ವ್ಯಕ್ತಿಯ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ಬಡಿದ 'ಗೋರಕ್ಷಕರು', ಪೊಲೀಸರು ಸೈಲೆಂಟ್!

By Suvarna NewsFirst Published Aug 1, 2020, 7:01 PM IST
Highlights

ಗೋಮಾಂಸ ಸಾಗಾಟ ಆರೋಪ, ವ್ಯಕ್ತಿ ನಡು ರಸ್ತೆಯಲ್ಲೇ ಥಳಿಸಿದ ದುಷ್ಕರ್ಮಿಗಳು| ಪೊಲೀಸರೆದುರೇ ಮಾರಣಾಂತಿಕ ಹಲ್ಲೆ| ಪ್ರಕರಣ ದಾಖಲಾದ್ರೂ ಆರೋಪಿಗಳ ಬಂಧನವಿಲ್ಲ

ನವದೆಹಲಿ(ಆ.01): ದೆಹಲಿಯಲ್ಲಿರುವ ಸೈಬರ್ ಸಿಟಿ ಗುರುಗ್ರಾಮದಲ್ಲಿ ನಡೆದ ಘಟನೆಯೊಂದು ಸದ್ಯ ಎಲ್ಲರನ್ನೂ ಭಯ ಭೀತರನ್ನಾಗಿಸಿದೆ. ಗುರುಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ಮಾಂಸದಿಂದ ತುಂಬಿದ ಪಿಕಪ್‌ ಗಾಡಿಯೊಂದನ್ನು ದುಷ್ಕರ್ಮಿಗಳು ಕಿಲೋ ಮೀಟರ್‌ಗಟ್ಟಲೇ ಹಿಂಬಾಲಿಸಿದ್ದಾರೆ. ಬಳಿಕ ವಾಹನವನ್ನು ತಡೆದ ಅವರು ಚಾಲಕನನ್ನು ಕೆಳಗಿಳಿಸಿ ಸುತ್ತಿಗೆಯಿಂದ ಹೊಡೆಯಲಾರಂಭಿಸಿದ್ದಾರೆ. ಈ ಘಟನೆಯ ದೃಶ್ಯಗಳನ್ನು ಒಬ್ಬಾತ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ. 

ಮಂಗಳೂರು: ಗೋಮಾಂಸ ಸಾಗಾಟಗಾರನಿಗೆ ಹಲ್ಲೆ, ಐವರ ಬಂಧನ

ವೈರಲ್ ಆದ ವಿಡಿಯೋದಲ್ಲಿ ದುಷ್ಕರ್ಮಿಗಳು ಕರುಣೆ ಇಲ್ಲದೆಯೇ ವಾಹನ ಚಾಲಕನನ್ನು ನಡುರಸ್ತೆಯಲ್ಲಿ ಸುತ್ತಿಗೆಯಿಂದ ಬಡಿಯುತ್ತಿರುವ ದೃಶ್ಯಗಳಿವೆ. ಗೋಮಾಂಸ ಸಾಗಾಟ ಮಾಡುತ್ತಿದ್ದಾನೆಂಬ ಸಂಶಯದ ಮೇರೆಗೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ ಈ ಘಟನೆ ಖುದ್ದು ಗುರುಗ್ರಾಮದ ಪೊಲೀಸರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ನಡೆದಿದ್ದು, ಯಾರೊಬ್ಬರೂ ಈ ಅಮಾನವೀಯ ಕೃತ್ಯವನ್ನು ತಡೆಯಲು ಯತ್ನಿಸಿಲ್ಲ.

ಆರಂಭದಲ್ಲಿ ಈ ಗೋ ರಕ್ಷಕರು ಬಾದ್‌ಶಾಹ್ಪುರ ಕಸ್ಬಾದಿಂದ ವಾಹನವನ್ನು ಸುಮಾರು ಎಂಟು ಕಿ. ಮೀಟರ್‌ ಹಿಂಬಾಲಿಸಿ, ಗುರುಗ್ರಾಮದ ಜುಮ್ಮಾ ಮಸೀದಿ ಬಳಿ ತಡೆದು ಅಲ್ಲೇ ಬಡಿಯಲಾರಂಭಿಸಿದ್ದಾರೆ. ಸುತ್ತಿಗೆ ಹೊಡೆತಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಬಳಿಕ ಅದೇ ವಾಹನಕ್ಕೆ ಹಾಕಿದ ದುಷ್ಕರ್ಮಿಗಳು ಆತನನ್ನು ಬಾದ್‌ಶಾಹ್ಪುರಕಕ್ಕೆ ಕರೆದೊಯ್ದಿದ್ದಾರೆ. ಇಲ್ಲಿ ವಾಹನದಿಂದ ಕೆಳಗೆ ಹಾಕಿ ಮತ್ತೆ ಹೊಡೆಯಲಾರಂಭಿಸಿದ್ದಾರೆ. ಹೀಗಿರುವಾಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕೂಡಲೇ ಪೊಲೀಸರು ಚಾಲಕನನ್ನು ದುಷ್ಕರ್ಮಿಗಳಿಂದ ಬೇರ್ಪಡಿಸಿದ್ದಾರೆ. ಆದರೆ ಸುಮ್ಮನಾಗದ ಗೋರಕ್ಷಕರು ಪೊಲೀಸರೊಂದಿಗೇ ವಾಗ್ವಾದಕ್ಕಿಳಿದಿದ್ದಾರೆ. ಇದಾದ ಬಳಿಕ ಬಿಜರೆಪಿ ಶಾಸಕ ಸಂಜಯ್ ಸಿಂಗ್ ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳು ರಸ್ತೆಯಲ್ಲಿ ಬಿದ್ದು ಒದ್ದಾಡುತತ್ತಿರುವುದನ್ನು ನೋಡಿಯೂ ಸುಮ್ಮನಾಗಿದ್ದಾರೆ. 

ತರಕಾರಿ ಮಾರುವ ನೆಪದಲ್ಲಿ ಗೋಮಾಂಸ ಮಾರಾಟ: ಪತ್ತೆ ಮಾಡಿದ ಗ್ರಾಹಕ

ಇದಾದ ಬಳಿಕ ಪೊಲೀಸರು ಗಾಯಗೊಂಡಿದ್ದ ಪೊಲೀಸರು ಲುಕ್ಮಾನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಗಾಯಗೊಂಡಾತನ ಹೇಳಿಕೆ ಪಡೆದು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ. ಇನ್ನು ವಾಹನದಲ್ಲಿದ್ದ ಮಾಂಸವನ್ನು ತಪಾಸಣೆಗೆ ಕಳುಹಿಸಿದ್ದಾರೆ.

click me!