ವಿಜಯ್ ಸರ್ಕಾರಕ್ಕೆ ಕಪಾಳಮೋಕ್ಷ, ನಾಳೆ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ

Published : Nov 27, 2026, 04:06 PM ISTUpdated : Nov 27, 2026, 04:09 PM IST
Supreme Court Orders Vijay Government to Light the Lamp Tomorrow

ಸಾರಾಂಶ

ಕಾರ್ತಿಕ ದೀಪಂ ವಿವಾದ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ ನೀಡಿದೆ. ದೇವಸ್ಥಾನ ಟ್ರಸ್ಟ್ ವಜಾಗೊಳಿಸಿದ ಕೋರ್ಟ್, ನಾಳೆ ಕಾರ್ತಿಕ ದೀಪ ಬೆಳಗಲು ಸೂಚಿಸಿದೆ. ಹಿಂದೂಗಳ ಹೋರಾಟಕ್ಕೆ ಅತೀ ದೊಡ್ಡ ಗೆಲುವು ಸಿಕ್ಕಿದೆ.

ನವದೆಹಲಿ (ನ.27) ತಮಿಳುನಾಡಿನ ತಿರುಪ್ಪರನಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದಲ್ಲಿ ದೀಪ ಬೆಳಗದೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ವಿಜಯ್ ಸರ್ಕಾಕ್ಕೆ ತೀವ್ರ ಹಿನ್ನಡೆಯಾಗಿದೆ. ನ್ಯಾಯಾಂಗ ನಿಂದನೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆರುಳ್ಮಿಗು ಸುಬ್ರಮಣಿಸ್ವಾಮಿ ದೇವಸ್ಥಾನ ಮಂಡಳಿಯನ್ನು ಅಮಾನತು ಮಾಡಿ ಆದೇಶ ನೀಡಿದೆ. ಇಷ್ಟೇ ಅಲ್ಲ ಶನಿವಾರ (ನ.28) ದೀಪತೂಣ್‌ನಲ್ಲಿ ಕಾರ್ತಿಕ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ನಾಳೆಯೇ ದೀಪ ಬೆಳಗಬೇಕು ಎಂದು ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಅರವಿಂ್ ಕುಮಾರ್ ಹಾಗೂ ವಿಪುಲ್ ಎಂ ಪಂಚೋಲಿ ಪೀಠ ಕಾರ್ತಿಕ ದೀಪಂ ವಿವಾದ ಹಾಗೂ ನ್ಯಾಯಾಂಗ ನಿಂದನೆ ಕುರಿತು ಅರ್ಜಿ ವಿಚಾರಣೆ ನಡೆಸಿ ಐತಿಹಾಸಿಕ ಆದೇಶ ನೀಡಿದೆ. ಉಚ್ಚಿಪಿಳ್ಳೆೈಯಾರ್ ಮಂಟಪದಲ್ಲಿ ಬೆಳಗಿದ ದೀಪದ ಜ್ವಾಲೆ ಬಳಸಿಕೊಂಡು ನವೆಂಬರ್ 28ರಂದು ದೀಪತೂಣ್‌ನಲ್ಲಿ ದೀಪ ಬೆಳಗುವಂತೆ ಆದೇಶ ನೀಡಿದೆ. ದೀಪತೂಣ್ 50 ಮೀಟರ್ ದೂರದಲ್ಲಿ ದರ್ಗಾ ಇರುವ ಕಾರಣ ಕಳೆದ ಬಾರಿಯ ಸ್ಟಾಲಿನ್ ಸರ್ಕಾರ, ಈ ಬಾರಿ ಜೊಸೆಫ್ ವಿಜಯ್ ಸರ್ಕಾರ ದೀಪ ಬೆಳಗದಂತೆ ಶತ ಪ್ರಯತ್ನ ಮಾಡಿ ವಿಫಲಗೊಂಡಿದೆ.

ತಮಿಳುನಾಡು ಪೊಲೀಸರು ವಿಫಲ

ಕೋರ್ಟ್ ಆದೇಶ ಜಾರಿಗೊಳಿಸುವಲ್ಲಿ ತಮಿಳುನಾಡು ಪೊಲೀಸರು ವಿಫಲಗೊಂಡಿದ್ದಾರೆ. ಹೀಗಾಗಿ ಸುಬ್ರಮಣಿಸ್ವಾಮಿ ದೇವಸ್ಥಾನ ಹಾಗೂ ತಿರುಪ್ಪರನಕುಂಡ್ರಂ ಬೆಟ್ಟದ ಭದ್ರತೆಯನ್ನು ಕೇಂದ್ರ ಮೀಸಲು ಪಡೆ(ಸಿಆರ್‌ಪಿಎಫ್)ಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ನಾಳೆ ಸೂಸೂಸ್ತರವಾಗಿ ಕಾರ್ತಿಕ ದೀಪ ಬೆಳಗಲು ತಮಿಳುನಾಡು ಮುಖ್ಯ ಕಾರ್ಯದರ್ಶಿ ಹಾಜರಾಗುವಂತೆ ಸೂಚಿಸಿದೆ. ಕೋರ್ಟ್ ನೀಡುವ ಆದೇಶ ರಾಜ್ಯ, ಅಧಿಕಾರಿಗಳು, ಧಾರ್ಮಿಕ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಉಲ್ಲಂಘಿಸಿದರೆ ಅದನ್ನು ನಾವು ಸರಿಪಡಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

ನ್ಯಾಯಾಂಗ ನಿಂದನೆ ಮೇಲ್ನೋಟಕ್ಕೆ ಸ್ಪಷ್ಟ

ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದ್ದೇಶಪೂರ್ವಕವಾಗಿ ಕಾರ್ತಿಕ ದೀಪ ಬೆಳಗಲಿಲ್ಲ. ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯ ನೀಡುವ ಆದೇಶದಲ್ಲಿ ಚೌಕಾಸಿ ಮಾಡುವಂತಿಲ್ಲ. ಸಂವಿಧಾನ ಪ್ರಕಾರ ಆದೇಶ ಪಾಲನೆ ಮಾಡಬೇಕು. ಆದರೆ ತಮಿಳುನಾಡು ಆದೇಶ ಪಾಲಿಸುವಲ್ಲಿ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಆದೇಶ ಜಾರಿಗೊಳಿಸುವ ಜವಾಬ್ದಾರಿ ತಮಿಳುನಾಡು ಸರ್ಕಾರದ ಮೇಲಿದೆ. ಆದರೆ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗ ಆದೇಶ ಉಲ್ಲಂಘನೆ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಿದೆ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೆಲಿಕಾಂ ಆಯ್ತು, ಈಗ ಜ್ಯೋತಿಷ್ಯ ಕ್ಷೇತ್ರಕ್ಕೂ ರಿಲಯನ್ಸ್ ಎಂಟ್ರಿ; Astrotalk‌ಗೆ ಟಕ್ಕರ್ ಕೊಡಲು ಬಂತು JioAstro
ಅದು ನಿಮ್ಮ ಜವಾಬ್ದಾರಿಯಾಗಿತ್ತು,ಕಾರ್ತಿಕ ದೀಪ ಬೆಳಗದ ವಿಜಯ್ ಸರ್ಕಾರಕ್ಕೆ ಸುಪ್ರೀಂ ತರಾಟೆ