triple talaq to ill wife: ಎಂಥಾ ಗಂಡ.... ಡಾಕ್ಟರ್‌ ಬಳಿ ಕರೆದುಕೊಂಡು ಹೋಗು ಎಂದಿದ್ದಕ್ಕೆ ತಲಾಖ್‌

By Suvarna News  |  First Published Dec 9, 2021, 2:51 PM IST

ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದಕ್ಕೆ ತ್ರಿಬಲ್ ತಲಾಖ್‌
ತಲಾಖ್‌ ನೀಡಿ ಮನೆಯಿಂದ ಹೊರಗೆ ಹಾಕಿದ ಪತಿ
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಘಟನೆ


ಅಹ್ಮದಾಬಾದ್‌(ಡಿ.9): ಅನಾರೋಗ್ಯಕ್ಕೀಡಾದ ಪತ್ನಿಯೊಬ್ಬಳು ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದಕ್ಕೆ  ಪತಿ ಆಕೆಗೆ ತ್ರಿಬಲ್‌ ತಲಾಖ್‌ ನೀಡಿದಂತಹ ಅಮಾನವೀಯ ಘಟನೆ ಗುಜರಾತ್‌(Gujarat)ನ ಅಹ್ಮದಾಬ್‌(Ahmedabad)ನಲ್ಲಿ ನಡೆದಿದೆ. ವೈದ್ಯರ ಬಳಿ ಕರೆದುಕೊಂಡು ಹೋಗು ಎಂದಿದ್ದಕ್ಕೆ, ನನ್ನನ್ನು ಸರಿಯಾಗಿ ಥಳಿಸಿದ ಗಂಡ ತ್ರಿಬಲ್‌ ತಲಾಖ್‌ ನೀಡಿ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು 24 ವರ್ಷದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. 

ಕಳೆದ ವರ್ಷ ಮೇ ತಿಂಗಳಲ್ಲಿ ಅಹ್ಮದಾಬಾದ್‌ನ ಜುಹಾಪುರ(Juhapura) ಸಮೀಪದ ವ್ಯಕ್ತಿಯೊಂದಿಗೆ ನನ್ನ ಮದುವೆಯಾಗಿತ್ತು. ಇದು ಆಕೆಗೆ ಎರಡನೇಯ ವಿವಾಹವಾಗಿದ್ದು, ಮದುವೆಯಾದ ಐದು ತಿಂಗಳ ವರೆಗೆ ಆಕೆಯ ಗಂಡ ಹಾಗೂ ಮನೆಯವರು ಆಕೆಯೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ನಂತರದ ದಿನಗಳಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಕ್ಷುಲ್ಲಕ ಕಾರಣಕ್ಕೆ  ಜಗಳ ಮಾಡಲು ಆರಂಭಿಸಿದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.  

Tap to resize

Latest Videos

ಚಿತ್ರ ವಿಮರ್ಶೆ: ತಲಾಕ್‌ ತಲಾಕ್‌ ತಲಾಕ್‌

ನವಂಬರ್‌ 29ರಂದು ಮಹಿಳೆಗೆ ತೀವ್ರವಾದ ಜ್ವರವಿದ್ದು, ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಹೀಗಾಗಿ ಆಕೆ ತನ್ನ ಗಂಡನ ಬಳಿ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದ್ದಾನೆ. ಈ ವೇಳೆ ಗಂಡ ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಕೆಗೆ ಆಕೆಯ ತಂದೆ ತಾಯಿ ಬಳಿ ಹಣ ಕೇಳುವಂತೆ ಹೇಳಿದ್ದಾನೆ. ಆದರೆ ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಗಂಡ ಆಕೆಗೆ ಸರಿಯಾಗಿ ಥಳಿಸಿದ್ದು, ನಂತರ ಮೂರು ಬಾರಿ ಜೋರಾಗಿ ತಲಾಖ್‌ ತಲಾಖ್‌ ತಲಾಖ್‌ ಎಂದು ಕೂಗಿ ಒತ್ತಾಯ ಪೂರ್ವಕವಾಗಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಗಂಡನ ವರ್ತನೆ ವಿರುದ್ಧ ಆಕೆ ವೆಜಲ್ಪುರ ಪೊಲೀಸ್‌( Vejalpur police) ಠಾಣೆಯಲ್ಲಿ  ದೂರು ದಾಖಲಿಸಿದ್ದು, ಗಂಡನ ವಿರುದ್ಧ ಪ್ರಕರಣ ದಾಖಲಾಗಿದೆ. 

ತಲಾಕ್‌ ನೀಡಿದ ಮ್ಯಾನೇಜರ್‌ ಅರೆಸ್ಟ್

ಉತ್ತರಪ್ರದೇಶ( Uttar Pradesh)ದ ಮುಜಾಫರ್‌ನಗರ(Muzaffarnagar) ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಿಸನ್‌ ಪುರ(Kishanpur Kishanpur) ಗ್ರಾಮದಲ್ಲಿ 25 ವರ್ಷದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.  ಭೋಪಾ ಪೊಲೀಸ್ ಠಾಣೆ(Bhopa police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ವರದಿಗಳ ಪ್ರಕಾರ ಆಕೆಗೆ ತ್ರಿಬಲ್‌ ತಲಾಖ್‌ ನೀಡಿದ ಪತಿ ಆಕೆಯ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ. ಇದರಿಂದ ನೊಂದ ಆಕೆ ಸಾವಿಗೆ ಶರಣಾಗಿದ್ದಳು. ಈ ಪ್ರಕರಣದಲ್ಲಿ ಆಗಸ್ಟ್‌  18 ರಂದೇ ಆಕೆ ತನ್ನ ಪತಿ ತನಗೆ ತ್ರಿವಳಿ ತಲಾಖ್‌ ನೀಡಿದ್ದಾನೆ ಹಾಗೂ ನ್ನ ಮಗನನ್ನು ಒತ್ತಾಯ ಪೂರ್ವಕವಾಗಿ ನನ್ನಿಂದ ದೂರ ಕರೆದೊಯ್ದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.  ಈ ಬಗ್ಗೆ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಆಕೆಯ ಪಾಪಿ ಗಂಡ ಆಕೆಯ ಆಶ್ಲೀಲ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದರಿಂದ ನೊಂದು ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡುವ ಸಲುವಾಗಿ ಕೇಂದ್ರ ಸರ್ಕಾರವೂ ತ್ರಿವಳಿ ತಲಾಖ್‌ಗೆ ಕಾನೂನು ಮಾನ್ಯತೆಯನ್ನು ತೆಗೆದು ಹಾಕಿದೆ. ಆಗಸ್ಟ್ 1, 2019ರಂದು ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರೋಧಿ ಕಾನೂನು ಜಾರಿಗೆ ತಂದಿತ್ತು. ತ್ರಿವಳಿ ತಲಾಖ್‌ನಿಂದ ದೇಶದ ಮುಸ್ಲಿಂ ಮಹಿಳೆಯರ ಸಂಕಷ್ಟ ಹೇಳತೀರದಾಗಿತ್ತು. ತಲಾಖ್ ಹೇಳಿ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗುವ ಈ ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ಅಂತ್ಯ ಹಾಡೋ ಮೂಲಕ ಮುಸ್ಲಿಂ ಮಹಿಳೆಯರ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಿದ್ದರು. ಕೇಂದ್ರದ ಈ ಕಾನೂನನ್ನು ಮುಸ್ಲಿಂ ಮಹಿಳೆಯರು ಸೇರಿದಂತೆ ಇಸ್ಲಾಂ ಸಮುದಾಯ ಸ್ವಾಗತಿಸಿತ್ತು. ಅದಾಗ್ಯೂ ಇಂತಹ ಪ್ರಕರಣಗಳು ನಡೆಯುತ್ತಲೆ ಇದೆ

click me!