ಹಣ್ಣು ಮಾರಿ ಸ್ವಾಭಿಮಾನದಿಂದ ಬದುಕ್ತಿದ್ದ ದಿವ್ಯಾಂಗನ ಮೇಲೆ ಕೈಕಾಲು ಸರಿ ಇದ್ದವನಿಂದ ಹಲ್ಲೆ

Published : May 23, 2023, 11:35 AM ISTUpdated : May 23, 2023, 11:53 AM IST
ಹಣ್ಣು ಮಾರಿ ಸ್ವಾಭಿಮಾನದಿಂದ ಬದುಕ್ತಿದ್ದ ದಿವ್ಯಾಂಗನ ಮೇಲೆ ಕೈಕಾಲು ಸರಿ ಇದ್ದವನಿಂದ ಹಲ್ಲೆ

ಸಾರಾಂಶ

ದಿವ್ಯಾಂಗ ವ್ಯಕ್ತಿಯೊಬ್ಬನ ಮೇಲೆ ಕೈಕಾಲು ಸರಿ ಇರುವ ದುಡಿದು ತಿನ್ನುವ ಯೋಗ್ಯತೆ ಇರುವ ವ್ಯಕ್ತಿಯೋರ್ವ ಸುಖಾಸುಮ್ಮನೆ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಪುಣೆ: ಕಾಲುಗಳು ಸರಿ ಇಲ್ಲದೆ ಅಂಗವೈಖಲ್ಯ ಕಾಡುತ್ತಿದ್ದರೂ, ದಿವ್ಯಾಂಗ ವ್ಯಕ್ತಿಯೊಬ್ಬ ತಳ್ಳುಗಾಡಿಯಲ್ಲಿ ಹಣ್ಣುಗಳನ್ನು ಮಾರುತ್ತಾ ಸ್ವಾಭಿಮಾನದಿಂದ ಜೀವನ ಮಾಡುತ್ತಿದ್ದ. ಅಂತಹವನ ಮೇಲೆ ಕೈಕಾಲು ಸರಿ ಇರುವ ದುಡಿದು ತಿನ್ನುವ ಯೋಗ್ಯತೆ ಇರುವ ವ್ಯಕ್ತಿಯೋರ್ವ ಸುಖಾಸುಮ್ಮನೆ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಅಮಾನವೀಯ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

29 ವರ್ಷದ ಸದ್ದಾಂ ಹುಸೇನ್ (saddam Husaine) ಎಂಬಾತನೇ ಹೀಗೆ ಹಲ್ಲೆಗೊಳಗಾದ ದಿವ್ಯಾಂಗ ವ್ಯಕ್ತಿ. ಈತ ರಸ್ತೆ ಬದಿ ತಳ್ಳುಗಾಡಿಯಲ್ಲಿ ಬಾಳೆಹಣ್ಣುಗಳನ್ನು ಮಾರಾಟ ಮಾಡುತ್ತಾ ಸ್ವಾಭಿಮಾನದ ಜೀವನ ನಡೆಸುತ್ತಿದ್ದ.  ಈತ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ದಾರಿಯಲ್ಲಿ ಬಂದ ಯುವಕನೋರ್ವ ಆತನ ಗಾಡಿಯಲ್ಲಿದ್ದ ಬಾಳೆಹಣ್ಣುಗಳಿಂದ ನಾಲ್ಕು ಬಾಳೆಹಣ್ಣುಗಳನ್ನು (Banana) ಕಸಿದುಕೊಂಡಿದ್ದು,  ಹಣವನ್ನೂ ನೀಡದೇ ಹೊರಟು ಹೋಗಿದ್ದಾನೆ. ಇದಕ್ಕೆ ವ್ಯಾಪಾರಿ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದು, ಆ ಯುವಕನನ್ನು ಪ್ರಶ್ನಿಸಿದ್ದಾನೆ. ಆದರೆ ತಪ್ಪನ್ನು ಒಪ್ಪಿಕೊಳ್ಳದ ದುರುಳ ಯುವಕ ದಿವ್ಯಾಂಗ (Physically Handicapped) ಯುವಕನ ಮೇಲೆಯೇ ಹಲ್ಲೆ ಮಾಡಿದ್ದು, ಆತನನ್ನು ರಸ್ತೆಗೆ ತಳ್ಳಿ ಹಾಕಿದ್ದಾನೆ. ಈ ವೇಳೆ ಸುತ್ತಮುತ್ತಲಿದ್ದ ಜನ ಅಲ್ಲಿ ಸೇರಿದ್ದು, ಕೈ ಕಾಲು ಸರಿ ಇರುವ ಯುವಕನ ಈ ಅಮಾನವೀಯ ಅಸಭ್ಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

ಘಟನೆಯ ಇಡೀ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು,  ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ವಾಸೈ ವಿಹಾರ್ ಪೊಲೀಸ್ ಠಾಣೆಯಲ್ಲಿ  ದಿವ್ಯಾಂಗ ಯುವಕ ಪ್ರಕರಣ ದಾಖಲಿಸಿದ್ದು, ಆತನ ಮೇಲೆ ಹಲ್ಲೆ ಮಾಡಿದ ಯುವಕ ಜೇಶನ್ ಡಿಸೋಜಾ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ (Mumbai) ಮೀರಾ ಭಯಂದರ್ ( Mira Bhayandar) ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಮೇ. 1 ರಂದು ಈ ಘಟನೆ ನಡೆದಿದೆ. 

ನನ್ನ ಗಾಡಿಯಿಂದ ನಾಲ್ಕು ಬಾಳೆಹಣ್ಣುಗಳನ್ನು ತೆಗೆದುಕೊಂಡು ಹಣ ನೀಡದೇ ಆತ ಹೋಗಿದ್ದಾನೆ. ಈ ಬಗ್ಗೆ ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡಿ ರಸ್ತೆಗೆ ತಳ್ಳಿದ್ದಾನೆ ಎಂದು ದಿವ್ಯಾಂಗ ವ್ಯಾಪಾರಿ ಹೇಳಿದ್ದಾನೆ. ವೀಡಿಯೋದಲ್ಲೂ ಈ ದೃಶ್ಯ ಸೆರೆ ಆಗಿದ್ದು, ಯುವಕನ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಒಟ್ಟಿನಲ್ಲಿ ನಮ್ಮ ಪ್ರಪಂಚದಲ್ಲಿ ಕೈಕಾಲು ಸರಿ ಇದ್ದರೂ ಕೆಲವರು ದುಡಿಯದೇ ಯಾರದೋ ಋಣ ತಿಂದು ಬದುಕಲು ಬಯಸಿದರೆ ಕೈಕಾಲು ಸರಿ ಇಲ್ಲದ ಜನರು ಸ್ವಾಭಿಮಾನದಿಂದ ಬದುಕುತ್ತಾರೆ. ಆದರೆ ಅಂತವರನ್ನು ಕೂಡ ನೆಮ್ಮದಿಯಾಗಿ ಬದುಕಲು ಇಂತಹ ಕೆಲ ಅವಿವೇಕಿಗಳು ಬಿಡದೇ ದೌರ್ಜನ್ಯವೆಸಗಿರುವುದು ದುರಂತ. 

ಬ್ಯಾನರ್‌ ಹಾಕಿದ್ದು ಒಪ್ಪಿಕೊಳ್ಳುವಂತೆ ಗನ್ ಇಟ್ಟು ಬೆದರಿಕೆ: ಹಿಂದೂ ಕಾರ್ಯಕರ್ತರೆಂದು ಚರ್ಮ ಸುಲಿದರು! 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!