
ಮುಂಬೈ (ಮೇ.9): ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪ್ಯಾಲೆಸ್ತೇನ್ ಪರವಾಗಿ ಇದ್ದ ಪೋಸ್ಟ್‌ಗೆ ಲೈಕ್ ಒತ್ತದ ಕಾರಣಕ್ಕಾಗಿ ಮುಂಬೈನ ಅಗ್ರ ಶಾಲೆಯೊಂದು ತನ್ನ ಪ್ರಿನ್ಸಿಪಾಲ್‌ನ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊನೆ ಮಾಡಿದೆ. ಪ್ಯಾಲೆಸ್ತೇನ್ ಪರವಾಗಿ ಹೋರಾಟ ಮಾಡುತ್ತಿರುವ ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲ್ ದೇಶದ ಮಧ್ಯೆ ಕಳೆದ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. "ನಮ್ಮ ಏಕತೆ ಮತ್ತು ಸಮಗ್ರತೆಯ ನೀತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ' ಎಂದು ಶಾಲೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಗರದ ವಿದ್ಯಾವಿಹಾರ್ ಬಡಾವಣೆಯಲ್ಲಿರುವ ಸೋಮಯ್ಯ ಶಾಲೆ ‘ಪರ್ವೀನ್ ಶೇಖ್ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ನಾವು ಪಾಲಿಸುವ ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವುದು ನಮ್ಮ ಗಮನಕ್ಕೆ ಬಂದಿದೆ' ಎಂದು ಹೇಳಿದೆ.ನಮ್ಮ ಕಳವಳಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಮ್ಯಾನೇಜ್‌ಮೆಂಟ್ ಕಾರ್ಯನಿರ್ವಹಿಸಿದ ಕಾರಣ, ಪರ್ವೀನ್ ಶೇಖ್ ಅವರ ಸೇವೆಯನ್ನು ಕೊನೆ ಮಾಡಲು ಮ್ಯಾನೇಜ್‌ಮೆಂಟ್ ನಿರ್ಧಾರ ಮಾಡಿದ್ದಾಗಿ ತಿಳಿಸಿದೆ.
ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಲವಾಗಿ ಬೆಂಬಲಿಸುತ್ತೇವೆ. ಆದರೆ, ಈ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಬೇಕು ಅನ್ನೋದನ್ನೂ ನಾವು ಬಯಸುತ್ತೇವೆ ಎಂದು ಶಾಲೆ ತಿಳಿಸಿದೆ. ಇನ್ನೊಂದೆಡೆ ಪರ್ವೀನ್ ಶೇಖ್ ತಮ್ಮನ್ನು ವಜಾ ಮಾಡಿದ್ದು ಸಂಪೂರ್ಣವಾಗಿ ಕಾನೂನು ಬಾಹಿರ ಹಾಗೂ ಮ್ಯಾನೇಜ್‌ಮೆಂಟ್ ಕಡೆಯಿಂದ ಅತ್ಯಂತ ಅನಗತ್ಯ ಕ್ರಮ ಎಂದಿದ್ದಾರೆ. ರಾಜಕೀಯ ಪ್ರೇರಿತ ಮ್ಯಾನೇಜ್‌ಮೆಂಟ್ ಕ್ರಮದ ಬಗ್ಗೆ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
"ಶಾಲಾ ಪ್ರಾಂಶುಪಾಲರಾಗಿ ನನ್ನ ಕೆಲಸವು ಅದ್ಭುತವಾಗಿದೆ. ಇಂಥ ಕಾರಣಕ್ಕಾಗಿ ನನ್ನ ವಜಾಗೊಳಿಸುವಿಕೆಯು ತಪ್ಪು ಮತ್ತು ಅನ್ಯಾಯವಾಗಿದೆ" ಎಂದು ಅವರು ಹೇಳಿದ್ದಾರೆ. "ಈ ಕ್ರಮವು ರಾಜಕೀಯ ಪ್ರೇರಿತವಾಗಿರುವಂತೆ ತೋರುತ್ತಿದೆ. ನಾನು ನಮ್ಮ ಕಾನೂನು ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದೇನೆ ಮತ್ತು ನಾನು ಪ್ರಸ್ತುತ ನನ್ನ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದ್ದೇನೆ' ಎಂದು ಹೇಳುವ ಮೂಲಕ ತಮ್ಮ ವಜಾ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್ ಮಾಡಿದ್ಯಾರು? ಉದ್ದೇಶವೇನು..
ಕಳೆದ ವಾರ, ಶಾಲಾ ಆಡಳಿತವು ಶೇಖ್ ಅವರಿಂದ ಲಿಖಿತ ಸ್ಪಷ್ಟೀಕರಣವನ್ನು ಕೇಳಿತ್ತು. ಇಲ್ಲಿಯವರೆಗೂ ಪರ್ವೀನ್ ಶೇಖ್ ಅವರು ಯಾವುದೇ ಉತ್ತರವನ್ನು ನೀಡಿಲ್ಲ ಎಂದು ಹೇಳಿದೆ. ಮಂಗಳವಾರ ಶಾಲಾ ಆಡಳಿತ ನೀಡಿದ ಪ್ರಕಟಣೆಯಲ್ಲಿ ಪರ್ವೀನ್ ಶೇಖ್ ಅವರು ಲಿಖಿತ ಸ್ಪಷ್ಟೀಕರಣ ನೀಡಿದ್ದಾರೆಯೇ? ಇಲ್ಲವೇ ಎನ್ನುವುದನ್ನು ತಿಳಿಸಿಲ್ಲ. 12 ವರ್ಷಗಳಿಂದ ಶಾಲೆಯೊಂದಿಗೆ ಸಂಬಂಧ ಹೊಂದಿರುವ ಪರ್ವೀನ್ ಶೇಖ್, ಏಳು ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು.
ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಕೆಜಿಎಫ್ ಸ್ಟಾರ್ ಯಶ್ ಹೀರೋಯಿನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ