Viral video: ಲೆಹಂಗಾ ಬೇಡ... ಹರಿದ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟ ವಧು

Suvarna News   | Asianet News
Published : Dec 09, 2021, 01:24 PM IST
Viral video: ಲೆಹಂಗಾ ಬೇಡ... ಹರಿದ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟ ವಧು

ಸಾರಾಂಶ

ಹರಿದ ಜೀನ್ಸ್‌ ತೊಟ್ಟು ಹಸೆಮಣೆ ಏರಲು ಹೊರಟ ವಧು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಲೆಹೆಂಗಾ ಬದಲು ಹರಿದ ಜೀನ್ಸ್‌ ತೊಟ್ಟ ವಧು

ನವದೆಹಲಿ(ಡಿ.9): ಮದುವೆ ಎಂದರೆ ಭಾರತೀಯ ಸಂಪ್ರದಾಯದಲ್ಲಿ ಸಂಪೂರ್ಣವಾದ ದೇಶಿ ಉಡುಪು ಧರಿಸಿ ಅದಕ್ಕೆ ತಕ್ಕಂತೆ ಆಭರಣಗಳನ್ನು ಧರಿಸಿ ವಧುವನ್ನು ಸಿಂಗಾರಗೊಳಿಸುತ್ತಾರೆ. ಆದರೆ ಇಲ್ಲೊಬ್ಬಳು ವಧು ಮಾತ್ರ ಮದುವೆಗೆ ತಾನು ಹರಿದ ಜೀನ್ಸ್‌ ಧರಿಸುವುದಾಗಿ ಹೇಳಿ ಅದರಂತೆ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಸಿ ವಧುವೊಬ್ಬಳು ತನ್ನ ಮದುವೆಯ ಹಸೆಮಣೆ ಏರುವ ಸಮಾರಂಭಕ್ಕೆ(phera ceremony) ತನ್ನ ಭಾರವಾದ ವಧುವಿನ ಲೆಹೆಂಗಾ( bridal lehenga)ದ ಬದಲಿಗೆ ಆರಾಮದಾಯಕ ಜೀನ್ಸ್‌ನಲ್ಲಿ ಹೋಗಲು ಬಯಸುತ್ತೇನೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವಿಟ್ಟಿ ವೆಡ್ಡಿಂಗ್ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.

ಈ  ಸಣ್ಣದಾದ ವಿಡಿಯೋದಲ್ಲಿ ವಧುವೊಬ್ಬಳು  ಕೆಂಪು ಬಣ್ಣದ ಬೌಸ್‌ ಧರಿಸಿ ಅದರೊಂದಿಗೆ ಮದುವೆ ಹೆಣ್ಣು ಧರಿಸುವ ಬ್ರೈಡಲ್‌ ದುಪ್ಪಟ(bridal dupatta)ವನ್ನು ಹಾಕಿಕೊಂಡಿದ್ದಾರೆ. ಆದರೆ ಕೆಳಭಾಗಕ್ಕೆ ಲೆಹೆಂಗಾ ಧರಿಸುವ ಬದಲು ಆಕೆ ಹರಿದ ಜೀನ್ಸ್‌ ಧರಿಸಿದ್ದಾಳೆ. ನನಗೆ ಲೆಹೆಂಗಾ ತೊಡಲು ಇಷ್ಟ ಇಲ್ಲ. ನಾನು ಹೀಗೆ ಹೋಗಲು ಬಯಸುವೆ ಎಂದು ಆಕೆ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಹೇಳಿದ್ದಾಳೆ. ವಧುವಿನ ಈ ಹೇಳಿಕೆಗೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಅಲ್ಲದೇ  ಆಕೆಗೆ ಮಂಟಪದವರೆಗೆ ಹಾಗೆ ಹೋಗೋಣ ಬಾ ಎಂದು ಕರೆದಿದ್ದಾರೆ. 

Viral video: ಮದುವೆ ಮನೆಗೆ ನುಗ್ಗಿ ವಧುವಿಗೆ ಸಿಂಧೂರವಿಟ್ಟ ಹುಚ್ಚು ಪ್ರೇಮಿ

ವಧು ಲೆಹೆಂಗಾ ಧರಿಸಲು ಇಷ್ಟ ಪಡದೇ ಡೆನಿಮ್‌ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟಾದ ಎಂದು ಬರೆದು ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ವಧುವನ್ನು ಮುದ್ರಾ ಭಗತ್‌(Mudra Bhagat)ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನು 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ  61,000 ಕ್ಕೂ ಹೆಚ್ಚು ಜನ ಲೈಕ್‌ ಕೊಟ್ಟಿದ್ದಾರೆ.  ಅಲ್ಲದೇ ಜೀನ್ಸ್ ಧರಿಸುವುದಾದರೆ ಲೆಹೆಂಗಾ ಕೊಂಡಿದ್ದು ಏಕೆ? ಈ ಮದುವೆ ಧಿರಿಸುಗಳು ತುಂಬಾ ದುಬಾರಿ  ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ನಿನ್ನ ಮದುವೆ ನಿನಗೆ ಬೇಕಾದಂತೆ ಸಿದ್ಧಳಾಗು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ಯಾಕೆ ಈ ದುಪ್ಪಟ್ಟ ಭಾರವೆನಿಸುವಷ್ಟು ಹೆಚ್ಚಾದ ಜ್ಯುವೆಲರಿ ಹಾಗೂ ರವಿಕೆ. ಮದುವೆ ಜೀನ್ಸ್‌ ಟಾಪ್‌ ಧರಿಸಿ ಕೂಡ ಆಗಬಹುದು. ಇಷ್ಟೊಂದು ಕಸರತ್ತು ಏಕೆ ಎಂದು ಪ್ರಶ್ನಿಸಿದ್ದಾರೆ. ಕಳೆದ ವಾರ ಮದುವೆ ಧಿರಿಸು ಧರಿಸಿ ಸುಸ್ತಾದ ವಧುವೊಬ್ಬಳು ತಾನು ಈ ಮದುವೆ ಲೆಹೆಂಗಾವನ್ನು ಬಿಚ್ಚಿ  ಸಪ್ತಪದಿ ತುಳಿಯಲು ನೈಟ್‌ ಸೂಟ್‌ ಡ್ರೆಸ್‌ ಧರಿಸುವೆ ಎಂದಿದ್ದ ವಿಡಿಯೋ ವೈರಲ್‌ ಆಗಿತ್ತು. 

Viral video: ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ

ಹಿಂದೂ ವಿವಾಹ(Hindu Wedding)ಗಳಲ್ಲಿ ಅನೇಕ ಸಂಪ್ರದಾಯ ಮತ್ತು ಆಚರಣೆಗಳಿವೆ. ಹಿಂದಿನಿಂದ ಆಚರಿಸಿಕೊಂಡು ಬಂದ ಕೆಲವು ಸಂಪ್ರದಾಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಮದುವೆಯಾದ ಬಳಿಕ ವಧು, ವರನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಾಳೆ. ತಾನು ಮದುವೆಯಾಗುವ ಗಂಡನ ಆಶೀರ್ವಾದ ತನ್ನ ಮೇಲೆ ಯಾವಾಗಲೂ ಇರಲೆಂದು ಈ ಆಚರಣೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಸಮಯ ಬದಲಾಗುತ್ತಿದ್ದಂತೆ ಅನೇಕರು ತಮ್ಮದೇ ಶೈಲಿಯನ್ನು ಪಾಲಿಸುತ್ತಿದ್ದು, ಹಳೆಯ ಆಚರಣೆಗೆ ಗುಡ್ ಬೈ ಹೇಳುತ್ತಿದ್ದಾರೆ. ಮದುವೆ(Marriage)ಯಾಗುವ ನವದಂಪತಿ ಕೂಡ ಹಳೆಯ ಸಂಪ್ರದಾಯಗಳಿಗೆ ತೀಲಾಂಜಲಿ ಇಡುತ್ತಿದ್ದು, ತಮ್ಮದೇ ವಿನೂತನ ಸಂಪ್ರದಾಯಗಳನ್ನು ಹುಟ್ಟುಹಾಕುತ್ತಿದ್ದಾರೆ.

ವಿವಾಹವಾದ ಬಳಿಕ ನವದಂಪತಿ ಇಬ್ಬರೂ ಪರಸ್ಪರರ ಪಾದಗಳನ್ನು ಮುಟ್ಟಿ ಸಮಾನ ವಿವಾಹ ಮತ್ತು ಪರಸ್ಪರ ಗೌರವ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಇತ್ತೀಚಿನ ಒಂದು ವಿಡಿಯೋದಲ್ಲಿ ವಧು-ವರರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹದ ಬಳಿಕ ವಧು ವರನ ಪಾದಗಳನ್ನು ಮುಟ್ಟಿ ಆತನಿಂದ ಆಶೀರ್ವಾದ ಪಡೆದುಕೊಂಡಿದ್ದಾಳೆ. ನಗುನಗುತ್ತಲೇ ಪತಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಪತ್ನಿಯನ್ನು ಆತ ತಡೆಯುತ್ತಾನೆ. ಕೂಡಲೇ ಆತ ಕೂಡ ಪತ್ನಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಆದರೆ ಪತಿ ತನ್ನ ಪಾದಗಳನ್ನು ಮುಟ್ಟುವುದು ತಪ್ಪು ಎಂಬಂತೆ ಪತ್ನಿ ಹಿಂದಕ್ಕೆ ಜಿಗಿದು ನಿರಾಕರಿಸುತ್ತಾಳೆ. ಗಂಡ ತನ್ನ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಕೂಡಲೇ ಹೆಂಡತಿ ಆಶ್ಚರ್ಯದಿಂದ ಹಿಂದಕ್ಕೆ ಜಿಗಿದಿರುವ ಈ ವಿಡಿಯೋ(Viral Video)ವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದ್ದು ಸಾಕಷ್ಟು ಲೈಕ್ಸ್‌ ಬಂದಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು