
ನವದೆಹಲಿ(ಮೇ.14): ಕೊರೋನಾ ಅಪ್ಪಳಿಸಿದ ಬಳಿಕ ದೇಶದಲ್ಲಿನ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚುಸುವಿಕೆ, ವೈದ್ಯಕೀಯ ಸಲಕರಣೆ ಹೆಚ್ಚುಸುವಿಕೆ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ದೇಶದಲ್ಲೀಗ ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಸಲಕರಣೆ ಕಾರ್ಯನಿರ್ವಹಣೆ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಔರಂಗಬಾದ್ ಸರದಿ. ಅಸಮರ್ಪಕ ಜೋಡಣೆಯಿಂದ ಕೆಲಸ ನಿಲ್ಲಿಸಿದ್ದ ವೆಂಟಿಲೇಟರಗಳನ್ನು ಕೇಂದ್ರ ಸರ್ಕಾರ, ತಾಂತ್ರಿಕ ಸಿಬ್ಬಂದಿಗಳ ನೆರವಿನಿಂದ ಮತ್ತೆ ಕಾರ್ಯಾರಂಭ ಮಾಡುವಂತೆ ಮಾಡಿದೆ.
ಧೂಳು ಹಿಡಿಯುತ್ತಿದೆ ವೆಂಟಿಲೇಟರ್; ಮಾಧ್ಯಮ ವರದಿ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ!.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಮೇಕ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವು ಮಾಧ್ಯಮ ವರದಿ ಮಾಡಿತ್ತು. ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇಷ್ಟೇ ಅಲ್ಲ ಔರಂಗಬಾದ್ ವೈದ್ಯಕೀಯ ಕಾಲೇಜಿನ ವೆಂಟಿಲೇಟರ್ ಸಮಸ್ಯೆ ನಿವಾರಿಸಿದ ಕುರಿತು ಮಾಹಿತಿ ನೀಡಿದೆ.
ಜ್ಯೋತಿ ಸಿಎನ್‌ಸಿ ತಯಾರಿಸಿದ ವೆಂಟಿಲೇಟರ್‌ಗಳನ್ನು ಔರಂಗಾಬಾದ್ ವೈದ್ಯಕೀಯ ಕಾಲೇಜಿಗೆ ಸರಬರಾಜು ಮಾಡಲಾಗಿತ್ತು. ಇದು ಮೇಕ್ ಇನ್ ಇಂಡಿಯಾ ಅಭಿಯಾನದಡಿ ತಯಾರಾದ 150 ಜ್ಯೋತಿ ವೆಂಟಿಲೇಟರ್ ಪೂರೈಸಲಾಗಿದೆ. ಈ ವೆಂಟಿಲೇಟರ್ ಜೋಡಣೆ ಬಳಿಕ ಈ ಕುರಿತು ಎಲ್ಲಾ ವಿವರಣೆ ನೀಡಲಾಗಿತ್ತು.
ಧೂಳು ಹಿಡಿಯುತ್ತಿವೆ ಪಿಎಂ ಕೇರ್ಸ್ ಫಂಡ್‌ನಿಂದ ಖರೀದಿಸಿದ 251 ವೆಂಟಿಲೇಟರ್ಸ್!
ಕಾರ್ಯನಿರ್ವಹಿಸದಿರುವ ವೆಂಟಿಲೇಟರ್‌ಗಳನ್ನು ಜ್ಯೋತಿ ಸಿಎನ್‌ಸಿ ಎಂಜಿನಿಯರ್‌ಗಳು ಹಾಗೂ ರಾಜ್ಯದ ಅಧಿಕಾರಿಗಳು ತಮ್ಮದೇ ಆದ ಜವಾಬ್ದಾರಿಯಿಂದ ಸರಿಪಡಿಸಿದ್ದಾರೆ.
ಎರಡನೆ ಹಂತದಲ್ಲಿ 50 ವೆಂಟಿಲೇಟರ್ 2021 ರ ಏಪ್ರಿಲ್ 23 ರಂದು ಔರಂಗಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೇವಲ 02 ವೆಂಟಿಲೇಟರ್‌ಗಳನ್ನು ಮಾತ್ರ ಅಧಿಕಾರಿಗಳು (ಸಿಗ್ಮಾ ಆಸ್ಪತ್ರೆ) ಸ್ಥಾಪಿಸಿದ್ದಾರೆ. ಈ 02 ವೆಂಟಿಲೇಟರ್‌ಗಳಿಗೆ ಅನುಸ್ಥಾಪನೆ ಮತ್ತು ಆಯೋಗದ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಸ್ಪತ್ರೆ ಅಧಿಕಾರಿಗಳಿಗೆ ನೀಡಿದ್ದಾರೆ.
ಸೇವಾ ಎಂಜಿನಿಯರ್‌ಗಳ ತಂಡವು ಇನ್ನೂ ಆಸ್ಪತ್ರೆಯಲ್ಲಿದೆ ಮತ್ತು ಎನ್‌ಐವಿ ಮೋಡ್ ಹೊಂದಿರುವ ರೋಗಿಯ ಮೇಲೆ ವೆಂಟಿಲೇಟರ್ ಅಳವಡಿಸಿದ ಕೂಡಲೇ, ಅವರು ಇದನ್ನು ಅಲ್ಲಿನ ಆಸ್ಪತ್ರೆ ಅಧಿಕಾರಿಗಳಿಗೆ ಪ್ರದರ್ಶಿಸುವ ಸ್ಥಿತಿಯಲ್ಲಿರುತ್ತಾರೆ. ಪ್ರಸ್ತುತ ವೆಂಟಿಲೇಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಎಂಜಿನೀಯರ್‌ಗಳು ಸದ್ಯ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿ, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ