'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'

By Suvarna NewsFirst Published Oct 13, 2021, 4:16 PM IST
Highlights

* ಬ್ರಿಟಿಷರಿಗೆ ಸಾವರ್ಕರ್ ಕ್ಷಮಾದಾನದ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ
* ವೀರ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ
* ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಸೇನಾನಿ ಟೀಕೆ ಸಲ್ಲ
*ಮುಸಲ್ಮಾನರನ್ನು ಯಾವತ್ತು ದ್ವೇಷದ ಭಾವನೆಯಿಂದ ನೋಡಿಲ್ಲ

ನವದೆಹಲಿ, (ಅ 13) 'ಮಹಾತ್ಮ ಗಾಂಧೀಜಿ  (Mahatma Gandhi)ಮಾತಿಗೆ ಬದ್ಧರಾಗಿ ವೀರ ಸಾವರ್ಕರ್ (Veer Savarkar) ಬ್ರಿಟಿಷರ (British) ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ  ರಾಜ್ ನಾಥ್ ಸಿಂಗ್(Rajnath Singh) ಹೇಳಿದ್ದಾರೆ.  ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಅವರು ಅರ್ಜಿ ಸಲ್ಲಿಸಿರಲಿಲ್ಲ. 

ನವದೆಹಲಿ ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ನಾಥ್ ಸಿಂಗ್,  ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಸ್ವಾತಂತ್ರ್ಯ  ಹೋರಾಟಕ್ಕೆ ಸಾವರ್ಕರ್‌ ನೀಡಿದ ಕೊಡುಗೆಯನ್ನು ಟೀಕೆ ಮಾಡುವರನ್ನು ಸಹಿಸಲು ಸಾಧ್ಯವಿಲ್ಲ. ಸಾವರ್ಕರ್ ತೇಜೋವಧೆ ಮಾಡುವುದಕ್ಕೆ ಸುಳ್ಳು ವದಂತಿಯನ್ನೇ ಸತ್ಯ ಎಂದು ನಂಬಿಸುವ ಕೆಲಸವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಇದ್ದರು.  ಮಹಾತ್ಮ ಗಾಂಧೀಜಿ ಹೇಳಿದಂದೆ ವೀರ ಸಾವರ್ಕರ್ ನಡೆದುಕೊಂಡಿದ್ದರು.  ಗಾಂಧೀಜಿ ಸಹ ವಾವರ್ಕರ್ ಅವರನ್ನು ಜೈಲಿನಿಂದ ಬಿಡಸಲು ಕೇಳಿಕೊಂಡಿದ್ದರು. ಗಾಂಧೀಜಿ ಯಾವ ರೀತಿ ಶಾಂತ ರೀತಿಯಲ್ಲಿ ಚಳವಳಿ ಹೋರಾಟ ಮಾಡಿದರೋ ಅದೇ ರೀತಿ ಸಾವರ್ಕರ್ ಸಹ ನಡೆದುಕೊಂಡರು. ಆದರೆ ಅವರ ಇಮೇಜ್ ಹಾಳುಮಾಡುವ ಕೆಲಸವನ್ನು ಮಾಡಿಕೊಂಡು ಬರಲಾಗಿದೆ ಎಂದರು.

ಸಾವರ್ಕರ್ ಹಿಂದುತ್ವದಲ್ಲಿ ಅಪಾರ ನಂಬಿಕೆ ಉಳ್ಳವರಾಗಿದ್ದರು ಜತೆಗೆ ಅವರೊಬ್ಬ ವಾಸ್ತವವಾದಿ. ಏಕತೆಗೆ ಸಾಧನವಾಗಿ ಎಲ್ಲರ ಸಂಸ್ಕೃತಿ ಒಂದೇ ತೆರನಾಗಿರಬೇಕು ಎಂದು ನಂಬಿದ್ದರು. ಅವರನ್ನು ನಾಝಿ  ಇಲ್ಲವೇ ಫ್ಯಾಸಿಸ್ಟ್ ಎಂಬುದಾಗಿಯೂ ಬಿಂಬಿಸಲಾಗುತ್ತಿದ್ದು ಯಾವ ವಿಚಾರ ನಂಬಲು ಅರ್ಹವಲ್ಲ ಎಂದು ಹೇಳಿದರು.

ವೀರ ಸಾವರ್ಕರ್ ಸ್ಮರಿಸಿದ ಪ್ರಧಾನಿ

ಈ ವೇಳೆ ಮಾತನಾಡಿದ ಮೋಹನ್ ಭಾಗವತ್, ಜನರನ್ನು ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ಒಂದುಗೂಡಿಸಲು ಸಾವರ್ಕರ್ ಬಯಸಿದ್ದರು.  ಒಂದೇ ತಾಯಿಯ ಮಕ್ಕಳಾಗಿರುವ ನಮ್ಮ ನಡುವೆ  ಭಿನ್ನಾಭಿಪ್ರಾಯಗಳು ಏಕೆ? ಎಂದು ಸದಾ ಪ್ರಶ್ನೆ ಮಾಡುತ್ತಿದ್ದರು.  ನಾವೆಲ್ಲರೂ ದೇಶಕ್ಕಾಗಿ ಒಂದಾಗಿ ಹೋರಾಟ ಮಾಡೋಣ ಎಂಬುದೇ ಸಾವರ್ಕರ್ ಹಿಂದುತ್ವವಾಗಿತ್ತು ಎಂದು ಭಾಗವತ್ ಹೇಳಿದರು.

ಯಾವ ಸಂದರ್ಭದಲ್ಲಿಯೂ ಸಾವರ್ಕರ್ ಮುಸ್ಲಿಮರ ವೈರಿಯಾಗಿ ನಡೆದುಕೊಳ್ಳಲಿಲ್ಲ. ಉರ್ದು ಭಾಷೆಯಲ್ಲಿ ಅವರು ಅನೇಕ ಗಝಲ್ ಬರೆದಿದ್ದಾರೆ. ಮುಸ್ಲಿಮರನ್ನು, ಉರ್ದುವನ್ನು ದ್ವೇಷ ಮಾಡುತ್ತಿರಲಿಲ್ಲ.  ದೇಶಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ , ಅಂಬೇಡ್ಕರ್ ಅವರನ್ನು ಎಲ್ಲರೂ ಆರಾಧಿಸುತ್ತಾರೆ. ಅದೇ ರೀತಿ ದೇಶಕ್ಕೆ ಕೊಡುಗೆ ನೀಡಿದ ಸಾವರ್ಕರ್  ಅವರನ್ನು ಟೀಕೆ ಮಾಡುತ್ತಾರೆ ಎಂದು ಭಾಗವತ್ ಹೇಳಿದರು.

 

click me!