
ಭೋಪಾಲ್(ಫೆ.15): ಹಿಂದೂ ಹುಡುಗಿಯರು ಜಿಹಾದಿಗಳಿಂದ ರಕ್ಷಣೆ ಪಡೆಯಲು ಪರ್ಸ್‌ನಲ್ಲಿ ಚಾಕು ಇಟ್ಟುಕೊಳ್ಳಿ. ಲಿಪ್‌ಸ್ಟಿಕ್ ಇಟ್ಟುಕೊಂಡರೆ ಉಪಯೋಗವಿಲ್ಲ ಎಂದು ವಿಶ್ವಹಿಂದೂ ಪರಿಷತ್ ಮಹಿಳಾ ನಾಯಕಿ ಸಾದ್ವಿ ಪ್ರಾಚಿ ಕರೆ ನೀಡಿದ್ದಾರೆ. ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳ ಆಕ್ರಮಣ ನಡೆಯುತ್ತಲೇ ಇದೆ. ಜಿಹಾದಿಗಳ ಮೋಸದ ಬಲೆಗೆ ಬಿದ್ದು ಕೊನೆಗೆ ಒದ್ದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಹೀಗಾಗಿ ಜಿಹಾದಿಗಳಿಂದ ದೂರವಿರಿ.ಜಿಹಾದಿಗಳಿಂದ ರಕ್ಷಣೆ ಪಡೆಯಲು ಪರ್ಸ್‌ನಲ್ಲಿ ಚಾಕು ಇಟ್ಟುಕೊಳ್ಳಿ ಎಂದು ಪ್ರಾಚಿ ಹೇಳಿದ್ದಾರೆ.
ಮಧ್ಯಪ್ರದೇಶದ ರಾಟ್ಲಾಂಗೆ ಭೇಟಿ ನೀಡಿದ ಪ್ರಾಚಿ ಮಹತ್ವದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಲವ್ ಜಿಹಾದ್‌ನಿಂದ ಹಿಂದೂ ಹೆಣ್ಣುಮಕ್ಕಳ ಜೀವನ ನಕರವಾಗುತ್ತಿದೆ. ಮೋಸದ ಬಲೆಗೆ ಬೀಳುತ್ತಿದ್ದಾರೆ. ಹಿಂದೂ ಹೆಣ್ಣುಮಕ್ಕಳು ಜಿಹಾದಿಗಳಿಂದ ದೂರವಿರಬೇಕು. ಹಿಂದೂ ಸಂಸ್ಕಾರ ಬೆಳೆಸಿಕೊಳ್ಳಬೇಕು. ಹಿಂದೂ ಸಂಸ್ಕಾರ, ಮೌಲ್ಯಯುತ ಜೀವನ ಹಿಂದೂ ಹುಡುಗಿಯರಿಗೆ ಬೆಳಕಾಗಲಿದೆ. ಲವ್ ಜಿಹಾದ್ ಮೃತ್ಯ ಕೂಪಕ್ಕೆ ತಳ್ಳಲಿದೆ ಎಂದಿದ್ದಾರೆ.
ಕ್ಯಾಡ್‌ಬರಿ ಜಾಹೀರಾತಿಗೂ ಮೋದಿಗೂ ಸಂಬಂಧ..! ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ 'Boycott Cadbury'..!
ಹಿಂದೂ ಹುಡುಗಿಯರು ಹಿಂದೂ ಸಂಪ್ರದಾಯಗಳನ್ನು ಪಾಲಿಸಬೇಕು. ಹಿಂದೂ ಧರ್ಮದಲ್ಲಿ ಯಾವುದೂ ಮಾಡಲೇ ಬೇಕು ಎಂದಿಲ್ಲ. ಆದರೆ ಈ ಸ್ವಾತಂತ್ರ್ಯದಿಂದಲೇ ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಮುಸ್ಲಿಮ್ ಹೆಣ್ಣುಮಕ್ಕಳ ರೀತಿಯಲ್ಲಿ ಸಂಪ್ರದಾಯಿಕವಾಬೇಕು. ಇದರಿಂದ ಹಿಂದೂ ಧರ್ಮ ಹಾಗೂ ಹಿಂದೂ ಹೆಣ್ಣಮುಕ್ಕಳು ಬಲಿಷ್ಠರಾಗಲಿದ್ದಾರೆ ಎಂದು ಸಾದ್ವಿ ಪ್ರಾಚಿ ಸಲಹೆ ನೀಡಿದ್ದಾರೆ.
ಹಿಂದೂ ಹುಡುಗಿಯರ ಕುರಿತು ಸಾಧ್ವಿ ಪ್ರಾಚಿ ಹಲವು ಎಚ್ಚರಿಕೆ ನೀಡಿದ್ದಾರೆ. ಲವ್ ಜಿಹಾದ್ ತೀವ್ರವಾಗಿ ವಿರೋಧಿಸಿ ಹಲವು ಆಂದೋಲನ ನಡೆಸಿದ್ದಾರೆ. ಇತ್ತೀಚೆಗೆ ಲವ್ ಜಿಹಾದ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದರು. ಲವ್ ಜಿಹಾದ್‌ಗೆ ಅರಬ್ ರಾಷ್ಟ್ರಗಳಿಂದ ಹಣ ಬರುತ್ತಿದೆ ಎಂದಿದ್ದರು. ಅರಬ್ ದೇಶಗಳಿಂದ ಲವ್ ಜಿಹಾದ್ ನಡೆಸಲು ಹಣ ಬರುತ್ತದೆ. ಬ್ರಾಹ್ಮಣ, ವೈಶ್ಯ ಹಾಗೂ ಶೂದ್ರ ಹೆಣ್ಣುಮಕ್ಕಳನ್ನು ಮುಸ್ಲಿಂ ಧರ್ಮೀಯರನ್ನು ಮದುವೆಯಾಗಲು ಪ್ರೇರೇಪಿಸಿ 10 ಲಕ್ಷ ರೂಪಾಯಿ ನಿಂದ 25 ಲಕ್ಷ ರೂಪಾಯಿ ಹಣದ ಆಮಿಷ ಒಡ್ಡಲಾಗುತ್ತದೆ. ಇಂಥ ಕೃತ್ಯ ನಡೆಸುವವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು’ ಎಂದು ಹೇಳಿದ್ದರು.
ಲವ್ ಜಿಹಾದ್‌ಗೆ ಬಲಿಯಾದ್ರಾ ಖ್ಯಾತ ನಟಿ ರೀನಾ ರಾಯ್? ಕಣ್ಣೀರಿನ ದಿನಗಳನ್ನು ನೆನೆದ ಬಾಲಿವುಡ್ ತಾರೆ
2019ರಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಪರ ಸಾಧ್ವಿ ಪ್ರಾಚಿ ಹಳಿಕೆ ನೀಡಿದ್ದರು. ಮುಸ್ಲಿಂ ಮಹಿಳೆ ಹಿಂದು ಯುವಕನೊಬ್ಬನ ಜೊತೆ ವಿವಾಹ ಆದರೆ ಅದು ಇಸ್ಲಾಂ ವಿರುದ್ಧ. ಆದರೆ, ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಬಲೆಗೆ ಬೀಳಿಸಿ ಬುರ್ಖಾ ಧರಿಸಲು ಹೇಳುವುದು ಸಮಂಜಸವೇ ಎಂದು ಸಂಸದ ನುಸ್ರತ್ ಜಹಾನ್ ಫತ್ವಾ ಕುರಿತು ಸಾಧ್ವಿ ಹೇಳಿಕೆ ನೀಡಿದ್ದರು. ನುಸ್ರತ್ ಜಹಾನ್ ಪರವಾಗಿ ಮಾತನಾಡಿದ್ದ ಸಾಧ್ವಿ ಪ್ರಾಚಿ, ಮೌಲ್ವಿಗಳು ಹೊರಡಿಸಿದ ಫತ್ವಾಗೆ ತಿರುಗೇಟು ನೀಡಿದ್ದರು. ನುಸ್ರತ್ ಜಹಾನ್ ಅವರು ಜೈನ ಸಮುದಾಯದ ವ್ಯಕ್ತಿ ಜತೆ ವಿವಾಹವಾಗಿರುವ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸಂಸ್ಥೆ ದೇವಬಂದ್ ಫತ್ವಾ ಹೊರಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ