ಪ್ರತಿಭಟನೆ ನಡುವೆ ಮಹತ್ವದ ಹೆಜ್ಜೆ, ಪ್ರತಿಪಕ್ಷ ನಿಯೋಗ ಭೇಟಿ ಮಾಡಲಿದ್ದಾರೆ ರಾಷ್ಟ್ರಪತಿ ಮುರ್ಮು

Published : Oct 09, 2026, 04:07 PM IST
President Murmu Agrees to Meet Opposition Leaders

ಸಾರಾಂಶ

ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಹೋರಾಟ ತೀವ್ರಗೊಂಡಿದೆ. ಇದರ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇಂದು ರಾತ್ರಿ ಪ್ರತಿಪಕ್ಷ ನಿಯೋಗವನ್ನು ಮುರ್ಮು ಭೇಟಿ ಮಾಡುತ್ತಿದ್ದಾರೆ.

ನವದೆಹಲಿ (ಅ.09) ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ ಹಾಗೂ ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಹೋರಾಟಗಳು ತೀವ್ರಗೊಳ್ಳುತ್ತಿದೆ. ಇದರ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಪಕ್ಷಗಳ ನಿಯೋಗ ಭೇಟಿ ಮಾಡುತ್ತಿದ್ದಾರೆ. ಇಂದು (ಅ.09) ರಾತ್ರಿ 8 ಗಂಟೆಗೆ 10 ಮಂದಿಯ ಪ್ರತಿಪಕ್ಷಗಳ ನಿಯೋಗವನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಇಂದು ರಾಷ್ಟ್ರಪತಿ ಭವನಕ್ಕೆ ಪ್ರತಿಭಟನೆ ಮೆರವಣಿಗೆ ಮಾಡಲು ಎಲ್ಲಾ ತಯಾರಿ ನಡಿಸಿತ್ತು. ಇದರ ಬೆನ್ನಲ್ಲೇ ದ್ರೌಪದಿ ಮುರ್ಮು ಪ್ರತಿಪಕ್ಷ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚುನಾವಣಾ ಆಯೋಗ ಮುಖ್ಯಸ್ಥ ಗ್ಯಾನೇಶ್ ಕುಮಾರ್ ರಾಜೀನಾಮೆ ಕುರಿತು ತೀವ್ರ ಪ್ರತಿಭಟನೆ ನಡೆಯುತ್ತಿದೆ. ಒಂದೆಡೆ ಪ್ರತಿಪಕ್ಷಗಳು ಮತ್ತೊಂದೆಡೆ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ದ್ರೌಪದಿ ಮುರ್ಮು ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಪ್ರತಿಪಕ್ಷ ನಿಯೋಗದಲ್ಲಿ ಯಾರೆಲ್ಲಾ ಇದ್ದಾರೆ?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಟಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ 10 ಸದಸ್ಯರು ಈ ನಿಯೋಗದಲ್ಲಿ ಇರಲಿದ್ದಾರೆ.

ಇಂಡಿಯಾ ಒಕ್ಕೂಟ ಪಕ್ಷಗಳು ಗ್ಯಾನೇಶ್ ಕುಮಾರ್ ವಿರುದ್ದ ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಚರ್ಚಿಸಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ದೆಹಲಿಯ ಜಂತರ್ ಮಂತರ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ತಡೆಯುತ್ತಿದ್ದಾರೆ. ಇದರಿಂತ ಮತ್ತಷ್ಟು ಕೆರಳಿರುವ ಪ್ರತಿಪಕ್ಷಗಳು, ರಾಷ್ಟ್ರಪತಿ ಭೇಟಿಗೆ ಸಮಯ ಕೇಳಿತ್ತು. ಇದೀಗ ರಾಷ್ಟ್ರಪತಿ ಭೇಟಿಗೆ ಸಮಯ ನೀಡಿದ್ದು, ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇಂಡಿಯಾ ಒಕ್ಕೂಟದ ಪ್ರತಿಪಕ್ಷಗಳು ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಸಿ ಪ್ರತಿಭಟನೆ ನಡೆಸುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ, ಚುನಾವಣಾ ಆಯೋಗದ ಇತರ ಇಬ್ಬರು ಆಯುಕ್ತರ ವಿರೋಧದ ನಡುವೆ ಎಸ್ಐಆರ್ ನಡೆಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಮಾಧ್ಯಮದ ಪ್ರಕಟವಾದ ವರದಿ ಆಧರಿಸಿ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

“ಮುಂದಿನ ನಿಲ್ದಾಣ ಎಂ ಜಿ ರೋಡ್‌, ಬಾಗಿಲು ಎಡಕ್ಕೆ ತೆರೆಯಲಿದೆ...” ಮೆಟ್ರೋದಲ್ಲಿ ತಾತನ ಧ್ವನಿ ಕೇಳಿದ ಮೊಮ್ಮಗನ ಪ್ರತಿಕ್ರಿಯೆ ವೈರಲ್!
ಒಂದೇ ದಿನಕ್ಕೆ ಹಲವು ಶ್ರೀಮಂತರ ಹಿಂದಿಕ್ಕಿದ ಸುಮೇಶಣ್ಣ, ಖಾತೆಯಲ್ಲಿ 3500 ಕೋಟಿ ರೂಪಾಯಿ