ಮದುವೆಯಾಗಿ ಒಂದು ವರ್ಷವಾದರೂ ಮಕ್ಕಳಿಲ್ಲ. ಪತ್ನಿಗೆ ಧೈರ್ಯ ತುಂಬಿ ಅದೆಷ್ಟೆ ಖರ್ಚಾದರು ನೋಡಿಕೊಳ್ಳುತ್ತೇನೆ ಎಂದು ಚಿಕಿತ್ಸೆಗೆ ಮುಂದಾಗಿದ್ದಾನೆ. ಆದರೆ ವೈದ್ಯರ ವರದಿ ಪತಿಯ ಆಕ್ರೋಶ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪತ್ನಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾನೆ. ಅಷ್ಟಕ್ಕೂ ವೈದ್ಯರ ವರದಿಯಲ್ಲಿ ಏನಿತ್ತು?
ಅಹಮ್ಮದಾಬಾದ್(ಜು.28) ಮದುವೆಯಾಗಿ ಒಂದು ವರ್ಷ ಕಳೆದಿತ್ತು. ಆದರೆ ಮಕ್ಕಳಾಗಲಿಲ್ಲ. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದು ಮಕ್ಕಳ ಪಡೆಯಲು ದಂಪತಿ ನಿರ್ಧರಿಸಿದ್ದರು. ಆದರೆ ಪತ್ನಿ ಮಾತ್ರ ಚಿಕಿತ್ಸೆ ನಿರಾಕರಿಸುತ್ತಳೇ ಬಂದಿದ್ದಳು. ಅದೆಷ್ಟೆ ಖರ್ಚಾದರೂ ನಾನು ನೋಡಿಕೊಳ್ಳುತ್ತೇನೆ. ಚಿಕಿತ್ಸೆ ಆರಂಭಿಸಲು ಪತ್ನಿಯ ಒಪ್ಪಿಸಿದ್ದಾನೆ. ಹೀಗೆ ವೈದ್ಯರ ಬಳಿ ಚಿಕಿತ್ಸೆ ಆರಂಭಗೊಂಡ ಬೆನ್ನಲ್ಲೇ ವೈದ್ಯರು ನೀಡಿದ ವರದಿಯಿಂದ ಪತಿ ಆಕ್ರೋಶಗೊಂಡಿದ್ದಾನೆ. 32ರ ಹರೆಯದ ಹುಡುಗಿ ಎಂದು ಮದುವೆಯಾದ ಈತನಿಗೆ ಪತ್ನಿಯ ಅಸಲಿ ವಯಸ್ಸು ನೋಡಿ ಆಘಾತವಾಗಿದೆ. ಪತ್ನಿಗೆ ನಿಜವಾದ ವಯಸ್ಸು 42 ಅನ್ನೋದು ವೈದ್ಯರ ವರದಿಯಂದ ಗೊತ್ತಾಗಿದೆ. ಇಷ್ಟೇ ಅಲ್ಲ ವಯಸ್ಸು 40 ಮೀರಿದ ಮೇಲೆ ಮಕ್ಕಳು ಪಡೆಯಲು ಉತ್ತಮ ಆರೋಗ್ಯ, ಚಿಕಿತ್ಸೆ ಎಲ್ಲವೂ ಅಗತ್ಯ ಎಂದಿದ್ದಾರೆ. ವೈದ್ಯರ ಮಾತಿನಿಂದ ರೊಚ್ಚಿಗೆದ್ದ ಪತಿ, ಇದೀಗ ಪತ್ನಿ ವರುದ್ಧ ವಂಚನೆ ಪ್ರಕರಣ ದಾಖಲಿಸಿದ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ.
34ರ ಹರೆಯದ ಪತಿ ಇದೀಗ ಪತ್ನಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾನೆ. 2023ರಲ್ಲಿ ಈತನ ವಯಸ್ಸು 33. ಪೋಷಕರು ಮಾತಿನಂತೆ ಮೇ 2023ರಲ್ಲಿ ಹುಡುಗಿ ನೋಡಲು ಕುಟುಂಬ ಸಮೇತ ತೆರಳಿದ್ದ. ಹುಡುಗಿ ಒಪ್ಪಿಗೆ ಆಗಿದೆ. ಈ ವೇಳೆ ಹುಡುಗಿ ವಯಸ್ಸು 32 ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ವ್ಯಾಟ್ಸಾಪ್ ಮೂಲಕ ಹುಡುಗಿಯ ಡೇಟ್ ಆಫ್ ಬರ್ತ್ ಕಳುಹಿಸಿದ್ದಾರೆ. ಇದರಲ್ಲಿ ಹುಡುಗಿ ವಯಸ್ಸು ಮೇ 19, 1991 ಎಂದು ಕಳುಹಿಸಿದ್ದರು ಎಂದು ಇದೀಗ ಪತಿ ದೂರಿನಲ್ಲಿ ಹೇಳಿದ್ದಾನೆ.
undefined
ನೀನು ಕಪ್ಪು ಮಸಿ, ಪತಿ-ಅತ್ತೆ ಚುಚ್ಚು ಮಾತಿಗೆ ಬದುಕು ಅಂತ್ಯಗೊಳಿಸಿದ ಮಹಿಳೆ!
ಇದಕ್ಕೆ ಪೂರಕ ದಾಖಲೆ ಕಳುಹಿಸಲು ಈತ ಕೇಳಿಕೊಂಡಿದ್ದ. ಬರ್ತ್ ಸರ್ಟಿಫಿಕೇಟ್ ಅಥವಾ ಶಾಲಾ ಅಂಕಪಟ್ಟಿ ಕುರಿತು ಕೇಳಿದಾಗ ಅಮೇಲೆ ಕಳುಹಿಸುತ್ತೇವೆ ಎಂದಿದ್ದಾರೆ. ಪದೇ ಪದೇ ಒಂದೊಂದು ಕಾರಣ ನೀಡಿದ್ದಾರೆ. ಮದುವೆ ಹತ್ತಿರಬರುತ್ತಿದ್ದಂತೆ ಹುಟ್ಟಿದ ದಿನಾಂಕ ಕುರಿತು ದಾಖಳೆ ಪರಿಶೀಲನೆ ನೆನಪಾಗಿಲ್ಲ. ಇತ್ತ ಹುಡುಗಿ ಹಾಗೂ ಆಕೆಯ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ಈ ದಾಖಲೆ ಒದಗಿಸಲಿಲ್ಲ ಎಂದು ಪತಿ ದೂರಿನಲ್ಲಿ ಹೇಳಿದ್ದಾನೆ.
ಮಕ್ಕಳಾಗಲು ಚಿಕಿತ್ಸೆ ಪಡೆಯುವಾಗ ವೈದ್ಯರು ತಪಾಸಣೆ ಮಾಡಿದ್ದಾರೆ. ಕೆಲ ಪರೀಕ್ಷೆಗಳನ್ನು ನಡೆಸಿದ್ದಾರೆ. ಬಳಿಕ ಪತಿಯನ್ನು ಕರೆಸಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ವಯಸ್ಸು 42 ಆಗಿರುವ ಕಾರಣ ಮಕ್ಕಳಾಗುವ ಸಾಧ್ಯತೆ ಕಡಿಮೆ. ಉತ್ತಮ ಆರೋಗ್ಯ, ಚಿಕಿತ್ಸೆ ಮೂಲಕ ಮಾತ್ರ ಮಕ್ಕಳನ್ನು ಪಡೆಯಲು ಸಾಧ್ಯ ಎಂದು ವಿವರಿಸಿದ್ದಾರೆ ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. 32ರ ಯುವತಿ ಎಂದು 42ರ ಮಹಿಳೆಯನ್ನು ಮದುವೆ ಮಾಡಿಸಿದ್ದಾರೆ. ಈ ಮೂಲಕ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಐಎಎಸ್ ಗಂಡನ ಬಿಟ್ಟು ತಮಿಳುನಾಡಿನ ರೌಡಿ ಜೊತೆ ಓಡಿ ಹೋಗಿದ್ದ ಮಹಿಳೆ ಆತ್ಮಹತ್ಯೆ