ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್‌ ಟಚ್; 372.13 ಕೋಟಿ ವೆಚ್ಚ ಮೀಸಲು

By Sathish Kumar KHFirst Published Feb 23, 2024, 12:17 PM IST
Highlights

ನೈರುತ್ಯ ರೈಲ್ವೆ ವಿಭಾಗದಿಂದ ಅಮೃತ ಭಾರತ್ ನಿಲ್ದಾಣ ಯೋಜನೆಯಡಿ 372 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ, ಮಲ್ಲೇಶ್ವರ, ಕೆಂಗೇರಿ ಸೇರಿ 15 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.

ಬೆಂಗಳೂರು (ಫೆ.23): ಭಾರತೀಯ ರೈಲ್ವೆ ಇಲಾಖೆಯ ಅಮೃತ್ ಭಾರತ್ ಸ್ಟೇಷನ್ ಯೋಜನೆ (Amrit Bharat Station Scheme) ಅಡಿಯಲ್ಲಿ ಕರ್ನಾಟಕದ 12 ರೈಲ್ವೆ ನಿಲ್ದಾಣಗಳು ಸೇರಿ ನೈರುತ್ಯ ರೈಲ್ವೇ ವಿಭಾಗದ 15 ರೈಲು ನಿಲ್ದಾಣಗಳನ್ನು ಸ್ಮಾರ್ಟ್ ನಿಲ್ದಾಣಗಳಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ನೈರುತ್ಯ ರೈಲ್ವೆ ವಿಭಾಗದಿಂದ 372.13 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಹೌದು, ನೈರುತ್ಯ ರೈಲ್ವೆ ವಿಭಾಗದಿಂದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 372.13 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ 12 ರೈಲ್ವೆ ನಿಲ್ದಾಣಗಳು ಸೇರಿದಂತೆ ಒಟ್ಟು 15 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರು ವಿಭಾಗದ 15 ನಿಲ್ದಾಣಗಳನ್ನ ನೈರುತ್ಯ ರೈಲ್ವೆ ವಿಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಫೆ.26ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೇ ನಿಲ್ದಾಣ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ

ಅಭಿವೃದ್ಧಿ ಮಾಡುವ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಎಸ್ಕಲೇಟರ್, ಸ್ಮಾರ್ಟ್ ಪಾರ್ಕಿಂಗ್, ಶೌಚಾಲಯ ಸೇರಿ ವಿವಿಧ  ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ, ರೈಲ್ವೆ ಇಲಾಖೆಗೆ ಅಗತ್ಯವಿರುವ ಇನ್ನಿತರ ಸ್ಮಾರ್ಟ್ ಟನ್‌ ಅನ್ನು ನೀಡಲಾಗುತ್ತದೆ. ಈ ಮೂಲಕ ನೈರುತ್ಯ ರೈಲ್ವೆ ವಿಭಾಗದಲ್ಲಿನ ರೈಲು ನಿಲ್ದಾಣಗಳಿಗೆ ಹೊಸ ರೂಪವನ್ನು ನೀಡಲಾಗುತ್ತದೆ ಎಂದು ನೈರುತ್ಯ ರೈಲ್ವೆ ಡಿಆರ್ ಎಂ ಯೋಗೇಶ್ ಮೋಹನ್ ಅವರು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದರು.

ಯಾವ್ಯಾವ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಆಗಲಿದೆ.

  • ರೈಲ್ವೆ ನಿಲ್ದಾಣಗಳು         -    ಅಭಿವೃದ್ಧಿಗೆ ಬಳಸುವ ವೆಚ್ಚ (ಕೋಟಿ ರೂ.ಗಳಲ್ಲಿ)
  • ಕೆಂಗೇರಿ ರೈಲ್ವೇ ನಿಲ್ದಾಣ - 21 ಕೋಟಿ
  • ಮಲ್ಲೇಶ್ವರ ರೈಲ್ವೇ ನಿಲ್ದಾಣ - 20 ಕೋಟಿ
  • ಕೃಷ್ಣರಾಜಪುರ ರೈಲ್ವೇ ನಿಲ್ದಾಣ - 21.1 ಕೋಟಿ
  • ವೈಟ್ ಫೀಲ್ಡ್ ರೈಲ್ವೇ ನಿಲ್ದಾಣ - 23.3 ಕೋಟಿ
  • ಹೊಸೂರು ರೈಲ್ವೇ ನಿಲ್ದಾಣ - 22.3 ಕೋಟಿ
  • ಮಂಡ್ಯ ರೈಲ್ವೇ ನಿಲ್ದಾಣ - 20.1 ಕೋಟಿ
  • ರಾಮನಗರ ರೈಲ್ವೇ ನಿಲ್ದಾಣ - 21 ಕೋಟಿ
  • ಚನ್ನಪಟ್ಟಣ ರೈಲ್ವೇ ನಿಲ್ದಾಣ - 20.9 ಕೋಟಿ
  • ತುಮಕೂರು ರೈಲ್ವೇ ನಿಲ್ದಾಣ - 24.1 ಕೋಟಿ
  • ಮಾಲೂರು ರೈಲ್ವೇ ನಿಲ್ದಾಣ - 20.4 ಕೋಟಿ
  • ಬಂಗಾರಪೇಟೆ ರೈಲ್ವೇ ನಿಲ್ದಾಣ - 21.5 ಕೋಟಿ
  • ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣ - 21.3 ಕೋಟಿ
  • ಹಿಂದೂಪುರ ರೈಲ್ವೇ ನಿಲ್ದಾಣ - 23.9 ಕೋಟಿ
  • ಧರ್ಮಪುರಿ ರೈಲ್ವೇ ನಿಲ್ದಾಣ - 25.4 ಕೋಟಿ
  • ಕುಪ್ಪಂ ರೈಲ್ವೇ ನಿಲ್ದಾಣ - 17.6 ಕೋಟಿ

 ಶಕ್ತಿ ಯೋಜನೆ ಅವಾಂತರ: ಫ್ರೀ ಬಸ್ ಹತ್ತಿ ನಾಪತ್ತೆಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ!

click me!