ಹಲವು ಕೇಸ್ ಇತ್ಯರ್ಥ, ನೂರಾರು ಆದೇಶ; ಈ ಕೋರ್ಟ್ ಕತೆ ಕೇಳಿ ದೇಶವೇ ಶಾಕ್!

By Chethan Kumar  |  First Published Oct 22, 2024, 9:10 PM IST

ಕಳೆದ 5 ವರ್ಷದಲ್ಲಿ ಸಾವಿರಾರು ಕೇಸ್ ಇತ್ಯರ್ಥ. ನೂರಾರು ಆದೇಶ ಕೂಡ ನೀಡಲಾಗಿದೆ. ಜಮೀನು ವಿವಾದ ಪ್ರಕರಣಗಳ ಕುರಿತು ಕೆಲ ಮಹತ್ವದ ಆದೇಶ ಕೂಡ ನೀಡಲಾಗಿದೆ. ಇದರಲ್ಲೇನು ವಿಶೇಷ ಅಂತೀರಾ? ಇಲ್ಲೆ ಇರೋದು ಟ್ವಿಸ್ಟ್ ಮೇಲೆ ಟ್ವಿಸ್ಟ್. ಈ ಕೋರ್ಟ್ ಕತೆ ಕೇಳಿ ಇಡೀದ ದೇಶವೇ ಶಾಕ್ ಆಗಿದೆ.


ಅಹಮ್ಮದಾಬಾದ್(ಅ.22) ಕೋರ್ಟ್ ಎಂದ ಮೇಲೆ ಎಲ್ಲಾ ರೀತಿಯ ಪ್ರಕರಣಗಳ ವಿಚಾರಣೆ ಸಾಮಾನ್ಯ. ಇನ್ನು ಆದೇಶ, ತೀರ್ಪು ಕೂಡ ಪ್ರಕಟಗೊಳ್ಳುತ್ತದೆ. ಇಲ್ಲೊಂದು ಕೋರ್ಟ್, ಜಮೀನು ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆ ನಡೆಸಿ ಆದೇಶ ನೀಡಿದೆ. ಕಳೆದ 5 ವರ್ಷಗಳಿಂದ ಹಲವು ಪ್ರಕರಣಗಳು ಇತ್ಯರ್ಥಗೊಂಡಿದೆ. ಇದು ಎಲ್ಲಾ ಕೋರ್ಟ್‌ಗಳಲ್ಲಿ ನಡೆಯುವ ಸಾಮಾನ್ಯ ವಿಚಾರ ಎಂದು ಸುಮ್ಮನಾಗಬೇಡಿ. ಅಸಲಿ ಕತೆ ಕೇಳಿದರೆ ಅಚ್ಚರಿಯಾಗುವುದುಖಚಿತ. ಕಾರಣ ಕಳೆದ 5 ವರ್ಷಗಳಿಂದ ಹಲವು ಆದೇಶ ನೀಡಿರುವ ಅಹಮ್ಮದಾಬಾದ್‌ನ ಈ ಕೋರ್ಟ್ ಅಸಲಿಯಲ್ಲ ನಕಲಿ. 

ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಕಲಿ ಕೋರ್ಟ್ ಸೃಷ್ಟಿಸಿ ಹಲವು ಪ್ರಕರಣಗಳು ಇತ್ಯರ್ಥ ಮಾಡಿದ ಆರೋಪಿ ಮೊರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್‌ನ್ನು ಬಂಧಿಸಲಾಗಿದೆ. ವರ್ಷಗಳಿಂದ ನಕಲಿ ಕೋರ್ಟ್ ಸೃಷ್ಟಿಸಿ, ವಿಚಾರಣೆ, ವಾದ ಪ್ರತಿವಾದ ನಡೆಸಿ ಆದೇಶ , ತೀರ್ಪು ಪ್ರಕಟಿಸಿದ್ದು ಎಲ್ಲವೂ ನಕಲಿಯಾಗಿತ್ತು. ಈ ಮೋಸದ ಜಾಲಕ್ಕೆ ಸಿಲುಕಿದವರಿಗೆ ಮಾತ್ರವಲ್ಲ, ಭಾರತಕ್ಕೆ ಈ ರೀತಿ ವಂಚನೆಯೊಂದು ನಡೆದಿದೆ ಅನ್ನೋದು ನಂಬಲು ಸಾಧ್ಯವಾಗುತ್ತಿಲ್ಲ.

Tap to resize

Latest Videos

ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!

ಮೊರಿಸ್ ಸ್ಯಾಮ್ಯುಯೆಲ್ ಕೋರ್ಟ್ ಹಾಲ್ ಸೇರಿದಂತೆ ಎಲ್ಲಾ ಸೆಟಪ್ ಮಾಡಿಕೊಂಡಿದ್ದಾನೆ. ಬಳಿಕ ಅಸಲಿ ಸಿಟಿ ಸಿವಿಲ್ ಕೋರ್ಟ್‌ಗೆ ಅಲೆದಾಡುವ ಜಮೀನು ವಿವಾದ ಪ್ರಕರಣಗಳ ದಾವೇದಾರರು, ಅರ್ಜಿದಾರರನ್ನು ಪತ್ತೆ ಹಚ್ಚುತ್ತಿದ್ದ. ಅವರ ಪ್ರಕರಣವನ್ನು ತನ್ನ ನಕಲಿ ಕೋರ್ಟ್‌‌ಗೆ ವರ್ಗಾವಣೆ ಮಾಡಲಾಗಿದೆ. ಅರ್ಜಿಯನ್ನು ಈ ಕೋರ್ಟ್‌ಗೆ ಹಾಕಿದರೆ ತ್ವರಿತ ವಿಚಾರಣೆ ಮೂಲಕ ಇತ್ಯರ್ಥವಾಗಲಿದೆ ಎಂದು ನಂಬಿಸಿ ತನ್ನ ನಕಲಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಆರಂಭಿಸುತ್ತಿದ್ದ.

ಕೋರ್ಟ್ ಶುಲ್ಕ, ವಕೀಲರ ಶುಲ್ಕ ಸೇರಿದಂತೆ ಒಂದಷ್ಟು ಮೊತ್ತವನ್ನು ಅರ್ಜಿದಾರರಿಂದ ಪಡೆಯುತ್ತಿದ್ದ. ಯಾರು ಹೆಚ್ಚು ಹಣ ನೀಡುತ್ತಾರೆ ಅವರ ಪರವಾಗಿ ತೀರ್ಪು ನೀಡುತ್ತಿದ್ದ. ಹೀಗೆ 2019ರಲ್ಲಿ ಹಾರ್ದಿಕ್ ದೇಸಾಯಿ ಅವರ ಜಮೀನು ವಿವಾದ ಪ್ರಕರಣ ಕುರಿತು ಇದೇ ನಕಲಿ ಜಡ್ಜ್ ಮೊರಿಸ್ ಆದೇಶ ನೀಡಿದ್ದ. ಪ್ರಕರಣ ಅಂತ್ಯಗೊಂಡಿದೆ ಎಂದು ಕುಳಿತ್ತ ಹಾರ್ದಿಕ್ ದೇಸಾಯಿ ಅಸಲಿ ಸಿಟಿ ಸಿವಿಲ್ ಕೋರ್ಟ್‌ನಿಂದ ಇತ್ತೀಚೆಗೆ ನೋಟಿಸ್ ಬಂದಿದೆ. ಅರ್ಜಿ ವಿಚಾರಣೆಗೆ ಹಾಜರಾಗಲು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. 

ಇದು ದೇಸಾಯಿ ಅಚ್ಚರಿಗೆ ಕಾರಣವಾಗಿದೆ. ಪ್ರಕರಣ ಇತ್ಯರ್ಥವಾಗಿ ಆದೇಶ ಬಂದಿರುವ ಪ್ರಕರಣದಲ್ಲಿ ಮತ್ತೆ ವಿಚಾರಣೆ ಎಂದಾಗ ಅನುಮಾನವೂ ಕಾಡಿದೆ. ನಕಲಿ ಕೋರ್ಟ್ ಆದೇಶದ ಪ್ರತಿ ಹಿಡಿದು ಕೋರ್ಟ್‌ಗೆ ತೆರಳಿದ ದೇಸಾಯಿಗ ತಾನು ಮೋಸ ಹೋಗಿರುವುದು ಪತ್ತೆಯಾಗಿದೆ. ಮೊರಿಸ್ ವಿರುದ್ದ ಪ್ರಕರಣ ದಾಖಲಾಗಿದೆ. ನಕಲಿ ಕೋರ್ಟ್ ಸೃಷ್ಟಿಸಿ ಆದೇಶ ನೀಡುತ್ತಿದ್ದ ಮೊರಿಸ್‌ನ ಪೊಲೀಸರು ಬಂಧಿಸಿದ್ದಾರೆ. 
ಖೋಟಾ ನೋಟು ಗ್ಯಾಂಗಿನ ಎಡವಟ್ಟು, ಗಾಂಧಿ ಬದಲು ನಟ ಅನುಪಮ್ ಖೇರ್ ಫೋಟೋ ಬಳಕೆ!

click me!