ಬೆಮೆಲ್‌ ನಿರ್ಮಿತ ಕೋಚ್‌ ಕಳಪೆ, ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ಟ್ರೇನ್‌ ಇನ್ನಷ್ಟು ವಿಳಂಬ

By Santosh Naik  |  First Published Dec 7, 2024, 10:13 PM IST

ಬೆಮೆಲ್‌ ನಿರ್ಮಿತ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ಟ್ರೇನ್‌ ಡಿಸೆಂಬರ್‌ ಅಂತ್ಯದಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ಕೋಚ್‌ಗಳಲ್ಲಿ ಹಲವು ಲೋಪದೋಷಗಳನ್ನು ಗುರುತಿಸಿದ್ದರಿಂದ ಟ್ರೇನ್‌ ಕಾರ್ಯಾರಂಭ ವಿಳಂಬವಾಗುವ ಸಾಧ್ಯತೆಯಿದೆ.


ಬೆಂಗಳೂರು (ಡಿ.7): ರಾಜಧಾನಿ ಬೆಂಗಳೂರು ಮೂಲದ ಬೆಮೆಲ್‌ ನಿರ್ಮಿತ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ಟ್ರೇನ್‌ ಟ್ರ್ಯಾಕ್‌ನಲ್ಲಿ ಓಡಾಡೋದು ಇನ್ನೂ ವಿಳಂಬವಾಗಲಿದೆ. ಮೊದಲಿನ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್‌ ಅಂತ್ಯದ ವೇಳೆಗೆ ವಂದೇ ಭಾರತ್‌ ಸ್ಲೀಪರ್‌ ಟ್ರೇನ್‌ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌), ಬೆಮೆಲ್‌ ನಿರ್ಮಿತ ಕೋಚ್‌ಗಳನ್ನು ಕಳಪೆ ಹಾಗೂ ಹಲವು ಲೋಪದೋಷಗಳನ್ನು ಗುರುತು ಮಾಡಿದ್ದರಿಂದ ಟ್ರೇನ್‌ ಕಾರ್ಯಾರಂಭ ವಿಳಂಬವಾಗಲಿದೆ ಎನ್ನಲಾಗಿದೆ. ಐಸಿಎಫ್‌ ಮೂಲಗಳು ಈ ಬಗ್ಗೆ ತಿಳಿಸಿದ್ದು, ಹೆಚ್ಚಿನ ಕ್ವಾಲಿಟಿ ಸಮಸ್ಯೆಗಳ ರೈಲಿನ ಒಳಾಂಗಣಕ್ಕೆ ಸಂಬಂಧಿಸಿದ್ದಾಗಿದೆ. ಉದಾಹರಣೆಗೆ ಇಂಟೀರಿಯರ್ ಪ್ಯಾನೆಲ್‌ಗಳಲ್ಲಿ ಗ್ಯಾಪ್‌ಗಳು ಕಾಣಿಸಿವೆ. ಅಸಮರ್ಪಕ ಸೈಡ್ ಲೋವರ್ ಬರ್ತ್‌ಗಳನ್ನು ಗಮನಿಸಿದ್ದೇವೆ. ಕುಶನ್‌ಗಳು ಚೆನ್ನಾಗಿಲ್ಲ, ಟಾಯ್ಲೆಟ್‌ಗಳಲ್ಲಿ ನೀರು ಲೀಕ್‌ ಆಗುತ್ತಿದೆ. ಪ್ಯಾಸೆಂಜರ್‌ ಅಲಾರಂಗಳು ಕೆಲಸ ಮಾಡುತ್ತಿಲ್ಲ ಎಂದು ಪ್ರಮುಖವಾಗಿ ತಿಳಿಸಿದೆ.

'ಬೆಮಲ್‌ ಬಹಳ ಆತುರವಾಗಿ ಟ್ರೇನ್‌ನ ಒಳಾಂಗಣ ಕೆಲಸ ಮಾಡಿದೆ. ಸರಿಯಾದ ಕ್ವಾಲಿಟಿ ಚೆಕ್‌ ಮಾಡಿಲ್ಲ. ಒಳಾಂಗಣದ ಕೆಲಸಗಳು ಕೂಡ ಪೂರ್ಣವಾಗಿ ಕೆಟ್ಟದ್ದಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ವಂದೇ ಭಾರತ್‌ ಸ್ಲೀಪರ್‌ ಟ್ರೇನ್‌ಗಳು ಟ್ರ್ಯಾಕ್‌ಗೆ ಇಳಿಯಬೇಕಿತ್ತು. ಆದರೆ, ಇದರ ಮಾದರಿ ಟ್ರೇನ್‌ ಇನ್ನಷ್ಟೇ ಲೈನ್‌ ಟ್ರಯಲ್‌ಗೆ ಇಳಿಯಬೇಕಿದೆ' ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಚೇರ್ ಕಾರ್‌ಗಳೊಂದಿಗೆ ವಂದೇ ಭಾರತ್ ರೈಲುಗಳನ್ನು ಮಧ್ಯಮ-ದೂರದ ಮಾರ್ಗಗಳಲ್ಲಿ ನಿರ್ವಹಿಸಲಾಗುತ್ತಿದೆ.

Tap to resize

Latest Videos

ಕಳೆದ ತಿಂಗಳು ಐಸಿಎಫ್‌, ಬೆಮೆಲ್‌ಗೆ ಕಠಿಣ ಶಬ್ದಗಳಲ್ಲಿ ಪತ್ರ ಬರೆದಿತ್ತು.ಅಕ್ಟೋಬರ್ 4 ರಂದು ಆಗಮಿಸಿದ ಮೂಲಮಾದರಿಯ ರೈಲು ಸೆಟ್‌ನಲ್ಲಿ ಸಾಕಷ್ಟು ದೋಷಗಳ ಬಗ್ಗೆ ICF ಕಳವಳ ವ್ಯಕ್ತಪಡಿಸಿದೆ. ವಂದೇ ಭಾರತ್ ಸ್ಲೀಪರ್ ಸೇವೆಯ ಪರಿಚಯವನ್ನು ಸಾರ್ವಜನಿಕರು ಕುತೂಹಲದಿಂದ ನಿರೀಕ್ಷಿಸುತ್ತಿರುವಾಗ ವಿಳಂಬವಾಗುತ್ತಿರುವುದು ಅವರಿಂದ ಟೀಕೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದೆ. ಅಕ್ಟೋಬರ್‌ 5 ರಂದು ಬೆಮೆಲ್‌ಗೆ ಬರೆದ ಪತ್ರದಲ್ಲಿ ಐಸಿಎಫ್‌ ಒಟಟು 81 ಲೋಪದೋಷವನ್ನು ಸರಿಪಡಿಸುವಂತೆ ತಿಳಿಸಿದೆ.

ಈ ಕುರಿತಾಗಿ ಐಸಿಎಫ್‌ ಜನರಲ್‌ ಮ್ಯಾನೇಜರ್‌ ಸುಬ್ಬಾರಾವ್‌ ಅವರು ಮಾತಾಡಿದ್ದು, ಯಾವುದೇ ವಿಳಂಬವಿಲ್ಲ. ಮೂಲಮಾದರಿಯಲ್ಲಿ ನಿರೀಕ್ಷಿಸಲಾದ ಸಣ್ಣ ಕಮಿಷನಿಂಗ್ ಮತ್ತು ಸೈಡ್ ಫರ್ನಿಶಿಂಗ್ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಪ್ರಯೋಗಗಳಿಗಾಗಿ ರೈಲು ಸೆಟ್ ಅನ್ನು ಡಿಸೆಂಬರ್ 10 ರೊಳಗೆ ರೈಲ್ವೆ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO), ಲಕ್ನೋಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಗಂಟೆಗೆ 1 ಸಾವಿರ ಕಿ.ಮೀ; ವಿಮಾನಕ್ಕಿಂತ ವೇಗವಾಗಿ ಹೋಗುವ 'ತೇಲುವ ಟ್ರೇನ್‌' ಕೆಲಸ ಆರಂಭಿಸಿದ ಚೀನಾ!

ICF 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳ 10 ರೇಕ್‌ಗಳಿಗಾಗಿ ಮೇ 2023 ರಲ್ಲಿ BEML ಗೆ ಆರ್ಡರ್ ನೀಡಿತ್ತು. ಈ ರೈಲುಗಳನ್ನು 160 kmph (ಪರೀಕ್ಷೆಯ ಸಮಯದಲ್ಲಿ 180 kmph) ಕಾರ್ಯಾಚರಣೆಯ ವೇಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ರೈಲು ಸೆಟ್ 16 ಕೋಚ್‌ಗಳನ್ನು ಒಳಗೊಂಡಿರುತ್ತದೆ, 1AC, 2AC ಮತ್ತು 3AC ಸಂರಚನೆಗಳಲ್ಲಿ 823 ಬರ್ತ್‌ಗಳಿಗೆ ಅವಕಾಶ ಕಲ್ಪಿಸುತ್ತದೆ.

ಜ್ಯೋತಿ ರೈ ಜೊತೆ ಕೆಲಸ ಮಾಡ್ತೀರಾ, ಇಲ್ಲಿದೆ ನೋಡಿ ಬ್ಯೂಟಿ ಕೊಟ್ಟಿರೋ ಭರ್ಜರಿ ಆಫರ್‌!

click me!