ತನಗೆ ಚಪ್ಪಲಿ ತೋರಿಸಿ ಬೈದಾಗ್ಲೂ ಮೌನವಾಗಿ ಸಹಿಸಿಕೊಂಡಿದ್ದವ ಹೆಂಡ್ತಿ ವಿಷ್ಯಕ್ಕೆ ಬಂದಾಗ ಕೆನ್ನೆಗೆ ಚಟಾರನೆ ಬಾರಿಸಿದ

Published : Mar 14, 2026, 12:37 PM IST
video viral

ಸಾರಾಂಶ

Indian Railway Viral News: ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಾಳ್ಮೆ ಬಹಳ ಮುಖ್ಯ. ಆದರೆ ರೈಲೊಂದರಲ್ಲಿ ಸೀಟಿಗಾಗಿ ನಡೆದ ಜಗಳ ಈಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ತನ್ನನ್ನು ಅವಮಾನಿಸಿದಾಗ ಸುಮ್ಮನಿದ್ದ ಯುವಕ, ತನ್ನ ಪತ್ನಿಯ ಬಗ್ಗೆ ಹಗುರವಾಗಿ ಮಾತನಾಡಿದ ಮಹಿಳೆಗೆ ರೈಲಿನಲ್ಲೇ ಸರಿಯಾಗಿ ಬಾರಿಸಿದ್ದಾನೆ. ಇಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ರೈಲು ಪ್ರಯಾಣದಲ್ಲಿ ಸೀಟಿಗಾಗಿ ನಡೆಯುವ ಸಣ್ಣಪುಟ್ಟ ಕಿರಿಕಿರಿಗಳು ಸಾಮಾನ್ಯ. ಆದರೆ ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ನಡೆದ ಈ ಘಟನೆ ಮಾತ್ರ ಮಿತಿಮೀರಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಕೇವಲ ಒಂದು ಸೀಟಿಗಾಗಿ ಆರಂಭವಾದ ಮಾತಿನ ಚಕಮಕಿ, ಅಂತಿಮವಾಗಿ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿಗೆ ದಾರಿ ಮಾಡಿಕೊಟ್ಟಿದೆ. ಜನರು ಕಿಕ್ಕಿರಿದು ತುಂಬಿದ್ದ ಬೋಗಿಯಲ್ಲಿ ಸಂಯಮ ಮಾಯವಾಗಿ ಅಕ್ಷರಶಃ ರಣರಂಗ ನಿರ್ಮಾಣವಾಗಿತ್ತು.

ಘಟನೆಯ ವಿವರ ಮತ್ತು ಹಿನ್ನೆಲೆ

ವರದಿಗಳ ಪ್ರಕಾರ, ಬಿಹಾರದ ರೈಲು ಮಾರ್ಗವೊಂದರ ಜನರಲ್ ಬೋಗಿಯಲ್ಲಿ ಈ ಘಟನೆ ನಡೆದಿದೆ. ಅತಿಯಾದ ಜನದಟ್ಟಣೆ ಇದ್ದ ಕಾರಣ ಕಿಟಕಿ ಪಕ್ಕದ ಸೀಟಿನ ವಿಚಾರದಲ್ಲಿ ಮಹಿಳೆ ಮತ್ತು ಯುವಕನ ನಡುವೆ ವಾಗ್ವಾದ ಆರಂಭವಾಯಿತು. ಮಹಿಳೆ ತನ್ನ ಮಗಳೊಂದಿಗೆ ಪ್ರಯಾಣಿಸುತ್ತಿದ್ದರೆ, ಅದೇ ಸೀಟಿನ ಕೊನೆಯಲ್ಲಿ ಯುವಕ ತನ್ನ ಪತ್ನಿಯೊಂದಿಗೆ ಕುಳಿತಿದ್ದನು. ಬೋಗಿಯಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಇದ್ದ ಕಾರಣ, ಪರಸ್ಪರ ತಳ್ಳಾಟ ಮತ್ತು ಜಾಗಕ್ಕಾಗಿ ಉಂಟಾದ ಅಸಹನೆಯೇ ಈ ದೊಡ್ಡ ಜಗಳಕ್ಕೆ ನಾಂದಿ ಹಾಡಿತು.

ಅಹಂಕಾರದ ಮಾತುಗಳು ಮತ್ತು ಚಪ್ಪಲಿ ಪ್ರದರ್ಶನ

ವಿಡಿಯೋದಲ್ಲಿ ಕಾಣುವಂತೆ, ಜಗಳದ ತೀವ್ರತೆ ಹೆಚ್ಚಾದಾಗ ಮಹಿಳೆ ಏಕಾಏಕಿ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕಲು ಶುರುಮಾಡಿದಳು. "ನೀನು ಲೇಡಿಸ್ ಬೋಗಿಗೆ ಹೇಗೆ ಬಂದೆ? ನಿನ್ನನ್ನು ಟಿಟಿ ಬಳಿ ಹೇಳಿ ರೈಲಿನಿಂದ ಹೊರಹಾಕಿಸುತ್ತೇನೆ" ಎಂದು ಆರ್ಭಟಿಸಿದಳು. ಅಷ್ಟೇ ಅಲ್ಲದೆ, ತನ್ನ ಕುಟುಂಬದ ಹಿನ್ನೆಲೆಯನ್ನು ಹೇಳುತ್ತಾ ಅಹಂಕಾರ ಪ್ರದರ್ಶಿಸಿದ ಮಹಿಳೆ, "ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾನೆ, ನನ್ನ ಪತಿ ಸುಪರ್ ವೈಸರ್ ಕೆಲಸದಲ್ಲಿದ್ದಾರೆ" ಎಂದು ಪದೇ ಪದೇ ಕಿರುಚುತ್ತಿದ್ದಳು. ಈ ನಡುವೆ ತನ್ನ ಮಗಳ ರೂಪದ ಬಗ್ಗೆ ಮಾತನಾಡುತ್ತಾ ಯುವಕನ ಪತ್ನಿಯ ಬಗ್ಗೆಯೂ ಅತ್ಯಂತ ಹಗುರವಾಗಿ ಮತ್ತು ಅವಮಾನಕಾರಿಯಾಗಿ ಮಾತನಾಡಿದಳು.

ಯುವಕನ ತಾಳ್ಮೆ ಮೀರಿದ ಕ್ಷಣ
ಯುವಕನ ಪತ್ನಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿ "ಇದು ಅತಿಯಾಯಿತು, ಸುಮ್ಮನಿರಿ" ಎಂದು ವಿನಂತಿಸಿದಾಗ, ಮಹಿಳೆ ಇನ್ನಷ್ಟು ಉಗ್ರವಾಗಿ ವರ್ತಿಸಿದಳು. ಆಕೆಯ ಕೈಯನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ತನ್ನ ಕಣ್ಣೆದುರೇ ಪತ್ನಿಗೆ ಕೆಟ್ಟದಾಗಿ ಬೈದು ಅವಮಾನ ಮಾಡಿದ್ದನ್ನು ಕಂಡು ಯುವಕನ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡ. ತಕ್ಷಣವೇ ಸೀಟಿನಿಂದ ಎದ್ದು ನಿಂತ ಯುವಕ, ಆ ಮಹಿಳೆಗೆ ಸತತವಾಗಿ ಎರಡು-ಮೂರು ಬಾರಿ ಜೋರಾಗಿ ಕಪಾಳಮೋಕ್ಷ ಮಾಡಿದನು. ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಈ ಹಠಾತ್ ಬೆಳವಣಿಗೆಯಿಂದ ದಂಗಾದರು. ನಂತರ ಯುವಕನ ಪತ್ನಿಯೇ ಇಬ್ಬರ ನಡುವೆ ಬಂದು ಜಗಳವನ್ನು ಬಿಡಿಸಬೇಕಾಯಿತು.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ. ಒಂದು ಬಣದವರು "ಮಹಿಳೆ ಹದ್ದುಮೀರಿ ವರ್ತಿಸಿದ್ದಾಳೆ, ತನ್ನ ಹೆಂಡತಿಗೆ ಅವಮಾನವಾದಾಗ ಯಾವ ಗಂಡ ತಾನೇ ಸುಮ್ಮನಿರುತ್ತಾನೆ?" ಎಂದು ಯುವಕನನ್ನು ಬೆಂಬಲಿಸಿದ್ದಾರೆ. ಆದರೆ ಇನ್ನೊಂದು ಬಣದವರು "ಕಾರಣ ಏನೇ ಇರಲಿ, ಇಷ್ಟೊಂದು ಜನರ ಮುಂದೆ ಒಬ್ಬ ಮಹಿಳೆಯ ಮೇಲೆ ಕೈ ಮಾಡಿದ್ದು ಖಂಡಿತವಾಗಿಯೂ ತಪ್ಪು" ಎನ್ನುತ್ತಿದ್ದಾರೆ. ಸದ್ಯಕ್ಕೆ ರೈಲ್ವೆ ಇಲಾಖೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ಜನರಲ್ ಬೋಗಿಗಳ ದಯನೀಯ ಸ್ಥಿತಿ ಮತ್ತು ಪ್ರಯಾಣಿಕರ ಮಾನಸಿಕ ಅಸಹನೆಗೆ ಈ ವಿಡಿಯೋ ಸಾಕ್ಷಿಯಾಗಿದೆ. 

ಇಲ್ಲಿದೆ ನೋಡಿ ವಿಡಿಯೋ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಾರ್ಮುಜ್‌ನಲ್ಲಿ ಭಾರತದ ಪವರ್: ಯಾವುದೇ ಬೆಂಗಾವಲು ಇಲ್ಲದೆ ಜಲಸಂಧಿ ದಾಟಿದ 'ಶಿವಾಲಿಕ್,ನಂದಾದೇವಿ'!
Russian Oil: ಮೊದಲು ಧಮ್ಕಿ ಹಾಕ್ತಿದ್ದ ಅಮೆರಿಕ, ಈಗ ರಷ್ಯಾ ತೈಲ ಖರೀದಿಸಿ ಅಂತ ಭಾರತದ ಕಾಲು ಹಿಡಿತಿದೆ: ಇರಾನ್ ಲೇವಡಿ