54 ವರ್ಷಗಳ ಹಿಂದೆ ಕದ್ದ 37 ರೂಪಾಯಿಯನ್ನು ಬಡ್ಡಿ ಸಮೇತ ಹಿಂದಿರುಗಿಸಿದ ವ್ಯಕ್ತಿಯೊಬ್ಬರ ಕಥೆ ಇದು. ಕಳ್ಳತನದ ನಂತರ ಪಶ್ಚಾತ್ತಾಪದಿಂದ ಬಳಲುತ್ತಿದ್ದ ರಂಜಿತ್, ಬೈಬಲ್ ಓದಿದ ನಂತರ ಹಣ ಹಿಂದಿರುಗಿಸಲು ನಿರ್ಧರಿಸಿದರು.
ಚೆನ್ನೈ: ಸಾಲ ಮತ್ತು ಕಳ್ಳತನ ಎಂಬ ಪದಗಳು ಬೇರೆ ಅರ್ಥಗಳನ್ನು ಹೊಂದಿದೆ. ಉದ್ದೇಶಪೂರ್ವಕವಾಗಿ ಸಾಲ ಹಿಂದಿರುಗಿಸದೇ ಇದ್ರೆ ಅದನ್ನು ಕಳ್ಳತನ ಎಂದು ವ್ಯಾಖ್ಯಾನಿಸಬಹುದು. ಕೆಲವರು ಸಾಲ ಪಡೆದು ಹಿಂದಿರುಗಿಸೋದನ್ನು ಮರೆಯತ್ತಾರೆ. ತುಂಬಾ ದಿನಗಳ ಬಳಿಕ ನೆನಪು ಮಾಡಿಕೊಂಡು ಹಿಂದಿರುಗಿಸುವ ಜನರನ್ನು ನೋಡಿರುತ್ತೇವೆ. ಇಲ್ಲೋರ್ವ ವ್ಯಕ್ತಿ 54 ವರ್ಷದ ಕದ್ದಿದ್ದ 37 ರೂಪಾಯಿಯನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದಾರೆ. 37 ರೂಪಾಯಿಗೆ 54 ವರ್ಷದ ನಂತರ ಆ ವ್ಯಕ್ತಿ ಕೊಟ್ಟ ಹಣ ಎಷ್ಟು ಗೊತ್ತಾ? 54 ವರ್ಷದ ಹಿಂದೆ ಕಳೆದುಕೊಂಡಿದ್ದ 37 ರೂಪಾಯಿಗೆ ದೊಡ್ಡಮೊತ್ತ ಸ್ವೀಕರಿಸಿದ ವ್ಯಕ್ತಿ ಸಂತೋಷ ವ್ಯಕ್ತಪಡಿಸಿದ್ದಾರೆ.
ರಂಜಿತ್ ಎಂಬವರು 1970ರಲ್ಲಿ 37 ರೂಪಾಯಿ ಕಳ್ಳತನ ಮಾಡಿದ್ದರು. ಆದ್ರೆ ಈ ಕಳ್ಳತನ ರಂಜಿತ್ ಮನದಲ್ಲಿ ತಾನು ಮಾಡದ್ದು ತಪ್ಪೆಂದು ಕಾಡುತ್ತಿತ್ತು. ಇದೀಗ 54 ವರ್ಷದ ಬಳಿಕ ಕಳ್ಳತನ ಮಾಡಿದ್ದ 37 ರೂಪಾಯಿಯನ್ನು ಹಿಂದಿರುಗಿಸಿದ್ದಾರೆ. ಬಿಬಿಸಿ ವರದಿ ಪ್ರಕಾರ, ಯುವಕನಾಗಿದ್ದ ರಂಜಿತ್ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಶ್ರೀಲಂಕಾದ ನುವಾರಾ ಬಳಿಯಲ್ಲಿಯ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ರಂಜಿತ್ ಜೀವನ ನಡೆಸುತ್ತಿದ್ದರು.
ಒಂದು ದಿನ ತೋಟದ ಮಾಲೀಕರು ಮನೆಯ ಕೆಲಸಕ್ಕಾಗಿ ರಂಜಿತ್ ಅವರನ್ನು ಕರೆಸಿಕೊಂಡಿದ್ದರು. ಮಾಲೀಕರು ಹೊಸ ಮನೆಗೆ ಹೋಗುತ್ತಿರುವ ಕಾರಣ ವಸ್ತುಗಳನ್ನು ಸ್ಥಳಾಂತರಿಸುವ ಕೆಲಸಕ್ಕಾಗಿ ರಂಜಿತ್ ಹೋಗಿದ್ದರು. ಸಾಮಾನುಗಳನ್ನು ಶಿಫ್ಟ್ ಮಾಡುವ ಸಂದರ್ಭದಲ್ಲಿ ರಂಜಿತ್‌ಗೆ 37 ರೂಪಾಯಿ ಸಿಕ್ಕಿತ್ತು. ಅಂದಿನ ದಿನಕ್ಕೆ 37 ರೂ. ಅತಿದೊಡ್ಡ ಮೊತ್ತವಾಗಿತ್ತು. ಬಡತನದಲ್ಲಿ ಬೆಂದಿದ್ದ ರಂಜಿತ್ ಹಣವನ್ನು ಹಿಂದಿರುಗಿಸದೇ ಜೇಬಿಗೆ ಹಾಕಿಕೊಂಡಿದ್ದರು.
ಕೆಲ ದಿನಗಳ ಬಳಿಕ ತೋಟದ ಮಾಲೀಕ ಮಸ್ರೂಫ್ ಸಗುಯಿ ಅವರಿಗೆ ಹಾಸಿಗೆ ಕೆಳಗೆ ಹಣ ಇರಿಸೋದು ನೆನಪಾಗಿದೆ. ಕೂಡಲೇ ರಂಜಿತ್ ಅವರನ್ನು ಕರೆಸಿ ಹಣದ ಬಗ್ಗೆ ವಿಚಾರಣೆ ನಡೆಸಿದ್ದರು. ಆದ್ರೆ ರಂಜಿತ್ ಯಾವುದೇ ಉತ್ತರ ನೀಡದೇ ಹಣ ಸಿಕ್ಕಿಲ್ಲ ಎಂದು ಹೇಳಿದ್ದರು. ರಂಜಿತ್ ಪೋಷಕರು ಸಹ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬ ದೊಡ್ಡದಾಗಿದ್ದರಿಂದ ಯಾವ ಮಕ್ಕಳಿಗೂ ಶಿಕ್ಷಣ ಕೊಡಿಸಿರಲಿಲ್ಲ.
17ನೇ ವರ್ಷದಲ್ಲಿ ರಂಜಿತ್ ತಮಿಳುನಾಡಿಗೆ ಬಂದು ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದರು. 1977ರ ನಂತರ ರಂಜಿತ್ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಶುರುವಾಯ್ತು. ಆರಂಭದಲ್ಲಿ ಚಿಕ್ಕ ಅಂಗಡಿ ಆರಂಭಿಸಿ ಕೈ ಸುಟ್ಟಕೊಂಡರು. ನಂತರ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಇಲ್ಲಿ ಅಡುಗೆ ಮಾಡೋದನ್ನು ಕಲಿತ ರಂಜಿತ್ ಕಾಲನಂತರ ತಮ್ಮದೇ ಆದ ಫುಡ್ ಕಂಪನಿ ಆರಂಭಿಸಿದರು. ಇಂದು ಈ ಫುಡ್ ಕಂಪನಿಯಲ್ಲಿ ಸುಮಾರು 125ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾಲೀಕರ ಆಹಾರದಲ್ಲಿ ಮೂತ್ರ ಸೇರಸ್ತಿದ್ದು ಯಾಕೆ ಎಂಬುದರ ಸತ್ಯ ಬಿಚ್ಚಿಟ್ಟ ರೀನಾ? ಕಾರಣ ಕೇಳಿ ಎಲ್ಲರೂ ಶಾಕ್
ಒಂದು ಬೈಬಲ್ ಓದುವ ಸಂದರ್ಭದಲ್ಲಿ ದುಷ್ಟ ವ್ಯಕ್ತಿಯು ಯಾರ ಹಣವನ್ನು ಹಿಂದಿರುಗಿಸುವುದಿಲ್ಲ ಮತ್ತು ನೀತಿವಂತನು ಯಾರ ಸಾಲ ಅಥವಾ ಋಣವನ್ನು ಇರಿಸಿಕೊಳ್ಳಲ್ಲ ಎಂಬ ಸಾಲುಗಳನ್ನು ಓದುತ್ತಾರೆ. ಈ ಸಾಲುಗಳನ್ನು ಗಂಭೀರವಾಗಿ ತೆಗೆದುಕೊಂಡ ರಂಜಿತ್ ಅವರಿಗೆ 50 ವರ್ಷದ ಹಿಂದೆಯ 37 ರೂಪಾಯಿ ಕಳ್ಳತನ ಬೆಳಕಿಗೆ ಬಂದಿದೆ. ಅಂದೇ ಆ 37 ರೂಪಾಯಿ ಹಣ ಹಿಂದಿರುಗಿಸುವ ನಿರ್ಧಾರ ಮಾಡಿ, ಮಸ್ರೂಫ್ ಸಗುಯಿ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.
ಗೆಳೆಯರ ಸಹಾಯದಿಂದ ಹುಡುಕಾಟ ಆರಂಭಿಸಿದಾಗ ಮಸ್ರೂಫ್ ಮತ್ತು ಅವರ ಪತ್ನಿ ನಿಧನವಾಗಿರುವ ವಿಷಯ ಗೊತ್ತಾಗಿದೆ. ಮಸ್ರೂಫ್ ದಂಪತಿಯ ಆರು ಮಕ್ಕಳಲ್ಲಿ ಒಬ್ಬ ಮಗ ಸಹ ಮೃತಪಟ್ಟಿದ್ದನು. ಅಂತಿಮವಾಗಿ ಐವರಲ್ಲಿ ನುವಾರೆಲಿಯಾದಲ್ಲಿ ವಾಸವಾಗಿರುವ ಮಗನನ್ನು ಸಂಪರ್ಕಿಸಿ, ಪೋಷಕರಿಂದ ಪಡೆದ ಸಾಲವನ್ನು ಹಿಂದಿರುಗಿಸಲು ಬರೋದಾಗಿ ಹೇಳಿದ್ದಾರೆ. ಈ ವರ್ಷ ಆಗಸ್ಟ್ 21ರಂದು ಶ್ರೀಲಂಕಾಕ್ಕೆ ತೆರಳಿ ರೆಸ್ಟೋರೆಂಟ್‌ನಲ್ಲಿ ಮಸ್ರೂಫ್ ಅವರ ಮಗನನ್ನು ಭೇಟಿಯಾಗಿ, 1970ರ ಘಟನೆ ವಿವರಿಸಿ 37 ರೂಪಾಯಿಗೆ 70 ಸಾವಿರ ರೂಪಾಯಿ ಹಿಂದಿರುಗಿಸಿದ್ದಾರೆ.
ಇದನ್ನೂ ಓದಿ: ಫ್ರೀ ಫ್ರೀ ಫ್ರೀ, ದೀಪಾವಳಿಗೆ ಜಿಯೋದಿಂದ ಮೂರು ತಿಂಗಳು ಉಚಿತ ಸಬ್‌ಸ್ಕ್ರಿಪ್ಷನ್; ಕೋಟ್ಯಂತರ ಬಳಕೆದಾರರಿಗೆ ಗಿಫ್ಟ್