ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ರಾಜ್ಯಸಭಾ ಸದಸ್ಯರ ಅಮರ್ ಸಿಂಗ್ ಇನ್ನಿಲ್ಲ| ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್ ಸಿಂಗ್ ನಿಧನ| ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಮರ್ ಸಿಂಗ್
ನವದೆಹಲಿ(ಆ.01): ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಅಮರ್ ಸಿಂಗ್(64) ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್ ಸಿಂಗ್‌ರವರಿಗೆ ಮಾರ್ಚ್ ತಿಂಗಳಲ್ಲಿ ಕಿಡ್ನಿ ಸಂಬಂಧಿತ ಸಮಸ್ಯೆಗೆ ಸಿಂಗಾಪುರದ ಆಸ್ಪತ್ರೆಯಲ್ಲಿ ಸರ್ಜರಿ ನಡೆದಿತ್ತು. ಇವರು ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿದ್ದರು.
2013ರಲ್ಲೇ ಕಿಡ್ನಿ ಸಮಸ್ಯೆಗೀಡಾಗಿದ್ದ ಅಮರ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಆಗಿದ್ದರು. ಬಕ್ರೀದ್ (ಈದ್-ಉಲ್-ಜುಹಾ) ಪ್ರಯುಕ್ತ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮುಸ್ಲಿಂ ಬಾಂಧವತರಿಗೆ ಶುಭ ಕೋರಿದ್ದರು. ಇನ್ನು ಬಾಲ್ ಗಂಗಾಧರ್ ತಿಲಕ್ ಪುಣ್ಯತಿಥಿ ಸಂಬಂಧ ಮಾಡಿದ್ದ ಟ್ವೀಟ್ ಅವರ ಕೊನೆಯ ಪೋಸ್ಟ್ ಆಗಿದೆ.
वरिष्ठ नेता एवं सांसद श्री अमर सिंह के निधन के समाचार से दुःख की अनुभूति हुई है। सार्वजनिक जीवन के दौरान उनकी सभी दलों में मित्रता थी।
स्वभाव से विनोदी और हमेशा ऊर्जावान रहने वाले अमर सिंहजी को ईश्वर अपने श्रीचरणों में स्थान दें। उनके शोकाकुल परिवार के प्रति मेरी संवेदनाएँ।
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಟ್ವೀಟ್ ಮೂಲಕ ಅಮರ್ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 'ಹಿರಿಯ ನಾಯಕ ಹಾಗೂ ಸಂಸದ ಶ್ರೀ ಅಮರ್ ಸಿಂಗ್ ನಿಧನ ಸುದ್ದಿಯಿಂದ ಬಹಳ ದುಃಖವಾಯಿತು. ಅವರು ಎಲ್ಲಾ ಪಕ್ಷದವರೊಂದಿಗೆ ಆತ್ಮೀಯವಾಗಿದ್ದರು' ಎಂದಿದ್ದಾರೆ.