
ನವದೆಹಲಿ (ಜು.22) ಏರ್ ಇಂಡಿಯಾ ಎ171 ವಿಮಾನ ದುರಂತದ ಬಳಿಕ ಎಲ್ಲಾ ವಿಮಾನಗಳ ತಪಾಸಣೆಗೆ ನಾಗರೀಕರ ವಿಮಾಯಾನ ಸಚಿವಾಲಯ ಆದೇಶ ನೀಡಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಖಡಕ್ ವಾರ್ನಿಂಗ್ ನೀಡಿದೆ. ವಿಮಾಯಾನದ ಮಹಾ ದುರಂತದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ಏರ್ ಇಂಡಿಯಾ ವಿಮಾನ ಆತಂಕದ ಪರಿಸ್ಥಿತಿ ಎದುರಿಸಿದೆ. ಹಾಂಕಾಂಗ್‌ನಿಂದ ಹೊರಟ ವಿಮಾನ ದೆಹಲಿಯಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ದಿಡೀರ್ ಬೆಂಕಿ ವಿಮಾನ ಆವರಿಸಿಕೊಂಡಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಈ ಘಟನೆ ನಡೆದಿದೆ. ಅದೃಷ್ಠವಶಾತ್ ವಿಮಾನದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಏರ್ ಇಂಡಿಯಾ 315 ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
ಏರ್ ಇಂಡಿಯಾ ( Air India catches Fire) ವಿಮಾನ 315 ಹಾಂಕಾಂಗ್‌ನಿಂದ ಪ್ರಯಾಣಿಕರ ಹೊತ್ತು ದಹೆಲಿಯತ್ತ ಸಾಗಿತ್ತು. ಹಾರಾದ ವೇಳೆ ಯಾವುದೇ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆದರೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ
ದೆಹಲಿಯಲ್ಲಿ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ರನ್‌ವೇಯಲ್ಲಿ ವೇಗವಾಗಿ ಸಾಗಿದ ವಿಮಾನ ನಿಧಾನವಾಗಿ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಮ್ಮ ತಮ್ಮ ಬ್ಯಾಗ್ ಹಿಡಿದು ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ಅಲರ್ಟ್ ನೀಡಲಾಗಿದೆ. ತಕ್ಷಣವೇ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.ಆದರೆ ಎಪಿಯು ಯುನಿಟ್ ಆಟೋಮ್ಯಾಟಿಕ್ ಆಗಿ ಸ್ಥಗಿತಗೊಂಡಿದೆ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಂಡಿರುವ ಕುರಿತು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಎಲ್ಲಾ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಮುಂದಿನ ತನಿಖೆ ನಡೆಯಲಿದೆ ಎಂದಿದೆ.
ಏನಿದು ಏಪಿಯು ?
ಆಕ್ಸಿಲರಿ ಪವರ್ ಯೂನಿಟ್ ಅಥವಾ ಎಪಿಯು. ಏರ್ ಇಂಡಿಯಾ 315 ವಿಮಾನದ ಏಪಿಯು ಯುನಿಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಮುಖ್ಯ ಪವರ್ ಯೂನಿಟ್ ಅಲ್ಲ. ವಿಮಾನದಲ್ಲಿ ಏಸಿ, ಲೈಟ್, ಎಂಜಿನ್ ಸ್ಟಾರ್ಟ್ ಆಗಲು ಪವರ್ ನೀಡುತ್ತದೆ. ಈ ಯುನಿಟ್ ಹೆಚ್ಚು ಬಿಸಿಯಾಗಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ವಿಮಾನದ ಡಿಸೈನ್ ಪ್ರಕಾರ ಎಸಿಯು ವಿಮಾನ ಪಾರ್ಕ್ ಆಗುತ್ತಿದ್ದಂತೆ ಆಫ್ ಆಗಲಿದೆ. ಹೀಗಾಗಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಸಿಯು ಆಫ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ