
ಕೊಚ್ಚಿ (ಅ.09) ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಏಷ್ಯಾದ ಶ್ರೀಮಂತರು ಭಾರತದಲ್ಲಿದ್ದಾರೆ. ಈ ದಿಗ್ಗಜರನ್ನು ಹೊರತುಪಡಿಸಿದರೆ 100ಕ್ಕೂ ಹೆಚ್ಚು ಬಿಲೇನಿಯರ್ಸ್ ಭಾರತದಲ್ಲಿದ್ದಾರೆ. ವಿಶೇಷ ಅಂದರೆ ಸೂಪರ್ ಮಾರ್ಕೆಟ್ ಮಾಲೀಕ ಸುಮೇಶ್ ಕುಮಾರ್ ಒಂದೇ ದಿನ ಹಲವು ಶ್ರೀಮಂತರ ಹಿಂದಿಕ್ಕಿ ಬಿಲೇನಿಯರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸುಮೇಶ್ ಕುಮಾರ್ ಉಳಿತಾಯ ಬರೋಬ್ಬರಿ 3500 ಕೋಟಿ ರೂಪಾಯಿ. ಸುಮೇಶ್ ಕುಮಾರ್ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಹೊರಹೊಮ್ಮಿದ್ದಾರೆ.
ಸುಮೇಶ್ ಕುಮಾರ್ ದರ್ಶನಾ ಸೂಪರ್ ಮಾರ್ಕೆಟ್ ಮಾಲೀಕ. ಕೊಚ್ಚಿ ಸಮೀಪದಲ್ಲಿರುವ ಈ ಸೂಪರ್ ಮಾರ್ಕೆಟ್ ಉತ್ತಮ ವ್ಯಾಪಾರ ವಹಿವಾಟಿನಿಂದ ಗುರುತಿಸಿಕೊಂಡಿದೆ. ಸುಮೇಶ್ ಕುಮಾರ್ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶವೊಂದು ಬಂದಿದೆ. ಚೆಕ್ ಮಾಡಿದಾಗ ಅಚ್ಚರಿಯಾಗಿದೆ. 7 ಕೋಟಿ ರೂಪಾಯಿ ಕ್ರೆಡಿಟ್ ಆಗಿದೆ ಎಂಬ ಸಂದೇಶ. ಈ ಸಂದೇಶ ನೋಡಿದ ಬೆನ್ನಲ್ಲೇ ಇತರ ಕೆಲ ಸಂದೇಶಗಳು ಸುರೇಶ್ ಕುಮಾರ್‌ಗೆ ಆಘಾತ ನೀಡಿದೆ. 3.5 ಕೋಟಿ, 10 ಕೋಟಿ ರೂಪಾಯಿ ಸೇರಿದಂತೆ ಹಲವು ರೀತಿಯಲ್ಲಿ ಹಣ ಜಮೆಯಾಗಿದೆ. ಹೀಗಾಗಿ ಖಾತೆ ಬ್ಯಾಲೆನ್ಸ್ ನೋಡಿದ ಸುಮೇಶ್ ಕುಮಾರ್ ಕಂಗಾಲಾಗಿದ್ದಾರೆ. ಕಾರಣ ಖಾತೆಯಲ್ಲಿ 3500 ಕೋಟಿ ರೂಪಾಯಿ ತೋರಿಸಿದೆ.
ಸುಮೇಶ್ ಕುಮಾರ್ ಖಾತೆಯ 3500 ಕೋಟಿ ರೂಪಾಯಿ ಹಲವು ತಳಮಳ ಸೃಷ್ಟಿಸಿದೆ. ಹೀಗಾಗಿ ಸುಮೇಶ್ ಕುಮಾರ್ ತಕ್ಷಣವೇ ತನ್ನ ಬ್ಯಾಂಕ್ ಸಿಬ್ಬಂದಿಗಳ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ನೇರವಾಗಿ ತಮ್ಮ ಬ್ಯಾಂಕ್ ಶಾಕೆಗೆ ತೆರಳಿದ್ದಾರೆ. ಸುಮೇಶ್ ಕುಮಾರ್ ಖಾತೆಯಲ್ಲಿನ ಕೋಟಿ ಕೋಟಿ ರೂಪಾಯಿ ಮಾಹಿತಿ ನೀಡಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿಗಳು ಪರಿಶೀಲಿಸಿ ತಾಂತ್ರಿಕ ಸಮಸ್ಯೆಯಿಂದ 3500 ಕೋಟಿ ರೂಪಾಯಿ ಖಾತೆಯಲ್ಲಿ ತೋರಿಸುತ್ತಿದೆ. ಕೆಲ ಹೊತ್ತಿನಲ್ಲೇ ಸರಿಪಡಿಸುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಕೆಲ ಹೊತ್ತು ಬ್ಯಾಂಕ್ ಖಾತೆ ಲಾಕ್ ಮಾಡುವುದಾಗಿ ಹೇಳಿದ್ದಾರೆ.
ಸಂಜೆ ವೇಳೆಗೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿ ತಾಂತ್ರಿಕ ಸಮಸ್ಯೆ ಬಗೆಹರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸುಮೇಶ್ ಕುಮಾರ್ ತಮ್ಮ ಖಾತೆ ಪರಿಶೀಲಿಸಿದಾಗ ಕೋಟಿ ಕೋಟಿ ರೂಪಾಯಿ ಮಾಯವಾಗಿದೆ. ಆದರೆ ಸುಮೇಶ್ ಕುಮಾರ್ ಆತಂಕ ಇಲ್ಲಿಗೆ ಅಂತ್ಯಗೊಂಡಿಲ್ಲ. ಈಗಾಗಲೇ ತೆರಿಗೆ ಪಾವತಿಸುವ ಸುಮೇಶ್ ಕುಮಾರ್, ಇದೀಗ ದುಬಾರಿ ಟ್ರಾನ್ಸಾಕ್ಷನ್‌ನಿಂದ ಆದಾಯ ತೆರಿಗೆ ಇಲಾಖೆ ನೋಟಿಸ್ ಆತಂಕ ಎದುರಿಸುತ್ತಿದ್ದಾರೆ. ಈ ಕುರಿತು ಬ್ಯಾಂಕ್ ಸಿಬ್ಬಂದಿಗಳು ಯಾವುದೇ ಆತಂಕದ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ