
ಬೆಂಗಳೂರು (ಫೆ.15): ದೇಶದಲ್ಲಿ ಪೆರಿಷಬಲ್ ಸರಕು ಸಾಗಣೆಯಲ್ಲಿ ಮೊದಲ ಆದ್ಯತಾ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಈ ವರ್ಷದ ಪ್ರೇಮಿಗಳ ದಿನದ ಪೂರ್ವದಲ್ಲಿ ಗುಲಾಬಿ ಸಾಗಣೆಯಲ್ಲಿ ಎರಡು ಪಟ್ಟು ಹೆಚ್ಚಳ ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಸಾಕ್ಷಿಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುಲಾಬಿಗಳ ಋತುವಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕ್ರಿಯೆಗೊಳಿಸಲಾದ ಗುಲಾಬಿ ಸಾಗಣೆಯಲ್ಲಿ ಶೇ.14 ರಷ್ಟು ಹೆಚ್ಚಳ ಕಂಡುಬಂದಿದೆ. ಈ ಬಾರಿ 17.4 ಮಿಲಿಯನ್ ಗುಲಾಬಿ ಗಳನ್ನು (589,296 ಕೆಜಿ) ಕೌಲಾಲಂಪುರ್, ಸಿಂಗಾಪುರ್, ಕುವೈತ್, ಮನಿಲಾ, ಆಕ್ಲೆಂಡ್, ನ್ಯೂಯಾರ್ಕ್, ಲೆಬನಾನ್, ಮಾಲ್ಡೀವ್ಸ್, ಜೋರ್ಡಾನ್ ಮತ್ತು ದುಬೈ ಈ ದೇಶಗಳಿಗೆ ಪ್ರಮುಖವಾಗಿ ರಫ್ತು ಮಾಡಲಾಯಿತು. ಬೆಂಗಳೂರು ಕಾರ್ಗೋ ಒಟ್ಟು 15 ಜಾಗತಿಕ ತಾಣಗಳಿಗೆ ಗುಲಾಬಿಗಳನ್ನು ಕಳುಹಿಸಿದೆ.
Valentine's Day 2023: ಪ್ರೇಮವಿವಾಹಕ್ಕಾಗಿ ಗುಲಾಬಿ ಹೂವಿನ ಈ ಪರಿಹಾರಗಳನ್ನು ಮಾಡಿ ನೋಡಿ..
ದೇಶೀಯ ವಿಭಾಗದಲ್ಲಿ ಒಟ್ಟು 6.6 ಮಿಲಿಯನ್ ಗುಲಾಬಿಗಳನ್ನು (1,78,200 ಕೆಜಿ) ಸಂಸ್ಕರಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ, ಬಾಗ್ಡೋಗ್ರಾ, ಅಹಮದಾಬಾದ್, ಕೊಚ್ಚಿ, ದರ್ಭಾಂಗ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ 34 ದೇಶೀಯ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ವಾರದ ಅಂಗವಾಗಿ ರವಾನೆ ಮಾಡಲಾಯಿತು.
ಪಾಲಿ ಹೌಸ್‌ನಲ್ಲಿ ಬೆಳೆಯುವ ಹೂವುಗಳು: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷವಾಗಿದ್ದು, ಹೀಗಾಗಿ ಈ ತಿಂಗಳಲ್ಲಿ ಹೆಚ್ಚಾಗಿ ಕೆಂಪು ಗುಲಾಬಿ ಹೂಗಳು ಸೇಲ್ ಆಗುತ್ತವೆ. ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಕೆಂಪು ಗುಲಾಬಿ ಹೂಗಳಿಗೆ ಭಾರಿ ಡಿಮ್ಯಾಂಡ್ ಆಗಿದೆ. ಸಿಲಿಕಾನ್ ಸಿಟಿಯಲ್ಲಿ ಕೆಂಪು ಗುಲಾಬಿಗಳ ಬೆಲೆ ಏರಿಕೆ ಆಗಿದೆ. ಚಿಕ್ಕಬಳ್ಳಾಪುರದ ಕೆಂಪು ಗುಲಾಬಿ ಹೂವುಗಳು ದೇಶ ವಿದೇಶಗಳಿಗೆ ರಫ್ತಾಗ್ತಿವೆ. ಪಾಲಿಹೌಸ್‌ನಲ್ಲಿ ಕೆಂಪು ಗುಲಾಬಿ ಹೂಗಳ ಕಲರವ ಶುರುವಾಗಿದ್ದು, ಹೂವು ಕಟಾವು ಮಾಡಿ ರೈತರು ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ.
ಗುಲಾಬಿ ಹೂವಿನಲ್ಲಿದೆ ಇಷ್ಟೊಂದು ಶಕ್ತಿ : ಎಲ್ಲರು ಮೆಚ್ಚಿಕೊಳ್ಳುವ ಹೂಗಳಲ್ಲಿ ಗುಲಾಬಿ ಹೂ ಮೊದಲ ಸ್ಥಾನದಲ್ಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮಾತ್ರವಲ್ಲ ದೇವಾನುದೇವತೆಗಳಿಗೂ ಗುಲಾಬಿ ಹೂ ಇಷ್ಟ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಗುಲಾಬಿ ಹೂವನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಗುಲಾಬಿ ಹೂವನ್ನು ಸಂಪತ್ತಿಗೆ ಹೋಲಿಕೆ ಮಾಡಲಾಗುತ್ತದೆ. ದೇವರ ಪೂಜೆಯಲ್ಲಿ ಅತಿ ಹೆಚ್ಚು ಬಳಸುವ ಹೂ ಅಂದ್ರೆ ಅದು ಗುಲಾಬಿ ಹೂ. ಈ ಹೂವನ್ನು ಕೇವಲ ದೇವರ ಕೃಪೆಗೆ ಪಾತ್ರರಾಗಲು ಮಾತ್ರ ಬಳಸೋದಿಲ್ಲ. ಇದ್ರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಹೇಳುವ ಗುಲಾಬಿ (Rose) ಹೂವಿನ ಪರಿಹಾರಗಳು ಮನೆಯ ಐಶ್ವರ್ಯ ವೃದ್ಧಿಸುತ್ತದೆ. ಮನೆಯಲ್ಲಿ ಸದಾ ಸುಖ ನೆಲೆಸಲು ಕಾಣವಾಗುತ್ತದೆ. ಗುಲಾಬಿ ಹೂವಿನಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
Valentine's Day: ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂವಿಗೆ ಡಿಮ್ಯಾಂಡ್
ಜಾತಕ (Horoscope) ದೋಷಕ್ಕೆ ಪರಿಹಾರ: ಒಂದು ಪಾತ್ರೆಯಲ್ಲಿ 7 ಗುಲಾಬಿ ದಳಗಳನ್ನು ಹಾಕಬೇಕು. ನಂತ್ರ ಈ ದಳಗಳನ್ನು ತಾಯಿ ದುರ್ಗಾ (Durga) ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದ್ರಿಂದ ಜಾತಕದ ಅನೇಕ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರ ಪರಿಹಾರಕ್ಕೆ ಮಂಗಳವಾರ ಶಿವಲಿಂಗಕ್ಕೆ 11 ಗುಲಾಬಿ ಹೂವುಗಳನ್ನು ಅರ್ಪಿಸಬೇಕು. ಇದ್ರಿಂದ ಶಿವನ ಆಶೀರ್ವಾದ ನಿಮಗೆ ಸಿಗುವುದಲ್ಲದೆ, ಮಂಗಳ ದೋಷ ನಿವಾರಣೆಯಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ