
ಬೆಂಗಳೂರು(ಏ.30): ಮದುವೆಗೆ ಸ್ನೇಹಿತರು, ಕುಟುಂಬಸ್ಥರು ಹಲವು ಉಡುಗೊರೆ ನೀಡುತ್ತಾರೆ. ಆದರೆ ಮಗಳ ಕೈಹಿಡಿಯುವ ವರನಿಗೆ ಮಾವ ನೀಡುವ ಉಡುಗೊರೆ ವಿಶೇಷವಾಗಿದೆ. ಕಾರಣ ಈ ಉಡುಗೊರೆ ಮೌಲ್ಯದಲ್ಲೂ, ಬದುಕಿನಲ್ಲೂ ಪ್ರಾಮುಖ್ಯತೆ ಪಡೆದಿರುತ್ತದೆ. ಆದರೆ ಈ ಆಸಾಮಿ ಮಾವ ನೀಡಲು ಮುಂದಾಗಿದ್ದ ಉಡುಗೊರೆಯನ್ನೇ ಬೇಡ ಎಂದಿದ್ದಾನೆ. ಕಾರಣ ಪಾರ್ಕಿಂಗ್ ಸಮಸ್ಯೆ.
ಮದುವೆಯಾಗೋಣ ಬಾ ಎಂದ ನಕಲಿ ಮೇಜರ್, 17 ಮಹಿಳೆಯರಿಗೆ 6 ಕೋಟಿ ರೂ. ವಂಚನೆ!
ಅಷ್ಟಕ್ಕೂ ಈತನಿಗೆ ಮಾವ ನೀಡಲು ರೆಡಿಯಾಗಿದ್ದ ಉಡುಗೊರೆ ಸಾಮಾನ್ಯದಲ್ಲ, ರೈಲು. ಹೌದು. ರೈಲು ಉಡುಗೊರೆ ನೀಡಲು ಮುಂದಾದ ಮಾವನಿಗೆ ವರ ಬೇಡವೆ ಬೇಡ ಎಂದಿದ್ದಾನೆ. ಕಾರಣ ಸಣ್ಣ ವಾಹನಗಳಾದರೆ ಓಡಿಸಬಹುದಿತ್ತು, ಆದರೆ ರೈಲು ಚಲಾಯಿಸಲು ಬರುವುದಿಲ್ಲ, ಜೊತೆಗೆ ಪಾರ್ಕಿಂಗ್ ಸಮಸ್ಯೆ ಕಾರಣ ವರ ಉಡುಗೊರೆ ಬೇಡ ಎಂದಿದ್ದಾನೆ.
ಅಷ್ಟಕ್ಕೂ ಈ ಮಾತನ್ನೂ ಈತನೇ ಹೇಳಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಎಲ್ಲಿ ರೆಕಾರ್ಡ್ ಮಾಡಲಾಗಿದೆ? ಈತನ ಕುರಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈತನ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ.
ಈ ರೀತಿ ಒಂದು ಸುಳ್ಳನ್ನು ತಲೆಮೇಲೆ ಹೊಡೆದಂತೆ ಹೇಳುತ್ತಿರುವ ಈತನ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ