
ಕೋಲ್ಕತಾ(ಮಾ.09): ಪ್ರಧಾನಿ ನರೇಂದ್ರ ಮೋದಿ ಚಾಯ್‌ವಾಲಾ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ ಇದೇ ಚಾಯ್‌ವಾಲಾ ಇಮೇಜ್ ಬಿಜೆಪಿ ಭಾರಿ ಯಶಸ್ಸು ತಂದುಕೊಟ್ಟಿದೆ. ಇದೀಗ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಚಾಯ್‌ವಾಲಿ ಆಗಿ ಗಮನಸೆಳೆದಿದ್ದಾರೆ.
ಮಮತಾಗೆ ಮತ್ತೆ ಶಾಕ್: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ನಂದಿಗ್ರಾಮದಲ್ಲಿ ಮತದಾರರನ್ನು ಸೆಳೆಯಲು ಮಮತಾ ಭರ್ಜರಿ ಕಸರತ್ತು ಆರಂಭಿಸಿದ್ದಾರೆ. ನಂದಿಗ್ರಾಮದಲ್ಲಿ ರೋಡ್ ಶೋ, ಪ್ರಚಾರದ ಬಳಿಕ ಟಿ ಶಾಪ್‌ಗೆ ತೆರಳಿದ ಮಮತಾ, ಸ್ವತಃ ಚಹಾ ಮಾಡಿದ್ದಾರೆ.
ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ
ಮಮತಾ ಬ್ಯಾನರ್ಜಿ ಕೈಯಾರೆ ಚಹಾ ಮಾಡಿ ತಮ್ಮ ಬೆಂಬಲಿಗರು, ತಮ್ಮ ಜೊತೆ ಬಂದವರಿಗೆ ಹಂಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀದಿ ಸರ್ಕಸ್ ಇಲ್ಲಿಗೆ ಮುಗಿದಿಲ್ಲ, ದಿನಸಿ ಅಂಗಡಿಗೆ ತೆರಳಿದ ಮಮತಾ ಬ್ಯಾನರ್ಜಿ ಮಗುವನ್ನು ಎತ್ತಿ ಮುದ್ದಾಡಿದ್ದಾರೆ.
ಮಮತಾ ಬ್ಯಾನರ್ಜಿ ಈ ಕಸರತ್ತಿಗೆ ಜೈಕಾರ ಜೊತೆಗೆ ಟೀಕೆಗಳು ಬಂದಿದೆ. ಮೋದಿ ಹಾಗೆ ಚಾಯ್ ಪೇ ಚರ್ಚಾ, ಚಾಯ್‌ವಾಲಿ ಆಗೋ ಮೂಲಕ ಮತ ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ