ಭಾರತದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ವರದಿ, ಐಸೋಲೇಶನ್‌ನಲ್ಲಿ ರೋಗಿ!

Published : Sep 08, 2024, 06:17 PM ISTUpdated : Sep 08, 2024, 06:22 PM IST
ಭಾರತದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ವರದಿ, ಐಸೋಲೇಶನ್‌ನಲ್ಲಿ ರೋಗಿ!

ಸಾರಾಂಶ

ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಭಾರತದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ರೋಗಿಯನ್ನು ಈಗಾಗಲೇ ಐಸೋಲೇಶನ್‌ನಲ್ಲಿ ಇಡಲಾಗಿದೆ. ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.  

ನವದೆಹಲಿ(ಸೆ.08) ಕೋವಿಡ್ ಬಳಿಕ ಪ್ರತಿ ವೈರಸ್, ರೂಪಾಂತರ ವೈರಸ್ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಪತ್ತೆಯಾದ ಬೆನ್ನಲ್ಲೇ ಭಾರತ ಅತೀವ ಅಲರ್ಟ್ ಆಗಿದೆ. ಇದೀಗ ಮಂಕಿ ಪಾಕ್ಸ್ ಪ್ರಕರಣ ವಿಶ್ವದ ಹಲವು ದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಇದೀಗ ಭಾರತದಲ್ಲಿ  ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸಿದ ಪುರುಷ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ವೈರಸ್ ಪತ್ತೆಯಾಗಿದೆ. ತಕ್ಷಣವೇ ರೋಗಿಯನ್ನು ಆಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗಿದೆ. 

ರೋಗ ಲಕ್ಷಣಗಳು ಮಂಕಿ ಪಾಕ್ಸ್ ಪ್ರಕರಣವನ್ನು ಖಚಿತಪಡಿಸುತ್ತಿದೆ. ಆದರೆ ರೋಗಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸದೆ. ರೋಗಿಯ ರೋಗ ಲಕ್ಷಣಗಳು ಮಂಕಿ ಪಾಕ್ಸ್ ಪ್ರಕರಣವನ್ನು ಹೇಳುತ್ತಿದೆ. ಖಚಿತತೆಗಾಗಿ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ನಿಯಮ ಹಾಗೂ ಮಾರ್ಗಸೂಚಿ ಪ್ರಕಾರ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.

ಮಂಕಿಪಾಕ್ಸ್‌ ವೈರಸ್‌: ಏರ್‌ಪೋರ್ಟ್‌ ಮಲ, ಮೂತ್ರ ಮೇಲೆ ನಿಗಾ

ಈಗಾಗಲೇ ವಿದೇಶದಿಂದ ಆಗಮಿಸುವ ವ್ಯಕ್ತಿಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಸದ್ಯ ವಿಮಾನ ನಿಲ್ದಾಣಧಲ್ಲಿ ಪರೀಕ್ಷೆಗೆ ಸೂಚನೆ ನೀಡಿಲ್ಲ.ಆದರೆ ಸಾರ್ವಜನಿಕ ಪ್ರದೇಶ ಸೇರಿದಂತೆ ಹಲೆವೆಡೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಸಲಾಗಿದೆ. ಶಂಕಿತ ಮಂಕಿ ಪಾಕ್ಸ್ ಪ್ರಕರಣ ವರದಿಯಿಂದ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ರೋಗಿಯ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕವಿಲ್ಲ. ದೇಶದಲ್ಲಿ ಮಂಕಿಪಾಕ್ಸ್ ಸೇರಿದಂತೆ ಇತರ ವೈರಸ್ ಪ್ರಕರಣ ತಡೆಯಲು ಭಾರತ ಶಕ್ತವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. 

2022ರ ಜುಲೈ 14 ರಂದು ಕೇರಳದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿತ್ತು. ಇನ್ನು ಮಾರ್ಚ್ 27, 2024ರಲ್ಲೂ ಕೇರಳದಲ್ಲಿ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿತ್ತು. ದೇಶದಲ್ಲಿ 30 ಪ್ರಕರಣ ವರದಿಯಾಗಿತ್ತು. ಕೇರಳದಲ್ಲಿ ಒಂದು ಸಾವು ಕೂಡ ವರದಿಯಾಗಿತ್ತು.  

ಮಂಕಿಪಾಕ್ಸ್ ಪ್ರಕರಣ ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಆಫ್ರಿಕನ್ ದೇಶಗಳಲ್ಲಿ ಮಂಕಿ ಪಾಕ್ಸ್ ಪ್ರಕರಣ ಹೆಚ್ಚಾಗಿ ವರದಿಯಾಗಿದೆ. ಇದಕ್ಕಾಗಿ 135 ದಶಲಕ್ಷ ಡಾಲರ್ ವೆಚ್ಚದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಇತರ ದೇಶಗಳಿಗೆ ಹರಡದಂತೆ ಹಾಗೂ ಮೂಲದಲ್ಲೇ ಮಂಕಿಪಾಕ್ಸ್ ಪ್ರಕರಣ ಮಟ್ಟಹಾಕಲು ಯೋಜನೆ ರೂಪಿಸಿಕೊಂಡಿದೆ. ಈ ಬೆಳವಣಿಗೆ ನಡುವೆ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ಕರ್ನಾಟಕದಲ್ಲಿ ಮಂಕಿಪಾಕ್ಸ್‌ ಆತಂಕವಿಲ್ಲ: ಡಾ। ಪಾಟೀಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!