* 2 ಕೋಟಿ ರು. ಮೌಲ್ಯದ ಜಮೀನೊಂದನ್ನು 18.5 ಕೋಟಿ ರು. ಖರೀದಿಸುವ ಮುಖಾಂತರ ಅಕ್ರಮ ಎಸಗಲಾಗಿದೆ ಎಂಬ ಆರೋಪ
* ಭೂ ಖರೀದಿ ಅಕ್ರಮ ನಡೆದಿಲ್ಲ: ರಾಮಮಂದಿರ ಟ್ರಸ್ಟ್
* ಭೂಮಿ ಬೆಲೆ ಈಗ ಹೆಚ್ಚಿದೆ: ಸ್ಪಷ್ಟನೆ
ಅಯೋಧ್ಯೆ(ಜೂ.15): ಭವ್ಯ ರಾಮಮಂದಿರ ನಿರ್ಮಾಣವಾಗಲಿರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2 ಕೋಟಿ ರು. ಮೌಲ್ಯದ ಜಮೀನೊಂದನ್ನು 18.5 ಕೋಟಿ ರು. ಖರೀದಿಸುವ ಮುಖಾಂತರ ಅಕ್ರಮ ಎಸಗಲಾಗಿದೆ ಎಂಬ ಆಪ್ ಮತ್ತು ಸಮಾಜವಾದಿ ಪಕ್ಷಗಳ ಆರೋಪಕ್ಕೆ ರಾಮಜನ್ಮ ಭೂಮಿ ಟ್ರಸ್ಟ್ ತಿರುಗೇಟು ನೀಡಿದೆ.
5 ನಿಮಿಷ, 2 ಕೋಟಿಯಿಂದ 18 ಕೋಟಿ: ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ ಆರೋಪ!
ಈ ಸಂಬಂಧ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ರಾಮಜನ್ಮ ಭೂಮಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ನೀಡಿದ ಬಳಿಕ, ಭಾರೀ ಪ್ರಮಾಣದ ಜನ ಅಯೋಧ್ಯೆಯಲ್ಲಿ ಜಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗಾಗಿ ಜಮೀನು ಖರೀದಿಸುತ್ತಿದೆ. ಇದರಿಂದಾಗಿ ರಾಮಮಂದಿರ ನಿರ್ಮಾಣವಾಗಲಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನಿನ ಬೆಲೆಯು ಭಾರೀ ಏರಿಕೆಯಾಗಿದೆ. ಆದಾಗ್ಯೂ, ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಮತ್ತು ಮುಖ್ಯ ಭಾಗದಲ್ಲಿರುವ ಜಮೀನನ್ನು ಮಾರುಕಟ್ಟೆದರವಾದ 20 ಕೋಟಿ ರು.ಗಿಂತಲೂ ಕಡಿಮೆ ದರವಾದ 18.5 ಕೋಟಿ ರು.ಗೆ ಖರೀದಿಸಲಾಗಿದೆ’ ಎಂದು ಹೇಳಿದ್ದಾರೆ.
93ರ ಹರೆಯದಲ್ಲಿ ರಾಮಲಲ್ಲಾಗೆ ಸುಪ್ರೀಂನಲ್ಲಿ ನ್ಯಾಯ ಒದಗಿಸಿದ ವಕೀಲ ಇವರೇ ನೋಡಿ!
ಆದಾಗ್ಯೂ, ರಾಜಕೀಯ ಮುಖಂಡರು ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ನಡೆದಿದೆ ಎಂದು ಸುಳ್ಳು ಸಂದೇಶವನ್ನು ಹರಡುತ್ತಿದ್ದು, ಇದು ರಾಜಕೀಯ ಪ್ರೇರಿತ ಆರೋಪ ಎಂದು ಕಿಡಿ ನುಡಿಯನ್ನಾಡಿದ್ದಾರೆ.
ಜಮೀನು ಖರೀದಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಬ್ಯಾಂಕ್ ಮತ್ತು ಆನ್ಲೈನ್ ಮುಖಾಂತರವೇ ನಡೆದಿರುವಾಗ ಅಕ್ರಮ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.