ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮನೆಯೊಂದರಲ್ಲಿ ಎಸಿಯನ್ನು ಆನ್ ಮಾಡಿದಾಗ ಹಾವು ಮತ್ತು ಅದರ ಮರಿಗಳು ಪತ್ತೆಯಾಗಿವೆ. ಹಾವು ಹಿಡಿಯುವವರು ಅವುಗಳನ್ನು ರಕ್ಷಿಸಿದ ವೀಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಏರ್ ಕೂಲರ್‌ಗಳು ಬಹುತೇಕ ಬೇಸಿಗೆ ಕಾಲದಲ್ಲೇ ಹೆಚ್ಚು ಬಳಕೆಯಾಗುತ್ತವೆ. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಎಸಿಯ ಅಗತ್ಯವೇ ಇರುವುದಿಲ್ಲ. ಹಾಗೂ ಅದನ್ನು ಬೇಸಿಗೆ ಬಂದಾಗಲೇ ಬಳಸುವುದಕ್ಕೆ ಶುರು ಮಾಡುತ್ತಾರೆ. ಹೀಗೆ ಕೆಲ ಕಾಲ ಬಳಸದೇ ಬಿಟ್ಟಿದ ಹವಾ ನಿಯಂತ್ರಣ ಯಂತ್ರವನ್ನು ಇನ್ನೇನು ಬೇಸಿಗೆ ಬಂತಲ್ಲ ಎಂದು ಆನ್ ಮಾಡಿದ ಮನೆ ಮಾಲೀಕನಿಗೆ ಆಘಾತವಾಗಿದೆ. ಅದಕ್ಕೆ ಕಾರಣವಾಗಿದ್ದೇನು? ಮುಂದೆ ಓದಿ...
ಎಸಿಯಲ್ಲಿ ಮೊಟ್ಟೆ ಇಟ್ಟು ಸಂಸಾರ ಆರಂಭಿಸಿದ ಹಾವು
ಆಂಧಪ್ರದೇಶದ ಕರಾವಳಿ ಪ್ರದೇಶ ವಿಶಾಖಪಟ್ಟಣ ಸೆಕೆಗಾಲದಲ್ಲಿ ಭಾರಿ ಸೆಖೆಗೆ ಫೇಮಸ್, ಇಲ್ಲಿ ಪೆಂಡುರ್ತಿ ಪ್ರದೇಶದಲ್ಲಿ ಕುಟುಂಬವೊಂದು ಮನೆಯಲ್ಲಿ ಕೆಲ ಕಾಲ ಬಳಸದೇ ಇದ್ದ ಎಸಿಯನ್ನು ಇತ್ತೀಚೆಗೆ ಆನ್ ಮಾಡಿದ್ದರು ಈ ವೇಳೆ ಅದರಲ್ಲಿ ಹಾವು ಇರುವುದು ಕಂಡು ಬಂದಿದೆ. ಕೂಡಲೇ ಅವರು ಹಾವು ಹಿಡಿಯುವ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದು, ಅವರು ಕೂಡಲೇ ಬಂದು ಆ ಎಸಿ ಯಂತ್ರದಿಂದ ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ. ಆದರೆ ಈ ವೇಳೆ ಅವರು ಮತ್ತಷ್ಟು ಆಘಾತಕ್ಕೊಳಗಾಗಿದ್ದಾರೆ. ಕಾರಣ ಈ ಎಸಿ ಯಂತ್ರದೊಳಗೆ ಒಂದು ದೊಡ್ಡ ಹಾವು ಮಾತ್ರವಲ್ಲದೇ ಸಾಕಷ್ಟು ಮರಿ ಹಾವುಗಳು ಕೂಡ ಇದ್ದವು. ಇದನ್ನು ನೋಡಿ ಅವರು ಬೆಚ್ಚಿ ಬಿದ್ದಿದ್ದಾರೆ.
ಎಸಿ ಕಂಪ್ರೆಷರ್ ಸ್ಫೋಟಗೊಂಡು ಮೆಕಾನಿಕ್ ಸಾವು, ಬೈಕರ್ ಜಸ್ಟ್ ಮಿಸ್: ಭಯಾನಕ ವೀಡಿಯೋ
ವೀಡಿಯೋ ವೈರಲ್
ಹಾವು ಹಿಡಿಯುವವರು ಆ ಎಸಿ ಯಂತ್ರದಿಂದ ಈ ಹಾವಿನ ದೊಡ್ಡ ಸಂಸಾರವನ್ನು ರಕ್ಷಿಸುತ್ತಿರುವ 25 ಸೆಕೆಂಡ್‌ಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತೆಲುಗು ಸ್ಕ್ರೈಬ್ ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಹೀಗೆ ಬರೆದಿದ್ದಾರೆ. ನೀವು ಬಹಳ ಸಮಯದ ನಂತರ ಎಸಿ ಆನ್ ಮಾಡುತ್ತಿದ್ದೀರಾ? ಹಾಗಿದ್ದಾರೆ ಒಮ್ಮ ಪರೀಕ್ಷಿಸಿ ನಿಮ್ಮ ಎಸಿಯಲ್ಲಿಯೂ ಹಾವುಗಳು ಇರಬಹುದು. ವಿಶಾಖಪಟ್ಟಣ ಜಿಲ್ಲೆಯ ಪೆಂಡುರ್ತಿಯಲ್ಲಿರುವ ಸತ್ಯನಾರಾಯಣ ಎಂಬ ವ್ಯಕ್ತಿಯ ಮನೆಯ ಎಸಿಯಲ್ಲಿ ಹಾವು ಇರುವುದನ್ನು ಅವರು ನೋಡಿದರು ಕೂಡಲೇ ಅವರು ಹಾವು ಹಿಡಿಯುವವರನ್ನು ಮನೆಗೆ ಕರೆಸಿದರು ನಂತರ ಹಾವು ಹಿಡಿಯುವವರು ಹಾವು ಹಾಗೂ ಅದರ ಹಲವವು ಮರಿಗಳನ್ನು ರಕ್ಷಿಸಿದರು ಹಾವಿನ ಜೊತೆ ಅವುಗಳ ಮರಿಗಳು ಇದ್ದಿದ್ದನ್ನು ನೋಡಿ ಸ್ಥಳೀಯರು ಭಯಗೊಂಡರು ಎಂದು ಅವರು ವೀಡಿಯೋ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ದೀರ್ಘಾವಧಿಯ ಕಾಲ ಎಸಿ ರೆಪ್ರಿಜರೇಟರ್, ಮುಂತಾದ ಇಲೆಕ್ಟ್ರಿಕ್ ವಸ್ತುಗಳನ್ನು ಬಳಸದೇ ಮತ್ತೆ ತೆರೆಯುವಾಗ ಜಾಗರೂಕರಾಗಿರುವುದು ಒಳಿತು.
ಟಿಕೆಟ್‌ಗೆ 2 ಸಾವಿರ ಕೊಟ್ರೂ ಎಸಿ ರೈಲಿನಲ್ಲಿ ಬಂದ ವಿಶೇಷ ಅತಿಥಿಯಿಂದ ನಿದ್ದೆಯಿಲ್ಲದ ರಾತ್ರಿ ಕಳೆದ..!
చాలా రోజుల తర్వాత ఏసీ వేస్తున్నారా.. అయితే మీ ఏసీలో కూడా ఇలానే పాములు ఉండొచ్చు
విశాఖ జిల్లా పెందుర్తిలో సత్యనారాయణ అనే వ్యక్తి ఇంట్లోని ఏసీలో పిల్లలు పెట్టిన పాము
సమాచారం అందుకొని ఏసీలో ఉన్న పాము, పిల్లలను బయటికి తీసిన స్నేక్ క్యాచర్
దీంతో అన్ని పాము పిల్లలను చూసి భయందోళనకు… pic.twitter.com/8fa7V9DKvC