ದೀದೀ ತಂತ್ರಕ್ಕೆ ಬಿಜೆಪಿ ತತ್ತರ: 24 ಶಾಸಕರು ಮತ್ತೆ ಟಿಎಂಸಿಗೆ?

By Suvarna News  |  First Published Jun 15, 2021, 1:29 PM IST

* ಬಿಜೆಪಿಗೆ ಆತಂಕ ಸೃಷ್ಟಿಸಿದೆ ಟಿಎಂಸಿ ಗೇಮ್‌ಪ್ಲಾನ್

* 24 ಶಾಸಕರು ಮರಳಿ ಟಿಎಂಸಿಗೆ?

* ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಎಲ್ಲವೂ ಸರಿ ಇಲ್ಲ


ಕೋಲ್ಕತ್ತಾ(ಜೂ.,15): ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕಾರಿ ಬೆಳವಣಿಗೆಗಳಾಗುತ್ತಿವೆ, ಮಮತಾ ಬ್ಯಾನರ್ಜಿ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಲಾರಂಭಿಸಿದ್ದಾರೆ. ರಾಜಕೀಯದಲ್ಲಿ ಯಾವಾಗೇನಾಗುತ್ತೆ ಎಂದು ಹೇಳುವುದು ಅದಸಾಧ್ಯ. ಯಾಕೆಂದರೆ ಇತ್ತೀಚೆಗಷ್ಟೇ ಮುಕುಲ್ ರಾಯ್ ಬಿಜೆಪಿಯಿಂದ ಮರಳಿ ಟಿಎಂಸಿಗೆ ಸೇರಿ, ಕಮಲ ಪಾಳಯಕ್ಕೆ ಶಾಕ್ ನೀಡಿದ್ದಾರೆ. ಆದರೀಗ ಬಿಜೆಪಿ ನಾಯಕ ರಾಜೀವ್ ಬ್ಯಾನರ್ಜಿ, ಟಿಎಂಸಿ ನಾಯಕ ಕುನಾಲ್ ಘೋಷ್‌ರನ್ನು ಭೇಟಿಯಾಗಿದ್ದು, ಬಂಗಾಳ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ಸದ್ಯ ಬಿಜೆಪಿಯ 24 ಶಾಸಕರು ಟಿಎಂಸಿ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. ಈ ಎಲ್ಲಾ ಆಗು ಹೋಗುಗಳ ಮಧ್ಯೆ ಇಲ್ಲಿನ ಗವರ್ನರ್ ಜಗದೀಪ್ ಧನ್‌ಖಡ್‌ ಜೂನ್ 15ರಿಂದ ದೆಹಲಿ ಪ್ರವಾಸದಲ್ಲಿದ್ದಾರೆ. ಜೂನ್ 18 ರಂದು ರಾಷ್ಟ್ರ ರಾಜಧಾನಿಯಿಂದ ಬಂಗಾಳಕ್ಕೆ ಮರಳಲಿದ್ದಾರೆ.

ಬಿಜೆಪಿಗೆ ಶಾಕ್ ಕೊಟ್ಟ ಮಮತಾ: ರಾಯ್ ಮರಳಿ ಟಿಎಂಸಿಗೆ!

Tap to resize

Latest Videos

ಸುವೇಂದು ಅಧಿಕಾರಿ ಅಂದ್ರೆ ಬಿಜೆಪಿಗರಿಗೆ ಇಷ್ಟವಿಲ್ಲ

ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೋಮವಾರ ಸಂಜೆ ಬಿಜೆಪಿ ಶಾಸಕರ ಪ್ರತಿನಿಧಿ ಮಂಡಳಿ ಜೊತೆ ರಾಜ್ಯಪಾಲ ಜಗದೀಪ್‌ ಧನ್‌ಖಡೆಯನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ಬಿಜೆಪಿಯ 24 ಶಾಸಕರು ಗೈರಾಗಿದ್ದರು. ಹೀಗಾಗಿ ಬಿಜೆಪಿಯಲ್ಲಿ ಬಿರುಗಾಳಿ ಬೀಸುವುದು ಖಚಿತ ಎನ್ನಲಾಗಿದೆ. ಬಿಜೆಪಿ ನಾಯಕರು ಸುವೇಂದು ನಾಯಕತ್ವ ಇಷ್ಟಪಡದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ಪ್ರತಿನಿಧಿಗಳ ತಂಡ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಾದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ರಾಜಭವನಕ್ಕೆ ತೆರಳಿತ್ತೆನ್ನಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ 74 ಶಾಸಕರಿದ್ದಾರೆ. ಈಗಾಗಲೇ ಮುಕುಲ್ ರಾಯ್ ದೀದೀ ಜೊತೆ ಮತ್ತೆ ದೋಸ್ತಿ ಮಾಡಿಕೊಂಡಿದ್ದಾರೆ. ಇವರ ಬೆನ್ನಲ್ಲೇ ರಾಜೀವ್ ಬ್ಯಾನರ್ಜಿ, ದೀಪೆಂದು ವಿಶ್ವಾಸ್ ಹಾಗೂ ಸುಭ್ರಾಂಶು ರಾಯ್‌ರಂತಹ ಪ್ರಮುಖ ನಾಯಕರು ಕೂಡಾ ಟಿಎಂಸಿ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. 

ಸೋಷಲಿಸಂ-ಮಮತಾ ಬ್ಯಾನರ್ಜಿ ಮದುವೆ!

ಮಮತಾ ವಿಶ್ವಾಸ

ಇನ್ನು ಅತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ 30 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ. ಇವರೆಲ್ಲರೂ ನಾಳ್ಕು ವರ್ಷದ ಹಿಂದೆ ಮುಕುಲ್ ರಾಯ್ ಜೊತೆ ಟಿಎಂಸಿ ಬಿಟ್ಟು, ಬಿಜೆಪಿ ಸೇರ್ಪಡೆಗೊಂಡವರೇ ಆಗಿದ್ದಾರೆ. ಇನ್ನು ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸಭೆಯೊಂದನ್ನು ಕಜರೆದಿದ್ದ ಸಂದರ್ಭದಲ್ಲೂ ಸಂಸದ ಶಾಂತನೂ ಠಾಕೂರ್ ಹಾಗೂ ಇತರ ಮೂವರು ಶಾಸಕರು ಈ ಸಭೆಗೆ ಗೈರಾಗಿದ್ದರು. 

click me!