವರೆಗೆ, ಅಂದರೆ 2024ರವರೆಗೆ ಮುಂದುವರಿಯಿತು ಎಂದು ಹೇಳಿದ್ದಾನೆ.
ಫ್ರೀಲ್ಯಾನ್ಸಿಂಗ್ ಗೊಂದಲದ ನಡುವೆ ಹಳೆಯ ಪರಿಚಯದವರು ನೊಯ್ಡಾದಲ್ಲಿ Web3 ಮಾರ್ಕೆಟಿಂಗ್ ಏಜೆನ್ಸಿ ಆರಂಭಿಸುತ್ತಿರುವುದಾಗಿ ತಿಳಿಸಿ ಕೆಲಸದ ಅವಕಾಶ ನೀಡಿದರು. ಕಾಲೇಜು ಪದವಿ ಪಡೆಯುವ ಬದಲು ಆ ಅವಕಾಶವನ್ನು ಸ್ವೀಕರಿಸಿದ ಯುವಕ ನೊಯ್ಡಾಗೆ ತೆರಳಿ ತಿಂಗಳಿಗೆ ₹15,000 ಸಂಬಳಕ್ಕೆ ಕೆಲಸಕ್ಕೆ ಸೇರಿದನು. ಕಂಪನಿಯಿಂದ ಊಟ ಮತ್ತು ವಸತಿ ಸೌಲಭ್ಯವೂ ಸಿಕ್ಕಿತ್ತು. ಆದರೆ ನೊಯ್ಡಾದ ಅನುಭವ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ನೊಯ್ಡಾದಲ್ಲಿ ಆರಂಭದಲ್ಲಿ ಯಾವುದೇ ಸೌಲಭ್ಯವಿಲ್ಲ, ಖಾಲಿ ರೂಮ್. ಮೂರು ತಿಂಗಳ ನಂತರ ಕೆಲವು ಪೀಠೋಪಕರಣಗಳನ್ನು ಖರೀದಿಸಿಕೊಂಡರೂ. ಅದಲ್ಲದೆ 18ನೇ ವಯಸ್ಸಿನಲ್ಲಿ ಮಾದಕ ವಸ್ತುಗಳು ಮತ್ತು ಮದ್ಯದ ಬಳಕೆಯಂತಹ ಕೆಟ್ಟ ಅಭ್ಯಾಸವು ಇತ್ತು ಎಂದಿದ್ದಾನೆ.
ನೊಯ್ಡಾ ದಲ್ಲಿ ಅಲ್ಲಿಂದ ಬಿಹಾರಕ್ಕೆ ಮರಳಿದ ಬಳಿಕ ಕೆಲ ತಿಂಗಳು ಖಿನ್ನತೆಯಿಂದ ಬಳಲಿದನೂ, ನಿಧಾನವಾಗಿ ತಮ್ಮ ವೃತ್ತಿಯನ್ನು ಪುನರ್‌ನಿರ್ಮಿಸಲು ಆರಂಭಿಸಿದರು. ಒಂದು ಸಣ್ಣ ಟೆಕ್ನಾಲಜಿ ಸಮುದಾಯಕ್ಕಾಗಿ ಬ್ರ್ಯಾಂಡ್ ಮತ್ತು ಲೋಗೋ ಡಿಸೈನ್ ಕೆಲಸಗಳನ್ನು ಉಚಿತವಾಗಿ ಮಾಡತೊಡಗಿದರು. ಆ ಸಮಯದಲ್ಲಿ ತಿಂಗಳಿಗೆ ಸುಮಾರು $200-$300 ಗಳಿಸುತ್ತಿದ್ದರಂತೆ. ನಂತರ Web3 ನೆಟ್‌ವರ್ಕ್‌ನ ಮತ್ತೊಬ್ಬ ಪರಿಚಯಸ್ಥರು ಸಾಮಾಜಿಕ ಮಾಧ್ಯಮ ಗ್ರಾಫಿಕ್ಸ್‌ಗಾಗಿ ತಿಂಗಳಿಗೆ $200 ರಿಟೈನರ್ ಕೆಲಸ ನೀಡಿದರು.
Web3 ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡಿದ ಹಿಂದಿನ ಅನುಭವದಿಂದ ಈ ಕ್ಷೇತ್ರದ ಬಗ್ಗೆ ಉತ್ತಮ ತಿಳುವಳಿಕೆ ಬೆಳೆದಿತ್ತು. ಇದರ ಸಹಾಯದಿಂದ ಕೇವಲ ಡಿಸೈನ್ ಕೆಲಸಕ್ಕೆ ಸೀಮಿತವಾಗದೆ, Web3 ಸಂಬಂಧಿತ ಹಲವು ಕೆಲಸಗಳನ್ನು ಕೈಗೆತ್ತಿಕೊಳ್ಳಲು ಆರಂಭಿಸಿದರು. ಆತನ ಪ್ರಕಾರ “FY 2025-26ರಲ್ಲಿ ನಾನು ಸುಮಾರು ₹12 ಲಕ್ಷ ಗಳಿಸಿದೆ. $200ರಿಂದ ಆರಂಭಿಸಿ ತಿಂಗಳಿಗೆ $2,000ವರೆಗೆ ತಲುಪಿದೆ. ಈ ಹಣಕಾಸು ವರ್ಷದಲ್ಲಿ ನಿರಂತರವಾಗಿ ತಿಂಗಳಿಗೆ $4,000 ಗಳಿಸುತ್ತಿದ್ದೇನೆ. ಕಳೆದ ತಿಂಗಳು ನನ್ನ ಜೀವನದಲ್ಲೇ ಅತಿ ದೊಡ್ಡ ತಿಂಗಳು ಆಗಿದ್ದು, $6,500 ಗಳಿಸಿದೆ” ಎಂದು ಅವರು ತಿಳಿಸಿದ್ದಾರೆ. ಅಂದರೆ ಆತನು ಹೇಳಿಕೆದ ಪ್ರಕಾರ, ಸಾಮಾನ್ಯವಾಗಿ ತಿಂಗಳಿಗೆ ಸುಮಾರು ₹3.3 ಲಕ್ಷಕ್ಕಿಂತ ಹೆಚ್ಚು, ತಿಂಗಳಲ್ಲಿ ಒಳ್ಳೆ ಕೆಲಸ ಇದ್ದರೆ ಸುಮಾರು ₹5.4 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾರೆ.
ಯುವಕನ ಕಥೆಯಲ್ಲಿ ಹೆಚ್ಚು ಗಮನ ಸೆಳೆದಿರುವ ಅಂಶವೆಂದರೆ ತಾಯಿಗಾಗಿ ಮಾಡಿರುವ ಸಾಧನೆ. ಬಹುಕಾಲದ ಕನಸಾಗಿದ್ದ MacBook Pro ಖರೀದಿಸಿದ್ದೇನೆ ಹಾಗೂ ನನ್ನ ಅಮ್ಮನನ್ನು ನಿವೃತ್ತಿಗೊಳಿಸಿದ್ದೇನೆ ಎಂದು ಅವನು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ಕೆಲವು ತಿಂಗಳಿಗೊಮ್ಮೆ ತಾಯಿಗೆ ಚಿನ್ನ ಖರೀದಿಸಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಾರಣ, ಇದೀಗ ಜಮೀನು ಅಥವಾ ಫ್ಲ್ಯಾಟ್ ಖರೀದಿಸಲು ಹಣ ಉಳಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ