Ajit Doval: ‘ನನ್ನ ಮೈಯಲ್ಲಿ ಚಿಪ್‌ ಇದೆ ’ ಅಜಿತ್ ದೋವಲ್ ಮನೆಗೆ ನುಗ್ಗಲು ಮುಂದಾದ ಬೆಂಗಳೂರಿನ ವ್ಯಕ್ತಿ

By Contributor AsianetFirst Published Feb 17, 2022, 2:12 AM IST
Highlights

* ಅಜಿತ್  ದೋವಲ್ ಮನೆಗೆ ನುಗ್ಗಲು  ಯತ್ನ
* ಬೆಂಗಳೂರು ಮೂಲದ ವ್ಯಕ್ತಿ ಬಂಧನ
 * ದೋವಲ್‌ ಮನೆ ಪ್ರವೇಶ ಯತ್ನ: ಬೆಂಗಳೂರು ಯುವಕ ಬಂಧನ
* ‘ನನ್ನ ಮೈಯಲ್ಲಿ ಚಿಪ್‌ ಇದೆ ಹೊರಗಿನವರು ನಿಯಂತ್ರಿಸುತ್ತಿದ್ದಾರೆ’
*  ಪೊಲೀಸರ ಮುಂದೆ ಯುವಕನ ವಿಚಿತ್ರ ಹೇಳಿಕ

ನವದೆಹಲಿ(ಫೆ. 16) ರಾಷ್ಟ್ರೀಯ ಭದ್ರತಾ ಸಲಹೆಗಾರ (ational Security Adviser) ಅಜಿತ್ ದೋವಲ್ (Ajit Doval) ಅವರ ಮನೆಗೆ (Residence)  ನುಗ್ಗಲು ಪ್ರಯತ್ನಿಸಿದ ವ್ಯಕ್ತಿಯನ್ನು  ಬಂಧಿಸಲಾಗಿದೆ. ಏಕಾಏಕಿ ಬಂದ ವ್ಯಕ್ತಿ ಕಾರಿನಲ್ಲಿ ದೋವಲ್ ಅವರ ನಿವಾಸಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆತನ ಕಾರನ್ನು ತಡೆದ ಭದ್ರತಾ ಸಿಬ್ಬಂದಿ ಕೂಡಲೇ ಆಸಾಮಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ವಿಚಾರಣೆಗೆ ಒಳಪಡಿಸಿದೆ. ಆ ವ್ಯಕ್ತಿ ಬಾಡಿಗೆ ಕಾರೊಂದನ್ನು ಬಳಸಿ ಚಾಲನೆ ಮಾಡುತ್ತಿದ್ದ. ತನ್ನ ದೇಹದೊಳಗೆ ಯಾರೋ ಒಬ್ಬರು ಚಿಪ್ ಅಳವಡಿಸಿದ್ದು, ತನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಚಾರಣೆ ವೇಳೆ ಆತ ಪೊಲೀಸರಿಗೆ ತಿಳಿಸಿದ್ದಾನೆ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎನ್ನುವಂತೆಯೂ ಪೊಲೀಸರಿಗೆ ತೋರಿದೆ.

ಬೆಂಗಳೂರು ಮೂಲದವ: ಅಷ್ಟಕ್ಕೂ ಕಾರು ನುಗ್ಗಿಸಲು ಯತ್ನಿಸಿದವ ಬೆಂಗಳೂರು(Bengaluru) ಮೂಲದವ. 43 ವರ್ಷದ ವ್ಯಕ್ತಿ ವಿಚಾರಣೆ ವೇಳೆ ತಮ್ಮ ದೇಹದೊಳಗೆ ಯಾರೋ ಚಿಪ್ ಅಳವಡಿಸಿದ್ದು, ಅವರು ನನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ  ಎಂದು ಪೊಲೀಸರ ಮುಂದೆ ನಿರಂತರವಾಗಿ ಹಲುಬುತ್ತಲೇ ಇದ್ದಾನೆ.

ಅಲ್ಲಿ ಡ್ರೋಣ್ ದಾಳಿ ಆದರೆ ಇಲ್ಲಿ  ಏನಾಗಿತ್ತು?

ಮನೆಗೆ ನುಗ್ಗಲು ಯತ್ನಿಸಿದ ತಕ್ಷಣಕ್ಕೆ ಸ್ಥಳೀಯ ಪೊಲೀಸರು ಮತ್ತು ವಿಶೇಷ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿತು. ವ್ಯಕ್ತಿಯನ್ನು ಕರೆದುಕೊಂಡು ಲೋಧಿ ಕಾಲೋನಿಯಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿ ಒಂದು ಹಂತದ ವಿಚಾರಣೆ ನಡೆಸಲಾಗಿದೆ. ಇದೆಲ್ಲದರ ಪರಿಣಾಮ ನೀಡಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಳ  ಮಾಡಲಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರಿಗೆ 'ಝೆಡ್ ಪ್ಲಸ್' ಭದ್ರತೆ ಒದಗಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ದೋವಲ್ ಅವರ ನಿವಾಸಕ್ಕೆ ಭಾರಿ ಭದ್ರತೆ ನಿಯೋಜಿಸಿದೆ. 

ಆಗಿದ್ದೇನು?: ಬುಧವಾರ ಮುಂಜಾನೆ 7.30ರ ಸುಮಾರಿಗೆ ಕೆಂಪು ಬಣ್ಣದ ಎಸ್‌ಯುವಿ ಚಾಲನೆ ಮಾಡಿಕೊಂಡು ಬಂದ ಯುವಕ ದೆಹಲಿಯಲ್ಲಿರುವ ಅಜಿತ್‌ ದೋವಲ್‌ ಅವರ ಮನೆಯ ಗೇಟಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಈ ಸಮಯದಲ್ಲಿ ಮನೆಗೆ ಭದ್ರತೆ ಒದಗಿಸುತ್ತಿದ್ದ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯ ಯೋಧರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ನಡೆದ ವೇಳೆ ದೋವಲ್‌ ಅವರು ಮನೆಯಲ್ಲಿದ್ದರು.

ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ನೋಯ್ಡಾದಿಂದ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಹಿಂದೆ ಸರಿದಿದ್ದ  ಚೀನಾ: ಕಾಲು ಕರೆದುಕೊಂಡು ಗಲಾಟೆ ಮಾಡುತ್ತಿದ್ದ ಚೀನಾ ದೋವೆಲ್ ತಂತ್ರದ ನಂತರ ಮೆತ್ತಗಾಗಿತ್ತು.  ಭಾರತ-ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸಂಘರ್ಷ ಏರ್ಪಟ್ಟಿದ್ದ ನಾಲ್ಕು ವಿವಾದಿತ ಸ್ಥಳಗಳ ಪೈಕಿ ಎರಡು ಸ್ಥಳಗಳಿಂದ ಉಭಯ ಸೇನೆಗಳು ಪೂರ್ವ ನಿರ್ಧರಿತ ರೀತಿಯಲ್ಲಿ 2 ಕಿ.ಮೀ.ನಷ್ಟುಹಿಂದಕ್ಕೆ ಸರಿಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಗಲ್ವಾನ್‌ ಕಣಿವೆಯಲ್ಲಿ ಮಂಗಳವಾರ ಹಾಗೂ ಹಾಟ್‌ ಸ್ಟ್ರಿಂಗ್‌ ಪ್ರದೇಶದ ಗಸ್ತು ಪಾಯಿಂಟ್‌ 15ರ  ಚಿನಾ ಸೇನೆ ಖಾಲಿ ಮಾಡಿತ್ತು.

ಗೋಗ್ರಾ ಪ್ರದೇಶದ 17ಎ ಗಸ್ತು ಪಾಯಿಂಟ್‌ನಿಂದ ಗುರುವಾರ ಉಭಯ ಸೇನೆಗಳು 2 ಕಿ.ಮೀ. ಹಿಂದಕ್ಕೆ ಸರಿಯಲಿವೆ ಎಂದು ಹೇಳಲಾಗಿದೆ. ಆದರೆ, ನಾಲ್ಕನೇ ವಿವಾದಿತ ಪ್ರದೇಶವಾದ ಪ್ಯಾಂಗಾಂಗ್‌ ಲೇಕ್‌ನ ಫಿಂಗರ್‌ 4 ಪ್ರದೇಶದಲ್ಲಿ ಈಗಲೂ ಚೀನಾದ ಚಟುವಟಿಕೆಗಳು ಕಂಡುಬರುತ್ತಿವೆ. ಅಲ್ಲಿಂದ ವಾಹನಗಳು ಹಾಗೂ ಟೆಂಟ್‌ಗಳನ್ನು ತೆರವುಗೊಳಿಸಿದ್ದರೂ ಕಣಿವೆಯ ಬೆಟ್ಟದ ಮೇಲೆ ಚೀನಾದ ಸೇನೆ ಈಗಲೂ ಇದೆ ಎಂದು ಮೂಲಗಳು ಹೇಳಿದ್ದವು.
 

click me!