ಮನ್‌ಮೋಹನ್ ಸಿಂಗ್ 2.0 ವರ್ಶನ್ ಖರ್ಗೆ, ನೂತನ ಅಧ್ಯಕ್ಷರ ಟೀಕಿಸಿದ ನಾಯಕನಿಗೆ ಗೇಟ್‌ಪಾಸ್!

By Suvarna NewsFirst Published Oct 21, 2022, 9:37 PM IST
Highlights

ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಮಲ್ಲಿಕಾರ್ಜುನ ಖರ್ಗೆಯನ್ನು ಟೀಕಿಸಿದ ಹಿರಿಯ ನಾಯಕಿಗೆ ಪಕ್ಷದಿಂದ ಗೇಟ್‌ಪಾಸ್ ನೀಡಲಾಗಿದೆ.
 

ಚೆನ್ನೈ(ಅ.21): ಕಾಂಗ್ರೆಸ್ ಪಕ್ಷಕ್ಕೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಶಶಿ ತರೂರ್ ವಿರುದ್ಧ ಭರ್ಜರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಖರ್ಗೆ ಆಯ್ಕೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್ 26 ರಂದು ಖರ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಯುಪಿಎ ಮೈತ್ರಿ ಪಕ್ಷವಾಗರುವ ದ್ರಾವಿಡ್ ಮುನ್ನೇತ್ರ ಕಳಗಂ(DMK) ಹಿರಿಯ ನಾಯಕ ಆರ್‌ಎಸ್ ರಾಧಾಕೃಷ್ಣನ್ ನೂತನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯನ್ನೇ ಟೀಕಿಸಿದ್ದರು. ಮಲ್ಲಿಕಾರ್ಜುನ್ ಖರ್ಗೆ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಎರಡನೇ ವರ್ಶನ್ ಎಂದು ಟೀಕಿಸಿದ್ದಾರೆ. ಟ್ವೀಟ್ ಮೂಲಕ ಈ ಟೀಕೆ ಪೋಸ್ಟ್ ಮಾಡಿದ ಬೆನ್ನಲ್ಲೇ ಡಿಎಂಕೆ ಪಕ್ಷದಿಂದ ಆರ್‌ಎಸ್ ರಾಧಾಕೃಷ್ಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಎಲ್ಲಾ ನಿಯಂತ್ರಣ ಸೋನಿಯಾ ಗಾಂಧಿ ಕೈಯಲ್ಲಿತ್ತು ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಸಿಂಗ್ ಮೌನಿ ಪ್ರಧಾನಿ, ಗಾಂಧಿ ಕುಟುಂಬದ ಕೈಯಲ್ಲಿತ್ತು ರಿಮೋಟ್ . ಇದೀಗ ಖರ್ಗೆ ಅಧ್ಯಕ್ಷರಾದರೂ ಗಾಂಧಿ ಕುಟಂಬದಲ್ಲೇ ರಿಮೂಟ್ ಕಂಟ್ರೋಲ್ ಇರಲಿದೆ ಎಂಬ ಅರ್ಥದಲ್ಲಿ ರಾಧಾಕೃಷ್ಣನ್ ಟ್ವೀಟ್ ಮಾಡಿದ್ದರು. ಇದಕ್ಕೆ ಮನ್‌ಮೋಹನ್ ಸಿಂಗ್ ಅವರ ಎರಡನೇ ವರ್ಶನ್ ಖರ್ಗೆ ಎಂದಿದ್ದರು. 

 

ಕಾಂಗ್ರೆಸ್‌ ಮುಳಗುವಾಗ ಖರ್ಗೆ ಕೈಯಲ್ಲಿ ಸ್ಟಿಯರಿಂಗ್‌: ಸಿಎಂ ಬೊಮ್ಮಾಯಿ

ಈ ಟ್ವೀಟ್ ಮಾಡಿದ ಬೆನ್ನಲ್ಲೇ ಡಿಎಂಕೆ ಪಾರ್ಟಿ ಪ್ರಧಾನ ಕಾರ್ಯದರ್ಶಿ ಎಸ್ ದುರೈಮುರುಗನ್ ಈ ನಿರ್ಧಾರ ಘೋಷಿಸಿದ್ದಾರೆ. ಪಕ್ಷದ ನಿಯಮ ಉಲ್ಲಂಘಿಸಿದ್ದಾರೆ. ಪಘದೊಳಗೆ ಅಶಿಸ್ತಿನಿಂದ ವರ್ತಿಸಿದ್ದಾರೆ. ಹೀಗಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಎಲ್ಲಾ ಜವಾಬ್ಜಾರಿಯಿಂದ ಹಾಗೂ ಪ್ರಾಥಮಿ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದಿದ್ದಾರೆ.

ಖರ್ಗೆ ಪ್ರಮಾಣ ಕಾರ್ಯಕ್ರಮಕ್ಕೆ ರಾಹುಲ್‌ 
ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಲ್ಲಿಕಾರ್ಜುನ ಖರ್ಗೆ ಅವರ ಅ.26ರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಹುಲ್‌ ಗಾಂಧಿ ಭಾಗಿಯಾಗಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಅ.24ರಿಂದ 26ರವರೆಗೆ ಯಾತ್ರೆಗೆ ರಜೆ ಘೋಷಿಸಲಾಗಿದೆ. ಹಾಗಾಗಿ ರಾಹುಲ್‌ ವೇಳೆ ದೆಹಲಿಗೆ ತೆರಳಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅ.27ರಿಂದ ಮತ್ತೆ ಯಾತ್ರೆ ಪುನಾರಂಭವಾಗಲಿದ್ದು, ರಾಹುಲ್‌ ಭಾಗಿಯಾಗಲಿದ್ದಾರೆ. 22 ವರ್ಷಗಳ ಬಳಿಕ ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ಕೈಗೊಂಡಿರುವ ಪಾದಾಯಾತ್ರೆಯಲ್ಲಿ ನಾಯಕ ರಾಹುಲ್‌ ಗಾಂಧಿ ಆರಂಭದಿಂದಲೂ ಪ್ರತಿದಿನ ಭಾಗಿಯಾಗಿದ್ದಾರೆ. ರಾಹುಲ್‌ ಅವರ ನೇತೃತ್ವದಲ್ಲಿ ಸೆ.7ರಂದು ಪಾದಯಾತ್ರೆ ಆರಂಭವಾಗಿತ್ತು.

ಖಡಕ್‌ ಖರ್ಗೆ ಮುಂದಿದೆ 5 ಕಟ್ಟರ್‌ ಸವಾಲು!

ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಹಿರಿಯ ರಾಜಕೀಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ನೂತನ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಸರಗೂರಿನಲ್ಲಿ ವಿವಿಧ ಸಂಘಟನೆಗಳು, ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗೂಡಿ ಸಂಭ್ರಮಾಚರಿಸಿದರು.
 

click me!