ನವೆಂಬರ್ 15ರಂದು ಶಬರಿಮಲೆ ಯಾತ್ರೆ ಕಾಲಾವಧಿ ಆರಂಭವಾಗಲಿದ್ದು, ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ದೇವಸ್ವಂ ಬೋರ್ಡ್ ನಿಲಕ್ಕಲ್‌ನಲ್ಲಿ ಆ್ಯಂಟಿಜೆನ್ ಟೆಸ್ಟ್ ವ್ಯವಸ್ಥೆ ಮಾಡಲಿದೆ.
ತಿರುವನಂತಪುರಂ(ಸೆ.11): ಶಬರಿಮಲೆ ಸನ್ನಿಧಾನ ಯಾತ್ರೆ ಆರಂಭವಾಗಲಿದ್ದು, ಯಾತ್ರಿಗಳಿಗೆ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳುವುದನ್ನು ಟ್ರಾವಂಕೂರ್ ದೇವಸ್ವಂ ಬೋರ್ಡ್ ಕಡ್ಡಾಯ ಮಾಡಿದೆ.
ನವೆಂಬರ್ 15ರಂದು ಯಾತ್ರೆ ಕಾಲಾವಧಿ ಆರಂಭವಾಗಲಿದ್ದು, ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ದೇವಸ್ವಂ ಬೋರ್ಡ್ ನಿಲಕ್ಕಲ್‌ನಲ್ಲಿ ಆ್ಯಂಟಿಜೆನ್ ಟೆಸ್ಟ್ ವ್ಯವಸ್ಥೆ ಮಾಡಲಿದೆ.
ಪ್ಲಾಸ್ಮಾ ಥೆರಪಿಯಿಂದ ಪ್ರಯೋಜನವಿಲ್ಲ: ಅಧ್ಯಯನದಲ್ಲಿ ಬಯಲು!
ಕೊರೋನಾ ಟೆಸ್ಟ್‌ನಲ್ಲಿ ನೆಗೆಟಿವ್ ಬಂದವರು ಯಾತ್ರೆ ನಡೆಸಬಹುದಾಗಿದೆ. ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರವಾಗಲಿದೆ.
ಈಗಿನ ಕೊರೋನಾ ಪರಿಸ್ಥಿತಿಯನ್ನು ಗಮನಸಲ್ಲಿರಿಸಿಕೊಂಡು ಸನ್ನಿಧಾನದಲ್ಲಿ ನಿಲಕ್ಕಲ್ ಹಾಗೂ ಪಂಬಾದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಕೇರಳ ರಾಜ್ಯ ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಸೋಂಕಿತರ ಮೃತದೇಹ ಇನ್ನು ಕುಟುಂಬಸ್ಥರಿಗೆ ಹಸ್ತಾಂತರ..!
ಭಕ್ತರಿಗೆ ತರ್ತು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದೇವಸ್ಥಾನದ ಪ್ರದೇಶದಲ್ಲಿರುವ ಅಮೃತಾ ಆಸ್ಪತ್ರೆಯನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಲಿದೆ. ಏಕಕಾಲಕ್ಕೆ 50 ಜನ ಭಕ್ತಾದಿಗಳು ಮಾತ್ರ ಸನ್ನಿಧಾನ ಪ್ರವೇಶಿಸಬಹುದಾಗಿದೆ. ಪ್ರತಿಬಾರಿಯಂತೆಯೇ ಪೊಲೀಸರ ಸುಪರ್ದಿಯಲ್ಲಿ ಕ್ಯೂ ಸಿಸ್ಟಂ ಇರಲಿದೆ.
ಈ ಮೊದಲು ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ನೀಡಿದವರಿಗೆ ದೇವಸ್ಥಾನ ಪ್ರವೇಶ ನೀಡಲು ನಿರ್ಧರಿಸಲಾಗಿತ್ತು. ಆದರೆ ತಮ್ಮ ಊರುಗಳಿಂದ ಶಬರಿಮಲೆ ತಲುಪಲು ಕನಿಷ್ಠ 3-4 ದಿನ ಬೇಕಾಗಿದ್ದು, ಪ್ರಯಾಣದ ಸಂದರ್ಭ ವೈರಸ್ ಬಾಧಿಸುವ ಸಾಧ್ಯತೆ ಇರುವುದರಿಂದ ಈ ಯೋಜನೆ ಕೈ ಬಿಡಲಾಗಿದೆ.
ಕೊರೋನಾ ಕೊನೆಯಲ್ಲ, ಜಗತ್ತಿಗೆ ವಕ್ಕರಿಸಲಿದೆ ಇನ್ನಷ್ಟು ಮಹಾಮಾರಿ: WHO ಎಚ್ಚರಿಕೆ
ಇನ್ನು ಬೇರೆ ಬೇರೆ ರಾಜ್ಯದ ಯಾತ್ರಿಗಳು ತರುವ ಸರ್ಟಿಫಿಕೇಟ್ ಪರಿಶೀಲನೆ ಇನ್ನೊಂದು ಸವಾಲಾಗುವ ಸಾಧ್ಯತೆಯೂ ಇತ್ತು. ಹೀಗಿರುವಾಗ ದೇವಸ್ಥಾನದಲ್ಲಿಯೇ ಆಂಟಿಜೆನ್ ಟೆಸ್ಟ್ ಪರಿಣಾಮಕಾರಿಯಾಗಲಿದೆ ಎನ್ನಲಾಗಿದೆ.