Mamata In Delhi: ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

Published : Nov 24, 2021, 08:44 PM ISTUpdated : Nov 24, 2021, 08:47 PM IST
Mamata In Delhi: ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

ಸಾರಾಂಶ

* ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ * ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ದೀದಿ * ನೈಸರ್ಗಿಕ ವಿಕೋಪಗಳ ಪರಿಹಾರ ಮತ್ತು ಗಡಿ ಭದ್ರತಾ ಪಡೆ ಬಗ್ಗೆ ಮಾತು

ನವದೆಹಲಿ(ನ.24): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief minister Mamata Banerjee) ದೆಹಲಿ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ ಬುಧವಾರ ಸಂಜೆ ಐದು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನಿವಾಸದಲ್ಲಿ ಭೇಟಿಯಾದರು. ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ನೈಸರ್ಗಿಕ ವಿಕೋಪಗಳ ಪರಿಹಾರ ಮತ್ತು ಗಡಿ ಭದ್ರತಾ ಪಡೆ (BSF) ಹಕ್ಕುಗಳನ್ನು ಹೆಚ್ಚಿಸುವುದು ಮತ್ತು ರಾಜ್ಯದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಮಮತಾ ಮಾತನಾಡಿದರು. ಮೋದಿ ಅವರನ್ನು ಮಮತಾ ಭೇಟಿಯಾದ ಫೋಟೋವನ್ನು ಪಿಎಂಒ (PMO) ಟ್ವೀಟ್ ಮಾಡಿದೆ.

ಸೋಮವಾರದಿಂದ ಮಮತಾ ದೆಹಲಿಯಲ್ಲಿದ್ದಾರೆ (delhi). ಪ್ರಾಕೃತಿಕ ವಿಕೋಪದ ವಿಚಾರವಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದಿಂದ ಪ್ರಕೃತಿ ವಿಕೋಪಕ್ಕೆ ಪರಿಹಾರವಾಗಿ ಸಿಗಬೇಕಿದ್ದ 96,605 ಕೋಟಿ ರೂ.ಗಳನ್ನು ಬಂಗಾಳಕ್ಕೆ ಇನ್ನೂ ಬಂದಿಲ್ಲ ಎಂದಿದ್ದಾರೆ. ಮೋದಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಮಮತಾ ಅವರು ತ್ರಿಪುರಾ ಹಿಂಸಾಚಾರದ (Tripura Violence) ವಿಷಯವನ್ನು ಪ್ರಸ್ತಾಪಿಸಿದರು ಮತ್ತು ತಮ್ಮ ಕಾರ್ಯಕರ್ತೆ ಶೈನಿ ಘೋಷ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದರು. ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಪ್ರಾದೇಶಿಕ ವ್ಯಾಪ್ತಿಯನ್ನು 15 ಕಿ.ಮೀ.ನಿಂದ 50 ಕಿ.ಮೀ.ಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಸರ್ಕಾರವು ಒಪ್ಪುವುದಿಲ್ಲ ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಕೈಗೆ ಬಿಎಸ್ಎಫ್ (BSF) ಬರಲು ಬಿಡುವುದಿಲ್ಲ ಎಂದೂ ತಿಳಿಸಿದ್ದಾರೆ. 

Swamy meets Didi: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಖಟ್ಟರ್ ಹಿಂದೂವಾದಿ?

ಇದೇ ವೇಳೆ ಮುಂದಿನ ವರ್ಷ ಯುಪಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ದೀದಿ, ಯುಪಿಯಲ್ಲಿ ಬಿಜೆಪಿ ಸೋಲಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸಹಾಯ ಬೇಕಾದರೆ ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ದೀದಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ನಾವು ಕಾನೂನನ್ನು ಬಯಸುತ್ತೇವೆ ಎಂದು ಮಮತಾ ಹೇಳಿದರು. 30 ರಂದು ಮುಂಬೈಗೆ ಹೋದರೆ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಮುಂಬೈಗೆ ಭೇಟಿ ನೀಡಲು ಉದ್ದೇಶಿಸಿರುವ ಬಗ್ಗೆ ಹೇಳಿದ್ದಾರೆ.

ಇದಕ್ಕೂ ಮುನ್ನ ಮಮತಾ ಅವರು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಸ್ವಾಮಿ ಅವರ ರಾಜ್ಯಸಭೆಯ ಅವಧಿ 2022 ರಲ್ಲಿ ಕೊನೆಗೊಳ್ಳುತ್ತದೆ. ರೋಮ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ಅವರಿಗೆ ಗೃಹ ಸಚಿವಾಲಯ ಅನುಮತಿ ನಿರಾಕರಿಸಿದ ನಂತರ ಸ್ವಾಮಿ ಅವರು ಸರ್ಕಾರದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದರು.

ಮಮತಾ 2024ಕ್ಕೆ ತಯಾರಿ ನಡೆಸುತ್ತಿದ್ದಾರೆ

2024ರ ಲೋಕಸಭೆ ಚುನಾವಣೆಗೆ ಮಮತಾ ತಯಾರಿ ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಖೇಲಾ ಹೋಬೆ ಎಂಬ ಘೋಷವಾಕ್ಯ ನೀಡಿದ ಮಮತಾರವರ ಟಾರ್ಗೆಟ್ ದೆಹಲಿ. ಇದಕ್ಕಾಗಿ ದೇಶಾದ್ಯಂತ ನಾಯಕರ ಜತೆ ಸಭೆ ಆರಂಭಿಸಿದ್ದಾರೆ. ದೆಹಲಿಯಲ್ಲಿ ಎರಡು ದಿನಗಳಲ್ಲಿ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

ಕೀರ್ತಿ ಆಜಾದ್ ಸೇರಿದಂತೆ ಹಲವು ನಾಯಕರು ಟಿಎಂಸಿಗೆ ಸೇರ್ಪಡೆ

ಮಮತಾ ದೆಹಲಿಗೆ ಬಂದು ಹಲವು ದೊಡ್ಡ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮೊದಲ ಜೆಡಿಯು ಸಂಸದರಾಗಿದ್ದ ಪವನ್ ವರ್ಮಾ ಅವರು ಪಕ್ಷದ ಸದಸ್ಯತ್ವ ಪಡೆದರು. ಇದಾದ ನಂತರ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ಪತ್ನಿ ಪೂನಂ ಆಜಾದ್ ಅವರೊಂದಿಗೆ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಮನೆಗೆ ತಲುಪಿದರು. ಆಗಲೇ ಇಲ್ಲಿ ಹಾಜರಿದ್ದ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಸದಸ್ಯತ್ವ ಸಿಕ್ಕಿತು. ಕೆಲವು ಗಂಟೆಗಳ ನಂತರ, ಮಾಜಿ ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಅಶೋಕ್ ತನ್ವಾರ್ ಕೂಡ ಮಮತಾ ಅವರನ್ನು ಭೇಟಿಯಾಗಿ ಟಿಎಂಸಿ ಸೇರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌