ಮಂಗಳೂರು ಕುಕ್ಕರ್ ಸ್ಫೋಟ: ಮೈಸೂರಲ್ಲಿ ಎನ್‌ಐಎ ದಾಳಿ: ಅಪಾರ ಪ್ರಮಾಣದ ಡಿಜಿಟಲ್ ಸಾಮಗ್ರಿ ಜಪ್ತಿ

By Kannadaprabha News  |  First Published Feb 16, 2023, 6:19 AM IST

ಕಳೆದ ವರ್ಷ ಅ.23ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ನ.19ರಂದು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬುಧವಾರ 3 ರಾಜ್ಯಗಳ 40 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.


ನವದೆಹಲಿ: ಕಳೆದ ವರ್ಷ ಅ.23ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ನ.19ರಂದು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬುಧವಾರ 3 ರಾಜ್ಯಗಳ 40 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ನಡೆದ ಸ್ಥಳಗಳಲ್ಲಿ ಕರ್ನಾಟಕದ ಮೈಸೂರು ಸೇರಿದೆ. ದಾಳಿ ವೇಳೆ ಅಪಾರ ಪ್ರಮಾಣದ ಡಿಜಿಟಲ್‌ ಸಾಮಗ್ರಿ, ಆಧಾರ್‌ ಕಾರ್ಡ್‌, ಸಿಮ್‌ ಕಾರ್ಡ್‌, ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು 4 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ(Karnataka), ಕೇರಳ(Kerala) ಮತ್ತು ತಮಿಳುನಾಡಿನಲ್ಲಿ(Tamil Nadu), ಕೊಯಮತ್ತೂರು ಸ್ಫೋಟ ಪ್ರಕರಣ ಸಂಬಂಧ 32 ಸ್ಥಳಗಳ ಮೇಲೆ, ಮಂಗಳೂರು ಸ್ಫೋಟ ಪ್ರಕರಣ (Mangalore blast case) ಸಂಬಂಧ 8 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಮೂರೂ ರಾಜ್ಯಗಳಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಜಾನೆ 5 ಗಂಟೆಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಹಲವು ಗಂಟೆಗಳ ಕಾಲ ತಪಾಸಣೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ನಡೆದ ಸ್ಥಳಗಳ ಪೈಕಿ ತಿರುಚಿರಾಪಳ್ಳಿಯ (Tiruchirappalli) ಸಾಫ್ಟ್ವೇರ್‌ ಎಂಜಿನಿಯರ್‌, ಮಸ್ಕತ್‌ನಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಮೈಲಾಡುತುರೈನಲ್ಲಿನ ಅಪ್ಪ-ಮಗನ ಮನೆ ಕೂಡಾ ಸೇರಿದೆ.

Latest Videos

undefined

ಸದನದಲ್ಲಿ ಪ್ರತಿಧ್ವನಿಸಿದ ಕುಕ್ಕರ್‌ ಸ್ಫೋಟ: ಸಿ.ಟಿ. ರವಿ-ಡಿಕೆಶಿ ಮಾತಿನ ಚಕಮಕಿ

ಎಲ್ಲೆಲ್ಲಿ ದಾಳಿ?:

ಕೊಯಮತ್ತೂರು ಸ್ಫೋಟ ಪ್ರಕರಣ ಸಂಬಂಧ ಕೊಯಮತ್ತೂರಿನ 14 ಸ್ಥಳ, ತಿರುಚಿರಾಪಳ್ಳಿಯ 1, ನೀಲಗೀರಸ್‌ನ 1, ತಿರುನೆಲ್ವೇಲಿಯ 3, ತೂತ್ತುಕುಡಿಯ 1, ಚೆನ್ನೈನ 3, ತಿರುವಣ್ಣಾಮಲೈನ 2, ದಿಂಡಿಗಲ್‌ನ 1, ಮೈಲಾಡುತುರೈನ 1, ಕೃಷ್ಣಗಿರಿಯ 1, ಕನ್ಯಾಕುಮಾರಿಯ 1, ತೆಂಕಾಸಿಯ 1, ಎರ್ನಾಕುಲಂನ 1 ಸ್ಥಳದ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಮಂಗಳೂರು ಸ್ಫೋಟ ಪ್ರಕರಣ ಸಂಬಂಧ ಕರ್ನಾಟಕದ ಮೈಸೂರಿನ 1, ತಮಿಳುನಾಡಿನ ತಿರುಪ್ಪೂರಿನ 2, ಕೊಯಮತ್ತೂರಿನ (Coimbatore) 1, ಕೇರಳದ ಎರ್ನಾಕುಲಂನ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.

ಮಂಗಳೂರು ಸ್ಫೋಟ:

ನ.19ರಂದು ಮಂಗಳೂರಿನಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಪ್ರಕರಣ ಸಂಬಂಧ ಆರೋಪಿ ಮಹಮ್ಮದ್‌ ಶಾರಿಖ್‌ ಎಂಬಾತನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ಈ ಕುಕ್ಕರ್‌ ಬಾಂಬ್‌ ಇಟ್ಟು ಸ್ಫೋಟಿಸುವುದು ಶಾರಿಖ್‌ನ ಉದ್ದೇಶ ಎಂದು ಕಂಡುಬಂದಿತ್ತು.

ಕುಕ್ಕರ್‌ ಬಾಂಬ್‌ ಅಂದ್ರೆ ಏನು..? ಇದು ಎಷ್ಟು ಅಪಾಯಕಾರಿ ನೋಡಿ..

ಕೊಯಮತ್ತೂರು ಸ್ಫೋಟ:

ಐಸಿಸ್‌ ಜೊತೆ ನಂಟು ಘೋಷಿಸಿಕೊಂಡಿದ್ದ ಜಮೀಶಾ ಮುಬೀನ್‌ (Jamisha Mubeen)ಎಂಬಾತ ಕಳೆದ ಅ.23ರಂದು ಕೊಯಮತ್ತೂರಿನ ಕೊಟ್ಟಾಯ್‌ ಈಶ್ವರನ್‌ ದೇಗುಲದ ಬಳಿ ಸ್ಫೋಟಕ ಹೊಂದಿದ್ದ ಕಾರನ್ನು ಸ್ಫೋಟಿಸಿದ್ದ. ಬಳಿಕ ನಡೆದ ತನಿಖೆ ವೇಳೆ ಇದೊಂದು ಆತ್ಮಾಹುತಿ ದಾಳಿ ಯತ್ನವಾಗಿದ್ದು, ಭಾರೀ ಸ್ಫೋಟದ ಮೂಲಕ ದೇಗುಲ ಕಾಂಪ್ಲೆಕ್ಸ್‌ಗೆ ದೊಡ್ಡ ಪ್ರಮಾಣದ ಹಾನಿ ಮಾಡುವ ಗುರಿಯನ್ನು ಮುಬೀನ್‌ ಹಾಕಿಕೊಂಡಿದ್ದ ಎಂದು ಪತ್ತೆಯಾಗಿತ್ತು. ಆದರೆ ಅದೃಷ್ಟವಶಾತ್‌ ದಾಳಿಯಲ್ಲಿ ದೇಗುಲಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಅದರೆ ಸ್ಫೋಟದಲ್ಲಿ ಮುಬೀನ್‌ ಸಾವನ್ನಪ್ಪಿದ್ದ.

click me!