ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಪತ್ನಿ ನೀಡಿದ ದೂರಿನ ಅನ್ವಯ ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಹ್ರೈಚ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಪತ್ನಿ ನೀಡಿದ ದೂರಿನ ಅನ್ವಯ ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮರ್ಯಂ ಹಾಗೂ ಅರ್ಷದ್ ಇಬ್ಬರು ಅಯೋಧ್ಯೆಯಲ್ಲಿ ನಡೆದು ಹೋಗುವಾಗ ನಗರದ ಸೌಂದರ್ಯ ಕಂಡ ಮರ್ಯಂ ಸಿಎಂ ಯೋಗಿ ಮತ್ತು ಪ್ರಧಾನಿ ಮೋದಿಯನ್ನು ತನ್ನ ಗಂಡನ ಎದುರೇ ಹೊಗಳಿದ್ದರು. ಇದನ್ನು ಸಹಿಸದ ಅರ್ಷದ್ ಮತ್ತು ಆತನ ಮನೆಯವರು, ಮರ್ಯಂಗೆ ನಿಂದಿಸಿ, ತಳಿಸಿ, ಬಿಸಿಯಾದ ಅಡುಗೆ ಪದಾರ್ಥಗಳನ್ನು ಮೈಮೇಲೆ ಎರಚಿ ಕೊಟ್ಟು ತ್ರಿವಳಿ ತಲಾಖ್ ನೀಡಿದ್ದಾನೆ.
ದೇಶದ ಮೊದಲ ಮರು ಬಳಕೆ ಹೈಬ್ರಿಡ್ ರಾಕೆಟ್; ವಿಶೇಷ ಏನು ಗೊತ್ತಾ?
ಬಳಿಕ ಮರ್ಯಂ ತನ್ನ ತಂದೆ ಮನೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮರ್ಯಂ ದೂರಿನ ಆಧಾರದ ಮೇಲೆ ಅರ್ಷದ್, ಆತನ ತಾಯಿ ರೈಶಾ, ಮಾವ ಇಸ್ಲಾಂ, ಅತ್ತಿಗೆ ಕುಲ್ಸುಂ, ಭಾವ ಫರ್ಹಾನ್ ಮತ್ತು ಶಫಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.