ಕಾಲೇಜ್‌ ಹೋಗಲು ಬೈಕ್‌ ಅಲ್ಲ ಕುದುರೆ ಖರೀದಿಸಿದ ಯುವಕ

By Suvarna News  |  First Published Mar 15, 2022, 5:39 PM IST
  • ಕುದುರೆ ಖರೀದಿಸಿದ ಮಹಾರಾಷ್ಟ್ರದ ಯುವಕ
  • ಕಾಲೇಜ್‌ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿರುವ ಶೇಖ್ ಯೂಸುಫ್ 
  • ದಿನಾ ಕುದುರೆಯ ಮೇಲೆಯೇ ಪಯಣ

ಪುಣೆ(ಮಾ.15): ಎಲ್ಲರೂ ಆಫೀಸ್ ಹೋಗಲು ಸ್ಕೂಟಿ ಕಾರು ಬೈಕ್‌ ಖರೀದಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ವ್ಯಕ್ತಿ  40,000 ರೂ. ಕೊಟ್ಟು ಕುದುರೆಯೊಂದನ್ನು ಖರೀದಿಸಿದ್ದಾರೆ. ಅದರಲ್ಲೇ ದಿನಾ ತಮ್ಮ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಇಂಧನ ಬೆಲೆ ಏರಿಕೆಯ ನಡುವೆ ಇದು ಸುಲಭ ಉಪಾಯ ಎಂದು ಅವರು ಹೇಳುತ್ತಾರೆ. ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನ (Aurangabad) ಶೇಖ್ ಯೂಸುಫ್ (Shaikh Yusuf) ಎಂಬುವವರೇ ಕುದುರೆ ಖರೀದಿಸಿದ ವ್ಯಕ್ತಿ. 

ಕೊರೊನಾ ವೈರಸ್‌ನಿಂದಾದ ಲಾಕ್‌ಡೌನ್ ನಮ್ಮಲ್ಲಿ ಅನೇಕರಿಗೆ ಕಠಿಣವಾಗಿತ್ತು. ಅನೇಕರು ತಮ್ಮ ಉದ್ಯೋಗ ಮತ್ತು ವ್ಯವಹಾರಗಳನ್ನು ಕಳೆದುಕೊಂಡರು ಮತ್ತು ಅನೇಕರು ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡಿದರು. ಆದರೆ ಮಹಾರಾಷ್ಟ್ರದ ಔರಂಗಾಬಾದ್‌ನ ವ್ಯಕ್ತಿ ಶೇಖ್ ಯೂಸುಫ್, ಇಂಧನ ಬೆಲೆ ಏರಿಕೆಯ ಮಧ್ಯೆ ಲಾಕ್‌ಡೌನ್ (lockdown) ಸಮಯದಲ್ಲಿ ಕುದುರೆ ಖರೀದಿಸಿದ್ದಾರೆ. ಯೂಸುಫ್ ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಅವರ ಬೈಕು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯು ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಪೆಟ್ರೋಲ್ ಡಿಸೇಲ್‌ ಬೆಲೆಗಳು ಏರಿದ್ದವು. ಹೀಗಾಗಿ ಅವರಿಗೆ ಇದೊಂದೇ ಆಯ್ಕೆ ಉಳಿದಿತ್ತು. ಅವರು ಕುದುರೆಯೊಂದನ್ನು ಖರೀದಿಸಿ ಅದರಲ್ಲೇ ಪ್ರಯಾಣಿಸಲು ಶುರು ಮಾಡಿದರು. 

Maharashtra | Aurangabad's Shaikh Yusuf commutes to work on his horse 'Jigar'. " I bought it during lockdown. My bike wasn't functioning, petrol prices had gone up & public transport wasn't plying. which is when I bought this horse for Rs 40,000 to commute," he said (14.3) pic.twitter.com/ae3xvK57qf

— ANI (@ANI)

I work as a lab assistant at a college, and even today, I use my horse to commute. It keeps one fit and healthy. Also, given the rise in fuel prices, horse as a mode of transport is a feasible option: Shaikh Yusuf (14.03) pic.twitter.com/ijTKYEN432

— ANI (@ANI)

Tap to resize

Latest Videos

 

40,000 ರೂಪಾಯಿಗೆ ಕುದುರೆಯನ್ನು ಖರೀದಿಸಿದ ಅವರು ಅದರಲ್ಲೇ ಕಾಲೇಜಿಗೆ ತೆರಳಲು ಶುರು ಮಾಡಿದರು. ಅವರು ಈ ಕುದುರೆಗೆ ಜಿಗರ್‌ (Jigar) ಎಂದು ಹೆಸರಿಟ್ಟಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ನಾನು ಅದನ್ನು ಖರೀದಿಸಿದೆ. ಆ ವೇಳೆ ನನ್ನ ಬೈಕು ಕಾರ್ಯನಿರ್ವಹಿಸುತ್ತಿಲ್ಲ, ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದವು ಮತ್ತು ಸಾರ್ವಜನಿಕ ಸಾರಿಗೆಯು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ನಾನು  40,000 ರೂ.ನೀಡಿ ಈ ಪ್ರಯಾಣಿಸಲು ಕುದುರೆಯನ್ನು  ಖರೀದಿಸಿದೆ ಎಂದು ಯೂಸುಫ್ ಸುದ್ದಿ ಸಂಸ್ಥೆ  ಎಎನ್‌ಐಗೆ ಹೇಳಿದ್ದಾರೆ. 

ಹೊಸ ಜಾಹೀರಾತಿನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ: ಬಿಳಿ ಕುದುರೆ ಏರಿದ ಕಿಮ್ ಜಾಂಗ್ ಸಂದೇಶವೇನು?
 

ಇಂಧನ ಬೆಲೆ ಏರಿಕೆಯ ನಡುವೆಯೂ ಕುದುರೆಯ (Horse) ಮೇಲೆ ಪ್ರಯಾಣಿಸುವುದು ಒಂದು ಒಳ್ಳೆಯ ಆಯ್ಕೆಯಾಗಿದೆ ಎಂದು ಯೂಸುಫ್ ಹೇಳಿದರು. ನಾನು ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ (Lab Assistant) ಆಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಇಂದಿಗೂ ನಾನು ಕುದುರೆಯನ್ನು ಪ್ರಯಾಣಿಸಲು ಬಳಸುತ್ತೇನೆ. ಇದು ಒಬ್ಬರನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ ಎಂದು ಯುಸುಫ್ ಹೇಳಿದ್ದಾರೆ. 

ಬೆಂಕಿ ಅನಾಹುತ... ಭಯಗೊಂಡು ಓಡುತ್ತಿರುವ ಕುದುರೆಗಳ ವಿಡಿಯೋ ವೈರಲ್
 

ಏತನ್ಮಧ್ಯೆ, ರಷ್ಯಾ-ಉಕ್ರೇನ್ ಯುದ್ಧದ ನಡುವೆ ದೇಶದಲ್ಲಿ ಕಚ್ಚಾ ತೈಲದ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಮಂಗಳವಾರ ಪ್ರತಿಪಾದಿಸಿದ್ದಾರೆ. 'ಕಚ್ಚಾ ತೈಲದ ಕೊರತೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಅವಶ್ಯಕತೆಗಳಲ್ಲಿ ಶೇ.85 ಪ್ರತಿಶತದಷ್ಟು ಕಚ್ಚಾ ತೈಲದ ಆಮದಿನಿಂದಲೇ ಬರಬೇಕಾಗಿದೆ. ಮತ್ತು 50-55 ಪ್ರತಿಶತ ಗ್ಯಾಸ್  ಮೇಲೆ ಅವಲಂಬಿತವಾಗಿದೆ. ಹೀಗಿದ್ದು ನಮ್ಮ ಶಕ್ತಿಯ ಅಗತ್ಯಗಳನ್ನು ಪೂರೈಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪುರಿ ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆ ಮಾಡಿದ್ದು, ಚುನಾವಣೆ ಬಳಿಕ ಮತ್ತೆ ದರ ಏರಿಕೆ ಮಾಡಲಿದೆ ಎಂಬ ಆರೋಪವನ್ನು ಕೇಂದ್ರ ಸಚಿವರು ತಳ್ಳಿ ಹಾಕಿದರು.
 

click me!