ಜಡ್ಜ್‌ ವರ್ಗ ಕೋರಿದ್ದ ಮಮತಾಗೆ ಕೋರ್ಟಿಂದ 5 ಲಕ್ಷ ದಂಡ!

By Suvarna News  |  First Published Jul 8, 2021, 9:19 AM IST

* ಸುವೇಂದು ಕೇಸಲ್ಲಿ ಜಡ್ಜ್‌  ವರ್ಗ ಕೋರಿದ್ದ ಮಮತಾಗೆ ಕೋರ್ಟಿಂದ 5 ಲಕ್ಷ ದಂಡ

* ಸುವೇಂದು ಅಧಿಕಾರಿ ಅವರ ವಿಧಾನಸಭೆ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ

* ಹಾಲಿ ನ್ಯಾಯಾಧೀಶ ಕೌಶಿಕ್‌ ಚಂದಾ ಅವರು ವಕೀಲರಾಗಿದ್ದಾಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು


ಕೋಲ್ಕತಾ(ಜು.08): ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ತಮ್ಮ ಎದುರಾಳಿಯಾದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ವಿಧಾನಸಭೆ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್‌ ನ್ಯಾಯಾಧೀಶರು ಹಿಂದೆ ಸರಿಯಬೇಕೆಂದು ಕೋರಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 5 ಲಕ್ಷ ರು. ದಂಡ ವಿಧಿಸಲಾಗಿದೆ.

ಕಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಕೌಶಿಕ್‌ ಚಂದಾ ಅವರು ವಕೀಲರಾಗಿದ್ದಾಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸುವೇಂದು ಅಧಿಕಾರಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದರು.

Tap to resize

Latest Videos

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಕೌಶಿಕ್‌ ಚಂದಾ ಅವರು, ‘ಇಂಥ ಲೆಕ್ಕಾಚಾರ, ಮಾನಸಿಕ ಮತ್ತು ಆಕ್ರಮಣಕಾರಿ ನೀತಿ ಪ್ರಯೋಗಿಸುವವರ ಹಿಮ್ಮೆಟ್ಟಿಸುವ ಅಗತ್ಯವಿದೆ. ಇದಕ್ಕಾಗಿ ಅರ್ಜಿದಾರರು(ಬ್ಯಾನರ್ಜಿ) 2 ವಾರಗಳಲ್ಲಿ 5 ಲಕ್ಷ ರು. ಅನ್ನು 2 ವಾರದೊಳಗೆ ಪಶ್ಚಿಮ ಬಂಗಾಳ ಬಾರ್‌ ಕೌನ್ಸಿಲ್‌ನಲ್ಲಿ ಠೇವಣಿ ಇಡಬೇಕು’ ಎಂದು ಹೇಳಿದ್ದಾರೆ.

click me!