ದೇಶದ ಮೊದಲ ಮರು ಬಳಕೆ ಹೈಬ್ರಿಡ್‌ ರಾಕೆಟ್‌; ವಿಶೇಷ ಏನು ಗೊತ್ತಾ?

By Kannadaprabha News  |  First Published Aug 24, 2024, 8:47 AM IST

ಚೆನ್ನೈ ಮೂಲದ ಸ್ಟಾರ್ಟಪ್‌ ‘ಸ್ಪೇಸ್ ಜೋನ್’ ಸಿದ್ಧಪಡಿಸಿರುವ ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್ ‘ಮಿಷನ್ ರೂಮಿ - 2024’ ಶನಿವಾರ ನಭಕ್ಕೆ ಉಡಾವಣೆ ಆಗಲಿದೆ.


ಚೆನ್ನೈ: ಚೆನ್ನೈ ಮೂಲದ ಸ್ಟಾರ್ಟಪ್‌ ‘ಸ್ಪೇಸ್ ಜೋನ್’ ಸಿದ್ಧಪಡಿಸಿರುವ ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್ ‘ಮಿಷನ್ ರೂಮಿ - 2024’ ಶನಿವಾರ ನಭಕ್ಕೆ ಉಡಾವಣೆ ಆಗಲಿದೆ.

ಮೂನ್‌ಮ್ಯಾನ್‌ ಖ್ಯಾತಿಯ ಇಸ್ರೋದ ಮಾಜಿ ನಿರ್ದೇಶಕ ಎಂ. ಅಣ್ಣಾದೊರೈ ಮಾರ್ಗದರ್ಶನದಲ್ಲಿ ಈ ರಾಕೆಟ್‌ ಸಿದ್ಧಗೊಂಡಿದ್ದು, ಬೆಳಿಗ್ಗೆ 7 ಗಂಟೆಗೆ ತಿರುವಿದಂದೈನಿಂದ ಉಡಾವಣೆ ಆಗಲಿದೆ. ಮರುಬಳಕೆ ಹೈಬ್ರಿಡ್‌ ರಾಕೆಟ್‌ ತನ್ನೊಂದಿಗೆ 53 ಸಣ್ಣ ಉಪಗ್ರಹಗಳನ್ನು ನಭಕ್ಕೆ ಕೊಂಡೊಯ್ಯಲಿದೆ.

Tap to resize

Latest Videos

undefined

ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ!

ವಿಶೇಷತೆ ಏನು?: 3.5 ಮೀಟರ್‌ ಉದ್ದ 80 ಕೆಜಿ ತೂಕದ ಈ ರಾಕೆಟ್‌ನ ಶೇ.70ರಷ್ಟು ಮರುಬಳಕೆ ಮಾಡಬಹುದು. ಅಂದರೆ ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಹೊಂದಿರುವ ರಾಕೆಟ್‌ನ ಮೂಗಿನ ಭಾಗ, ಯಶಸ್ವಿ ಉಡ್ಡಯನದ ಬಳಿಕ ಮರಳಿ ಭೂಮಿ ವಾತಾವರಣ ಪ್ರವೇಶಿಸಿ ಸಮುದ್ರದಲ್ಲಿ ಬೀಳಲಿದೆ. ಅಲ್ಲಿಂದ ಈ ಭಾಗಗಳನ್ನು ಮರಳಿ ಸಂಗ್ರಹಿಸಿ, ಇನ್ನೊಂದು ಉಡ್ಡಯನಕ್ಕೆ ಬಳಸಬಹುದು. ಇದು ಭವಿಷ್ಯದ ಉಡ್ಡಯನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

ರೂಮಿ 1 ರಾಕೆಟ್‌ 35 ಕಿ.ಮೀ ಎತ್ತರದ ಕಕ್ಷೆವರೆಗೆ ಹಾರಬಲ್ಲದು. ರೂಮಿ 2 ರಾಕೆಟ್‌ ಅನ್ನು 250 ಕೆಜಿ ಭಾರ ಹೊತ್ತು 250 ಕಿ.ಮೀ ಎತ್ತರಕ್ಕೆ ಸಾಗಬಲ್ಲ ರೀತಿ ಕಂಪನಿ ಅಭಿವೃದ್ಧಿಪಡಿಸುತ್ತಿದೆ.

click me!