Israeli Heron Drones: ಚೀನಾ ಮೇಲೆ ಕಣ್ಣಿಡಲು ಇಸ್ರೇಲ್‌ ಡ್ರೋನ್‌ ಆಗಮನ!

Published : Dec 01, 2021, 09:23 AM ISTUpdated : Dec 01, 2021, 09:26 AM IST
Israeli Heron Drones: ಚೀನಾ ಮೇಲೆ ಕಣ್ಣಿಡಲು ಇಸ್ರೇಲ್‌ ಡ್ರೋನ್‌ ಆಗಮನ!

ಸಾರಾಂಶ

*ಅತ್ಯಾಧುನಿಕ ಹೆರಾನ್‌ ಡ್ರೋನ್‌ ಕಳಿಸಿದ ಇಸ್ರೇಲ್‌ *ಶೀಘ್ರದಲ್ಲೇ ಪೂರ್ವ ಲಡಾಖ್‌ನಲ್ಲಿ ನಿಯೋಜನೆ *ಮೋದಿ ನೀಡಿದ್ದ ತುರ್ತು ಅಧಿಕಾರ ಬಳಸಿ ಖರೀದಿ  

ನವದೆಹಲಿ(ಡಿ. 01): ಗಡಿಯಲ್ಲಿ ತಂಟೆ ಮಾಡುವ ಚೀನಾದ (India China Border dispute) ಮೇಲೆ ಕಣ್ಣಿಡಲು ಭಾರತೀಯ ಸೇನೆಗೆ ಇದೀಗ ಇಸ್ರೇಲ್‌ನ (Israeli)  ಅತ್ಯಾಧುನಿಕ ಡ್ರೋನ್‌ಗಳ ಬಲ ಬಂದಿದೆ. ಕೇಂದ್ರ ಸರ್ಕಾರ ನೀಡಿದ ‘ತುರ್ತು ಖರೀದಿ’ ಅಧಿಕಾರ ಬಳಸಿಕೊಂಡು ಸೇನಾಪಡೆಯು ಇಸ್ರೇಲ್‌ನಿಂದ ಹೆರಾನ್‌ ಡ್ರೋನ್‌ಗಳನ್ನು (Heron drones)  ಖರೀದಿಸಿದ್ದು, ಕೋವಿಡ್‌ ಕಾರಣದಿಂದ ಕೊಂಚ ವಿಳಂಬವಾಗಿ ಅವು ಭಾರತಕ್ಕೆ ಆಗಮಿಸಿವೆ. ಶೀಘ್ರದಲ್ಲೇ ಈ ಡ್ರೋನ್‌ಗಳು ಪೂರ್ವ ಲಡಾಖ್‌ ಸೆಕ್ಟರ್‌ನಲ್ಲಿ (Ladakh Sector) ನಿಯೋಜನೆಯಾಗಲಿದ್ದು, ಅಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. 

ಈಗಾಗಲೇ ಈ ಡ್ರೋನ್‌ಗಳು ಕಾರ್ಯಸನ್ನದ್ಧ ಸ್ಥಿತಿಯಲ್ಲಿವೆ. ಹಿಂದಿನಿಂದಲೂ ಭಾರತೀಯ ಸೇನೆಯಲ್ಲಿರುವ ಹೆರಾನ್‌ ಡ್ರೋನ್‌ಗಳಿಗಿಂತ ಇವು ಹೆಚ್ಚು ಆಧುನಿಕವಾಗಿದ್ದು, ಇವುಗಳ ಆ್ಯಂಟಿ-ಜಾಮಿಂಗ್‌  ಸಾಮರ್ಥ್ಯ (anti-jamming capability) ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಲಾಗಿದೆ. ಈ ಡ್ರೋನ್‌ಗಳು ಸತತ 52 ಗಂಟೆ ಹಾರಾಡುವ, ಗರಿಷ್ಠ 35000 ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇಂಥ 4 ಡ್ರೋನ್‌ಗಳನ್ನು ಖರೀದಿಸಲು ಭಾರತ 1500 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಲಡಾಖ್‌ ಗಡಿಗೆ ರಷ್ಯಾ ನಿರ್ಮಿತ ಟ್ರಯಂಫ ಕ್ಷಿಪಣಿ ವ್ಯವಸ್ಥೆ ಅಣಿಗೊಳಿಸಲು ಭಾರತ ಸಜ್ಜಾಗಿರುವ ಹೊತ್ತಿನಲ್ಲೇ ಈ ಹೊಸ ಅಸ್ತ್ರವೂ ಲಭ್ಯವಾಗಿದೆ.

ಶಸ್ತ್ರಾಸ್ತ್ರಗಳನ್ನು ಖರೀದಿಸಲು ವಿಶೇಷ ಆರ್ಥಿಕ ಅಧಿಕಾರ!

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೇನಾಪಡೆಗಳಿಗೆ 500 ಕೋಟಿ ರು.ವರೆಗಿನ ಶಸ್ತ್ರಾಸ್ತ್ರಗಳನ್ನು ಖರೀದಿಸಲು ನೀಡಿದ್ದ ವಿಶೇಷ ಆರ್ಥಿಕ ಅಧಿಕಾರ (emergency procurement clause) ಬಳಸಿಕೊಂಡು ಭೂ ಸೇನಾಪಡೆ ಈ ಡ್ರೋನ್‌ಗಳನ್ನು ಖರೀದಿಸಿದೆ. ಜೊತೆಗೆ, ಇದಕ್ಕಿಂತ ಸಣ್ಣ ಇನ್ನಷ್ಟು ಡ್ರೋನ್‌ಗಳನ್ನು ಭಾರತೀಯ ಕಂಪನಿಗಳಿಂದಲೇ ಖರೀದಿಸುತ್ತಿದೆ.

Indian Army: ಮೃತ ಎಲ್ಲಾ ಸಶಸ್ತ್ರ ಪೊಲೀಸ್‌ ಪಡೆ ಜವಾನರಿಗೆ ತಲಾ 35 ಲಕ್ಷ ರು. ಪರಿಹಾರ

ಚೀನಾದಿಂದ ಯುದ್ಧದ ಆತಂಕವಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾಪಡೆಗಳಿಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ವಿಶೇಷ ಆರ್ಥಿಕ ಅಧಿಕಾರ ನೀಡಿದ್ದರು. ಅದರಂತೆ ವಾಯುಪಡೆ (Air Force) ಹಾಗೂ ನೌಕಾಪಡೆಗಳು (Navy) ಈಗಾಗಲೇ ಕೆಲ ಶಸ್ತ್ರಾಸ್ತ್ರಗಳನ್ನು ಖರೀದಿಸಿವೆ. 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್‌ ಮೇಲಿನ ಸರ್ಜಿಕಲ್‌ ಸ್ಟೆ್ರೖಕ್‌ ನಂತರವೂ ಇದೇ ರೀತಿ ಸೇನಾಪಡೆಗಳಿಗೆ ತುರ್ತು ಖರೀದಿಯ ಅಧಿಕಾರ ನೀಡಲಾಗಿತ್ತು.

INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!

ಕ್ಷಿಪಣಿಗಳನ್ನು (Missile) ಉಡ್ಡಯನ ಮಾಡಬಲ್ಲ ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ದಾಳಿ ಯುದ್ಧ ನೌಕೆಯಾದ ಐಎನ್‌ಎಸ್‌ ವಿಶಾಖಪಟ್ಟಣಂ (INS Visakhapatnam), ಭಾನುವಾರ ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಯಾಗಲಿದೆ. ಇದು ದೇಶ ಇದುವರೆಗೆ ನಿರ್ಮಿಸಿರುವ ಅತ್ಯಾಧುನಿನಿಕ, ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ದಾಳಿ ಯುದ್ಧ ನೌಕೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಯುದ್ಧ ನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸಿದ್ದಾರೆ.

Parliament Winter Session: 3 ವರ್ಷದಲ್ಲಿ 1,034 ಉಗ್ರ ದಾಳಿ, 177 ಸೈನಿಕರು ಹುತಾತ್ಮ!

15ಬಿ ಎಂಬ ಯೋಜನೆಯಡಿ ಭಾರತೀಯ ನೌಕಾಪಡೆ ನಾಲ್ಕು ರಹಸ್ಯ ಮಾರ್ಗದರ್ಶಕ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮಡಗಾಂವ್‌ ಡಾಕ್‌ ಲಿ.(MDL) ಸಂಸ್ಥೆ ವಿನ್ಯಾಸ ಮಾಡಿರುವ ಈ ಯುದ್ಧನೌಕೆ 163 ಮೀಟರ್‌ ಉದ್ದವಿದ್ದು, 7400 ಟನ್‌ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ನೌಕೆಯು ಭೂಮಿಯಿಂದ ಭೂಮಿಗೆ (Earth), ಭೂಮಿಯಿಂದ ಆಗಸಕ್ಕೆ ಹಾರಿಸಬಲ್ಲ ಕ್ಷಿಪಣಿ ದಾಳಿ ವ್ಯವಸ್ಥೆಯನ್ನು ಒಳಗೊಂಡಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ