ವೈದ್ಯರ ಭೇಟಿಗೆ 5 ನಿಮಿಷ ಕಾಯುವಂತೆ ಹೇಳಿದ ರಿಸೆಪ್ಶನಿಸ್ಟ್ ಮೇಲೆ ವ್ಯಕ್ತಿಯಿಂದ ಹಲ್ಲೆ, ವಿಡಿಯೋ

Published : Jul 22, 2025, 07:29 PM IST
female receptionist attacked in Maharashtra

ಸಾರಾಂಶ

ವೈದ್ಯರ ಭೇಟಿಗೆ ಒಂದ್ ಐದ್ ನಿಮಿಷ ಕುಳಿತುಕೊಳ್ಳಿ. ಕ್ಲೀನಿಕ್‌ ರಿಸೆಪ್ಶನಿಸ್ಟ್ ಇಷ್ಟು ಹೇಳಿದ್ದೇ ತಡ, ವ್ಯಕ್ತಿಯೊಬ್ಬ ಗರಂ ಆಗಿದ್ದಾನೆ. ಮಹಿಳಾ ರೆಸೆಪ್ಶನಿಸ್ಟ್ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ಘಟನೆ ನಡೆದಿದೆ. 

ಮುಂಬೈ (ಜು.22) ವೈದ್ಯರನ್ನು ಭೇಟಿಯಾಗಲು ರೋಗಿ ಜೊತೆಗೆ ಆಗಮಿಸಿದ ವ್ಯಕ್ತಿ ಕ್ಲಿನೀಕ್ ರಿಸೆಪ್ಶನಿಸ್ಟ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ರೋಗಿಯನ್ನು ಕೆರೆದುಕೊಂಡು ವೈದ್ಯರ ಭೇಟಿಯಾಗಲು ಬಂದ ವ್ಯಕ್ತಿಗೆ ಐದು ನಿಮಿಷ ಕಾಯುವಂತೆ ಕ್ಲಿನೀಕ್ ರಿಸೆಪ್ಶನಿಸ್ಟ್ ಹೇಳಿದ್ದಾರೆ. ಇಷ್ಟೇ ನೋಡಿ ವ್ಯಕ್ತಿ ಗರಂ ಆಗಿದ್ದಾನೆ. ಮಹಿಳಾ ರಿಸೆಪ್ಶನಿಸ್ಟ್ ಮೇಲೆ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಆಕೆಯನ್ನು ಹಿಡಿದೆಳೆದಿದ್ದಾನೆ. ಈತ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಲಿನಿಕ್‌ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಸರದಿ ಸಾಲು ಬ್ರೇಕ್ ಮಾಡಿ ಬಂದ ಗೋಕುಲ

ಥಾಣಯ ಶ್ರೀ ಬಾಲಚಿತಿಕಾ ಕ್ಲಿನೀಕ್‌ನಲ್ಲಿ ವೈದ್ಯರ ಭೇಟಿಯಾಗಿ ಔಷಧಿ ಪಡೆಯಲು ಸರದಿ ಸಾಲಿನಲ್ಲಿ ಕುಳಿತಿದ್ದಾರೆ. ಇತ್ತ ವೈದ್ಯರು ಒಬ್ಬೊಬ್ಬೊರನ್ನೇ ತಪಾಸಣ ಮಾಡಿ ಚಿಕಿತ್ಸೆ, ಔಷಧಿ ನೀಡುತ್ತಿದ್ದಾರೆ. ಇದೇ ವೇಳೆ ವೈದ್ಯರ ಭೇಟಿಯಾಗಲು ಬಂದವರಿಗೆ ಟೋಕನ್ ನೀಡಿ ಕಾಯುವಂತೆ ಕ್ಲಿನಿಕ್ ರಿಸೆಪ್ಶನಿಸ್ಟ್ ಸೂಚಿಸಿದ್ದಾರೆ. ಇದರ ನಡುವೆ ಗೋಕುಲ್ ಝಾ ಅನ್ನೋ ವ್ಯಕ್ತಿ ರೋಗಿ ಜೊತೆ ಆಗಮಿಸಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ರೋಗಿಗಳ ಹಿಂದೆ ನಿಲ್ಲದ ಈತ ನೇರವಾಗಿ ವೈದ್ಯರ ಬೇಟಿಗೆ ಆಗಮಿಸಿದ್ದಾನೆ.

ಗೋಕುಲ್ ಹಾಗೂ ರೋಗಿಯನ್ನು ತಡೆದ ರಿಸೆಪ್ಶನಿಸ್ಟ್

ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ವೈದ್ಯರ ಬೇಟಿಗೆ ಆಗಮಿಸಿದ ಗೋಕುಲ್ ಹಾಗೂ ರೋಗಿಯನ್ನು ಕ್ಲಿನಿಕ್ ಮಹಿಳಾ ರಿಸೆಪ್ಶನಿಸ್ಟ್ ಸೋನಾಲಿ ಕಲಸಾರೆ ತಡೆದಿದ್ದಾರೆ. ಇಷ್ಟೇ ಅಲ್ಲ ಎಲ್ಲರೂ ವೈದ್ಯರ ಭೇಟಿಗಾಗಿ ಕಾಯುತ್ತಿದ್ದಾರೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ನಿಮ್ಮ ಸರದಿ ಬಂದಾಗ ನಾವೇ ಕರೆಯುತ್ತೇವೆ ಎಂದು ಗೋಕುಲ್ ಹಾಗೂ ರೋಗಿಗೆ ಸೂಚಿಸಿದ್ದಾರೆ. ಆದರೆ ಈ ಮಾತುಗಳು ಗೋಕುಲ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.

 

 

ಮಹಿಳಾ ರೆಸೆಪ್ಶನಿಸ್ಟ್ ಮೇಲೆ ಹಲ್ಲೆ ನಡೆಸಿದ ಗೋಕುಲ್ ಝಾ

ಮಹಿಳಾ ರೆಸೆಪ್ಶನಿಸ್ಟ್ ಮೇಲೆ ಗೋಕುಲ್ ಹಲ್ಲೆ ನಡೆಸಿದ್ದಾರೆ. ಆಕೆಗೆ ಕಾಲಿನಿಂದ ಒದ್ದಿದ್ದಾನೆ. ಇಷ್ಟೇ ಅಲ್ಲದೇ ಆಕೆಯನ್ನು ಹಿಡಿದಳು ದೂರಕ್ಕೆ ಎಸೆದಿದ್ದಾನೆ. ಈ ವೇಳೆ ಇತರ ರೋಗಿಗಳು ಮಧ್ಯಪ್ರವೇಶಿಸಿದ್ದಾರೆ. ವೈದ್ಯರು ಆಗಮಿಸಿದ್ದಾರೆ. ಹಲವರು ಪ್ರಯತ್ನದಿಂದ ಮಹಿಳಾ ರೆಸೆಪ್ಶನಿಸ್ಟ್‌ನನ್ನು ರಕ್ಷಿಸಿದ್ದಾರೆ. ಇತ್ತ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಆರೋಪಿಗಾಗಿ ಪೊಲೀಸರ ಶೋಧ

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಇದೀಗ ಶೋಧ ಕಾರ್ಯ ನಡೆಯುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್