ಬ್ಲಿಂಕಿಟ್‌ ಎಡವಟ್ಟು… ಅಂಡರ್‌ವೇರ್ ಆರ್ಡರ್ ಮಾಡಿದ ಪುರುಷನಿಗೆ ಬಿಕಿನಿ ಬಂತು!

By Mahmad Rafik  |  First Published Sep 8, 2024, 6:20 PM IST

ಆನ್‌ಲೈನ್ ಶಾಪಿಂಗ್‌ನಲ್ಲಿ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ ಬ್ಲಿಂಕ್ ಇಟ್. ಅಂಡರ್‌ವೇರ್ ಬುಕ್ ಮಾಡಿದ ಪುರುಷನಿಗೆ ಬಿಕಿನಿ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಈ ಎಡವಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.


ನವದೆಹಲಿ: ಇಂದು ಎಲ್ಲರೂ ಆನ್‌ಲೈನ್ ಶಾಪಿಂಗ್ ಮಾಡುವ ಮೂಲಕ ಸಮಯ ಉಳಿಸಲು ಬಯಸುತ್ತಾರೆ. ಈ ಕಾರಣದಿಂದಲೇ ಆನ್‌ಲೈನ್ ಶಾಪಿಂಗ್‌ಗಾಗಿ ನೂರಾರು ಅಪ್ಲಿಕೇಶನ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಅಂತಹ ಆಪ್‌ಗಳಲ್ಲಿ ಒಂದು ಬ್ಲಿಂಕ್ ಇಟ್. ಈ ಆಪ್‌ ನಲ್ಲಿ ಚಿಕ್ಕ ವಸ್ತು ಬುಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತದೆ. ಬ್ಲಿಂಕಿಟ್ ಮಾರುಕಟ್ಟೆಯಲ್ಲಿ ತನ್ನ ವೇಗದ ಸರ್ವಿಸ್‌ನಿಂದಲೇ ಫೇಮಸ್ ಆಗಿದೆ. ಇದೀಗ ಬ್ಲಿಂಕ್ ಇಟ್ ವೇಗವಾಗಿ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಅಂಡರ್‌ವೇರ್ ಬುಕ್ ಮಾಡಿದ ಪುರುಷನಿಗೆ ಬಿಕಿನಿ ಕಳುಹಿಸಿದೆ. ಸದ್ಯ ಈ ಎಡವಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಪ್ರಿಯಾಂಶ್ ಎಂಬವರು ಮಹಿಳೆಯರ ಬಿಕಿನಿ ಪ್ಯಾಂಟಿಯ ಪ್ಯಾಕೇಟ್ ಮತ್ತು ಬ್ಲಿಂಕಿಟ್ ಆಪ್ ಕವರ್ ಸಹಿತ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಬ್ಲಿಂಕಿಟ್ ಸೇವಾ ಕೇಂದ್ರಕ್ಕೆ ಕರೆ ಮಾಡಿದೆ. ಆದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಪಾರ್ಸೆಲ್ ಹಿಂದಿರುಗಿ ತೆಗೆದುಕೊಂಡು ಹಣ ರೀಫಂಡ್ ಮಾಡುವಂತೆ ಕೇಳಿದ್ರೂ  ಪ್ರತಿಕ್ರಿಯೆ ನೀಡಿಲ್ಲ. ಗಂಟೆಯವರೆಗೂ ಪ್ರಯತ್ನಿಸಿದರೂ ಪ್ರಯೋಜನ ಆಗಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tap to resize

Latest Videos

ಅಂಬಾನಿಗೆ ಸವಾಲೆಸಯಲು ಬರ್ತಿದೆ ಆಫ್ರಿಕನ್ ಕಂಪನಿ; ಮಹಾ ಕಾಳಗಕ್ಕೆ ಸಾಕ್ಷಿಯಾಗಲಿದೆ ಭಾರತದ ಮಾರುಕಟ್ಟೆ

ಮುಂದುವರಿದು ಬ್ಕಿಂಕಿಟ್ ಹಣ ಹಿಂದಿರುಗಿಸಲು ಒಪ್ಪಿಲ್ಲ. ಹಾಗಾಗಿ ನಾನೇ ಮಹಿಳೆಯರ ಪ್ಯಾಂಟಿ ಧರಿಸಲು ನಿರ್ಧರಿಸಬೇಕಿದೆ ಎಂದು ಪ್ರಯಾಂಶ್ ಹೇಳಿಕೊಂಡಿದ್ದಾರೆ. ಆದ್ರೆ ಪ್ರಯಾಂಶ್ ಆರೋಪದ ಕುರಿತು ಬ್ಲಿಂಕಿಟ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇತ್ತ ಪ್ರಯಾಂಶ್ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ತರೇಹವಾರಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಯಾಂಶ್ ಪುರುಷರ ಜಾಕಿ ಅಂಡರ್‌ವೇರ್ ಬುಕ್ ಮಾಡಿದ್ದರು. ಕೆಲ ಬಳಕೆದಾರರು ಇದು ಮೂರು ಪ್ಯಾಂಟಿಯ ಪ್ಯಾಕ್. ಒಂದು ಬುಕ್ ಮಾಡಿದ್ರೆ ಮೂರು ಸಿಕ್ಕಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮನೆಯಲ್ಲಿ ಮಹಿಳೆಯರಿದ್ದರೆ ವಿಷಯ ತಿಳಿಸಿ ನೀಡಬಹುದು ಅಲ್ಲವೇ ಎಂದು ಕೆಲವರು ಸಲಹೆ ನೀಡಿದ್ದಾರೆ.

ಕ್ಲಾಸ್‌ರೂಮ್‌ಗೆ ನುಗ್ಗಿ ಗೂಂಡಾಗಳಿಂದ 15ರ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ; ಸುಮ್ಮನೇ ನೋಡ್ತಾ ನಿಂತ ಶಿಕ್ಷಕ!

Hello wtf is this i have ordered jockey male underwears and you have send me this

Now how to return this i have reported this to your help center still no return or refund had not done yet pic.twitter.com/4VcjQNMU5V

— Priyansh (@priyansh_who)
click me!