ಯೂಟ್ಯೂಬ್ ವಿಡಿಯೋ ನೋಡಿದ ಪತ್ನಿಗೆ ತಲಾಖ್, 3 ವರ್ಷದ ದಾಂಪತ್ಯ 3 ನಿಮಿಷದಲ್ಲಿ ಖತಂ!

By Chethan Kumar  |  First Published Dec 8, 2024, 8:50 AM IST

ಯೂಟ್ಯೂಬ್‌ನಲ್ಲಿ ಪೊಲೀಸರ ಕಾರ್ಯಾಚರಣೆ ವಿಡಿಯೋ ನೋಡುತ್ತಿದ್ದ ಪತ್ನಿ ವಿರುದ್ಧ ಗಂಡ ಗರಂ ಆಗಿದ್ದಾನೆ. ಇಷ್ಟೇ ಆಗಿದ್ದರೆ ಏನೋ ಗಂಡ ಹೆಂಡತಿ ಜಗಳ ಅಂತಾ ಸುಮ್ಮನಿರಬಹುದು. ಆದರೆ ಇದೇ ವಿಚಾರಕ್ಕೆ ಪತ್ನಿಗೆ ತಲಾಖ್ ನೀಡಿದ ಘಟನೆ ನಡೆದಿದೆ.
 


ಸಂಭಾಲ್(ಡಿ.08) ಪತಿ ಹಾಗೂ ಪತ್ನಿ ನಡುವಿನ ಸಂಬಂಧ ಮುರಿದು ಬೀಳಲು ಕಾರಣಗಳು ಬೇಕಿಲ್ಲ. ಇದೀಗ ಗಂಡನೊಬ್ಬ ತನ್ನ ಪತ್ನಿ ಯೂಟ್ಯೂಬ್‌ನಲ್ಲಿ ಪೊಲೀಸ್ ಕಾರ್ಯಾಚರಣೆ ವಿಡಿಯೋವನ್ನು ನೋಡಿದ್ದಾಳೆ. ಇದು ಪತಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.ಇದೇ ವಿಚಾರದಲ್ಲಿ ಭಾರಿ ಕುಸ್ತಿ ನಡೆದಿದೆ. ಕೊನೆಗೆ ಮೂರು ವರ್ಷದ ದಾಂಪತ್ಯವನ್ನು ಮೂರು ನಿಮಿಷದಲ್ಲಿ ಅಂತ್ಯಗೊಳಿಸಿದ ಘಟನೆ ನಡೆದಿದೆ. ಹೌದು, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಇದೀಗ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಯಾವುದೇ ಕಾರಣವಿಲ್ಲದೆ, ಸುಖಾಸುಮ್ಮನೆ ಕಾರಣ ಸೃಷ್ಟಿಸಿ ತಲಾಖ್ ನೀಡಲಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಮೊರಾದಾಬ್ ನಿವಾಸಿ ಮುಸ್ಲಿಮ್ ಮಹಿಳೆ ನಿಡಾ ಇದೀಗ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾಳೆ. ತನ್ನ ಪತಿ ಇಜಾಝುಲ್ ಕ್ಷುಲ್ಲಕ ಕಾರಣಗಳನ್ನು ನೀಡಿ ತಲಾಖ್ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ನಾನು ಸಂಭಾಲ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ವಿಡಿಯೋವನ್ನು ಯೂಟ್ಯೂಬ್ ಮೂಲಕ ನೋಡುತ್ತಿದ್ದೆ. ಇದನ್ನು ಇಜಾಝುಲ್ ಪ್ರಶ್ನಿಸಿದ್ದಾನೆ. ನೀನು ಮುಸ್ಲಿಮ್, ಪೊಲೀಸರ ವಿಡಿಯೋ ನೋಡುತ್ತಿರುವುದ್ಯಾಕೆ? ಎಂದು ಪ್ರಶ್ನಿಸಿದ್ದಾನೆ. ಬಳಿಕ ಜಗಳ ಶುರುವಾಗಿ ಡಿವೋರ್ಸ್ ನೀಡಿದ್ದಾನೆ ಎಂದು ನಿಡಾ ಆರೋಪಿಸಿದ್ದಾಳೆ.

Tap to resize

Latest Videos

ಬಿಜೆಪಿಗೆ ಮತ ನೀಡಿದ ಪತ್ನಿಗೆ ತ್ರಿವಳಿ ತಲಾಖ್, ಕಮಲ ಬೆಂಬಲಿಸಿ 8 ವರ್ಷದ ದಾಂಪತ್ಯ ಅಂತ್ಯ!

ಮದುವೆಗಾಗಿ ಸಂಭಾಲ್‌ಗೆ ತೆರಳಬೇಕಿತ್ತು. ಜೊತೆಗೆ ಮದುವೆ ಕೆಲ ವಸ್ತುಗಳು, ಬಟ್ಟೆ ಖರೀದಿ ಮಾಡುವ ಕೆಲಸವೂ ಬಾಕಿ ಇತ್ತು. ಹೀಗಾಗಿ ಸಂಭಾಲ್‌ಗೆ ತೆರಳಲು ನಿರ್ಧರಿಸಿದ್ದೆ. ಆದರೆ ಸಂಭಾಲ್‌ನಲ್ಲಿ ಪ್ರತಿಭಟನೆ ನಡೆದಿದ್ದ ಕಾರಣ ಸದ್ಯದ ಪರಿಸ್ಥಿತಿ ಕುರಿತು ತಿಳಿದೊಳ್ಳಲು ಯೂಟ್ಯೂಬ್ ನೋಡಿದ್ದೆ. ಸಂಭಾಲ್‌ನಲ್ಲಿ ಸದ್ಯ ಪರಿಸ್ಥಿತಿ ಶಾಂತವಿದ್ದರೆ ತೆರಳಲು ನಿರ್ಧರಿಸಿದ್ದೆ. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಹತ್ತಿಕ್ಕಿದ ವಿಡಿಯೋ ನೋಡಿದೆ. ಈ ವಿಡಿಯೋ ಮುಸ್ಲಿಮ್ ಮತಕ್ಕೆ ವಿರುದ್ದವಾಗಿದೆ ಎಂದು ಪತಿ ಆರೋಪಿಸಿ ತಲಾಖ್ ನೀಡಿದ್ದಾನೆ ಎಂದು ನಿಡಾ ಅಳಲತ್ತುಕೊಂಡಿದ್ದಾಳೆ. 

ಏನಿದು ಘಟನೆ?
ಸಂಭಾಲ್ ಇತ್ತೀಚೆಗೆ ಭಾರಿ ಸದ್ದು ಮಾಡಿದೆ. ಸಂಭಾಲ್ ಮಸೀದಿ ವಿವಾದ ತೀವ್ರಗೊಂಡಿತ್ತು. ಹಿಂದೂ ಹರಿಹರ ಮಂದಿರದ ಮೇಲೆ ಮಸೀದಿ ನಿರ್ಮಿಸಲಾಗಿದೆ ಅನ್ನೋ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತ್ತು. ಇದರಿಂದ ಸಂಭಾಲ್ ಸಮೀಕ್ಷೆಗೆ ಆಗಮಿಸಿದ ವೇಳೆ ಭಾರಿ ಪ್ರತಿಭಟನೆ ಎದುರಾಗಿತ್ತು. ಅಧಿಕಾರಿಗಳ ಮೇಲೆ ಕಲ್ಲು ತೂರಾಟಗಳು ನಡೆದಿತ್ತು. ಮಸೀದಿ ರಕ್ಷಣೆ ಹೆಸರಿನಲ್ಲ ಭಾರಿ ಹಿಂಸಾಚಾರ ನಡೆದಿತ್ತು. ಹೀಗಾಗಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಸಂಭಾಲ್ ಮಸೀದಿ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆ ವಿಡಿಯೋವನ್ನು ನಿಡಾ ನೋಡಿರುವುದೇ ಈ ಡಿವೋರ್ಸ್‌ಗೆ ಕಾರಣವಾಗಿದೆ.

ಮುಸ್ಲಿಮರು ಮಸೀದಿ ರಕ್ಷಣೆಗಾಗಿ ನಡೆಸಿದ ಹೋರಾಟ ಅದು. ಅಲ್ಲಾನ ಕೃಪೆ ಅವರ ಮೇಲಿದೆ. ನೀನು ಮುಸ್ಲಿಮ್ ಆಗಿ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರ ಕಾರ್ಯಾಚರಣೆ ವಿಡಿಯೋ ನೋಡುತ್ತಿದ್ದೆ. ಇದು ಇಸ್ಲಾಂಗೆ ವಿರುದ್ಧವಾಗಿರುವನ್ನು ನೋಡಿದ್ದಿ ಎಂದು ಪತಿ ಇಜಾಝುಲ್ ಜಗಳ ತೆಗೆದಿದ್ದಾನೆ ಎಂದು ಪತ್ನಿ ನಿಡಾ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಲ್ಲಿ ಉಲ್ಲೇಖಿಸಿದ್ದಾರೆ. ವಿಡಿಯೋ ನೋಡಿರುವುದರಲ್ಲಿ ಏನು ತಪ್ಪು ಎಂದು ಪ್ರಸ್ನಿಸಿರುವ ನಿಡಾ, ತನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.

ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಲಾಗಿದೆ ಎಂದು ನಿಡಾ ಆರೋಪಿಸಿದ್ದಾಳೆ. 2017ರಲ್ಲಿ ಮೋದಿ ಸರ್ಕಾರ ತಲಾಖ್ ನಿಷೇಧಿಸಿದೆ. ಈ ಮೂಲಕ ಮುಸ್ಲಿಮ್ ಹೆಣ್ಣುಮಕ್ಕಳ ವೈವಾಹಿಕ ಜೀವನ ನರಕವಾಗುವುದನ್ನು ತಪ್ಪಿಸಿದೆ. ತಲಾಖ್ ನಿಷೇಧಿಸಿದರೂ ಹಲವು ಪ್ರಕರಣಗಳು ದಾಖಲಾಗಿದೆ.ಇದೀಗ ಸಂಭಾಲ್ ಘಟನೆಯೂ ಸೇರಿಕೊಂಡಿದೆ.
 

click me!