
ಹೆಂಡತಿಯನ್ನು ಹುಡುಕಿಕೊಂಡು ಗಂಡನೋರ್ವ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ತನ್ನ ಕಾರನ್ನು ಓಡಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಗ್ವಾಲಿಯರ್‌ನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಗಂಡ ಹೆಂಡತಿ ಮಧ್ಯೆ ಜಗಳವಾದ ನಂತರ ಈ ಘಟನೆ ನಡೆದಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾರು ಹೋಗುತ್ತಿರುವುದನ್ನು ನೋಡಿದ ರೈಲ್ವೆ ಪೊಲೀಸ್ ಸಿಬ್ಬಂದಿ ಕೂಡಲೇ ಜಾಗೃತರಾಗಿ ಕಾರನ್ನು ನಿಲ್ಲಿಸಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಲಾಗಿದೆ. ಹೀಗೆ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕಾರು ಓಡಿಸಿ ಬಂಧಿತನಾದ ವ್ಯಕ್ತಿಯನ್ನು ನಿತಿನ್ ಎಂದು ಗುರುತಿಸಲಾಗಿದೆ. ಈಗ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ನಿಲ್ದಾಣದ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯದ ಸಮಯದಲ್ಲಿ ನಿರ್ಮಾಣ ವಾಹನಗಳ ಆಗಮನಕ್ಕಾಗಿ ರಚಿಸಲಾದ ಮಾರ್ಗವನ್ನು ಬಳಸಿಕೊಂಡು ಅವರು ಪ್ಲಾಟ್‌ಫಾರ್ಮ್ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಆಫೀಸರ್ ರೆಸ್ಟ್ ಹೌಸ್ ಬಳಿಯ ಮಾರ್ಗವು ಲೋಡರ್‌ಗಳಂತಹ ಯಂತ್ರಗಳಿಗೆ ತಾತ್ಕಾಲಿಕವಾಗಿ ತೆರೆದಿರುತ್ತದೆ. ಈ ದಾರಿಯ ಮೂಲಕ ನಿತಿನ್ ತನ್ನ ಕಾರನ್ನು ಚಲಾಯಿಸಿಕೊಂಡು ಪ್ಲಾಟ್‌ಫಾರ್ಮ್‌ಗೆ ಆಗಮಿಸಿದ್ದಾನೆ. ಈತ ಪ್ಲಾಟ್‌ಫಾರ್ಮ್ ಮೇಲೆ ಕಾರು ಚಲಾಯಿಸಿಕೊಂಡು ಬಂದ ಸಮಯದಲ್ಲೇ ನವದೆಹಲಿ ಆಗ್ರಾ ಕಂಟೋನ್ಮೆಂಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಂದು ನಿಂತಿತ್ತು. ಮಥುರಾದಲ್ಲಿ ಗುರು ಪೂರ್ಣಿಮಾ ಜಾತ್ರೆಯ ಕಾರಣ ಈ ರೈಲನ್ನು ಗ್ವಾಲಿಯರ್‌ಗೂ ವಿಸ್ತರಿಸಲಾಗಿತ್ತು ಹಾಗೂ ಪ್ರಯಾಣಿಕರು ಅದರಿಂದ ಇಳಿಯುತ್ತಿದ್ದರು.
ಇನ್ನು ಹೀಗೆ ಪ್ಲಾಟ್‌ಫಾರ್ಮ್‌ನಲ್ಲಿ ಕಾರು ಓಡಿಸಿದ ನಿತಿನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ತನ್ನ ಕುಡಿತದ ಚಟದಿಂದಾಗಿ ತನ್ನ ಹೆಂಡತಿ ತನ್ನನ್ನು ಬಿಟ್ಟು ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ. ಇದರಿಂದ ಹತಾಶೆಗೊಂಡು ಕುಡಿದ ಅಮಲಿನಲ್ಲಿ ಆಕೆಯನ್ನು ಹುಡುಕಿಕೊಂಡು ಕಾರನ್ನು ರೈಲ್ವೆ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಪ್ಲಾಟ್‌ಫಾರ್ಮ್‌ನಲ್ಲಿ ಓಡಿಸಲು ನಿರ್ಧರಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಸಬ್-ಇನ್ಸ್‌ಪೆಕ್ಟರ್ ರವೀಂದ್ರ ಸಿಂಗ್ ರಾಜಾವತ್ ತಮ್ಮ ತಂಡದೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ, ಝಾನ್ಸಿ ತುದಿಯಿಂದ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿ ಆಗ್ರಾ ಕಡೆಗೆ ಚಲಿಸುತ್ತಿದ್ದ ಬಿಳಿ ಕಾರನ್ನು ಗಮನಿಸಿದರು ಪ್ಲಾಟ್‌ಫಾರ್ಮ್ ಮೇಲೆ. ವಾಹನ ಆಗಮಿಸುವುದನ್ನು ನೋಡಿ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಆತಂಕಕಗೊಂಡಿದ್ದರು. ಆದರೆ ಅಧಿಕಾರಿಗಳು ಕೂಡಲೇ ಕಾರು ನಿಲ್ಲಿಸಿ ಜೊತೆಗೆ ಅಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ